ನವದೆಹಲಿ: ಥೈರಾಯ್ಡ್ (Thyroid) ಒಂದು ರೀತಿಯ ಜೀವನಶೈಲಿಯ (Lifestyle Disease) ಸಮಸ್ಯೆಯಾಗಿದ್ದು, ಇದರಿಂದ ಒಬ್ಬ ವ್ಯಕ್ತಿಯು ಸ್ಥೂಲಕಾಯ ಸಮಸ್ಯೆಗೆ (Weight Gain) ಒಳಗಾಗುತ್ತಾನೆ.ಥೈರಾಯ್ಡ್ ಸಮಸ್ಯೆ ಇಂದಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ದೇಹದಲ್ಲಿನ ಅಯೋಡಿನ್ ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮಹಿಳೆಯರ ತೂಕವು ಹೆಚ್ಚಾಗಲು ಪ್ರಾರಂಭವಾಗುತ್ತದೆ, ಜೊತೆಗೆ ದೇಹವು ದುರ್ಬಲಗೊಳ್ಳುತ್ತದೆ. ಈ ಸಮಯದಲ್ಲಿ, ಬೊಜ್ಜು ದೇಹದೊಳಗೆ ಹೀರಲ್ಪಡುತ್ತದೆ, ಇದು ಅನೇಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಈ ಸಮಸ್ಯೆಯಿಂದ ಪಾರಾಗಲು, ತುಳಸಿ ಎಲೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಇದಲ್ಲದೆ, ತುಳಸಿ (Tulsi) ಮತ್ತು ಅಲೋವೆರಾವನ್ನು (Aloe Vera) ಒಟ್ಟಿಗೆ ಬಳಸುವುದರಿಂದ ಈ ರೋಗವನ್ನು ನಿಯಂತ್ರಣದಲ್ಲಿದಬಹುದು. ಹಾಗಾದರೆ ಈ ಎರಡರ ಬಳಕೆಯಿಂದ ಥೈರಾಯ್ಡ್ (Thyroid Patient Treatment) ಸಮಸ್ಯೆ ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ತುಳಸಿ ಎಲೆಗಳಿಂದ ಈ ರೀತಿ ಲಾಭ ಸಿಗುತ್ತದೆ
ತುಳಸಿ ಎಲೆಗಳನ್ನು (Tulsi Beneficial For Thyroid Patient Treatment) ಸೇವಿಸಿದರೆ, ಹಲವಾರು ಸಮಸ್ಯೆಗಳ ಜೊತೆಗೆ, ಥೈರಾಯ್ಡ್‌ನ ಅನೇಕ ರೋಗಲಕ್ಷಣಗಳನ್ನು ನಿವಾರಿಸಬಹುದು. ತುಳಸಿ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಉರಿಯೂತದ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿವೆ, ಇದು ಥೈರಾಯ್ಡ್ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಹಳ ಪರಿಣಾಮಕಾರಿ ಸಾಬೀತಾಗುತ್ತದೆ.
ಇದನ್ನೂ ಓದಿ-ದಿನ ನಿತ್ಯ ಈ ಎಲೆಯನ್ನು ತಿಂದರೆ ಕೇವಲ 8 ದಿನಗಳಲ್ಲಿ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್
ತುಳಸಿ-ಎಲೋವೆರಾ ಜ್ಯೂಸ್ ನಿಂದ ಥೈರಾಯ್ಡ್ ಸಮಸ್ಯೆ ನಿವಾರಣೆ
ಥೈರಾಯ್ಡ್ ಸಮಸ್ಯೆ ನಿವಾರಿಸಲು ಮೊದಲು ತುಳಸಿ ಎಳೆಗಳ ರಸವನ್ನು ತೆಗೆಯಿರಿ ಮತ್ತು ಅದನ್ನು ಒಂದು ಚಮಚ ಅಲೋವೆರಾ (Aloe Vera In Thyroid Patient Treatment) ರಸದೊಂದಿಗೆ ಬೆರೆಸಿ, ನಂತರ ಅದನ್ನು ಸೇವಿಸಿ. ಇದರಿಂದ ಥೈರಾಯ್ಡ್ ಸಮಸ್ಯೆ ನಿವಾರಣೆಯಾಗಬಹುದು. ಇದಲ್ಲದೆ, ನೀವು ತುಳಸಿ ಚಹಾವನ್ನು ಸೇವಿಸಬಹುದು. ಹಾಲು ಹಾಕದೆ ಚಹಾದಲ್ಲಿ ತುಳಸಿ ಎಲೆಗಳನ್ನು ಹಾಕಿ ಕುಡಿಯಿರಿ. ಇದು ಥೈರಾಯ್ಡ್ ನಿಯಂತ್ರಣಕ್ಕೂ ಕಾರಣವಾಗುತ್ತದೆ.
ಇದನ್ನೂ ಓದಿ-Coconut Oil Benefits: ಹೊಳೆಯುವ ತ್ವಚೆಗಾಗಿ ರಾತ್ರಿ ಮಲಗುವ ಮುನ್ನ ಈ ಎಣ್ಣೆ ಹಚ್ಚಿ ನೋಡಿ...
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಹಾಗೂ ಮನೆಮದ್ದು ಸಾಮಾನ್ಯ ಜ್ಞಾನವನ್ನು ಆಧರಿಸಿವೆ. ಅನುಸರಿಸುವುದಕ್ಕೂ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.