ಬೆಂಗಳೂರು : ಮಾಂಸ, ಮೊಟ್ಟೆ ಮತ್ತು ಮೀನುಗಳು ಪ್ರೋಟೀನ್ನ ಸಮೃದ್ಧ ಮೂಲಗಳಾಗಿವೆ. ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ, ಇವೂ ಪೌಷ್ಟಿಕಾಂಶದ ಅವಶ್ಯಕತೆಯು ಪೂರೈಸಲ್ಪಡುತ್ತದೆ. ಆದರೆ ಸಸ್ಯಾಹಾರಿಗಳು ಈ ವಸ್ತುಗಳನ್ನು ತಿನ್ನಲು ಸಾಧ್ಯವಿಲ್ಲ. ಹಾಗಾಗಿ ಅವರು ಪರ್ಯಾಯಗಳನ್ನು ಹುಡುಕಬೇಕಾಗುತ್ತದೆ. ಸಸ್ಯಾಹಾರಿಗಳು ಕೆಲವು ಹಣ್ಣುಗಳನ್ನು ತಿನ್ನುವ ಮೂಲಕ ದೇಹದ ಪ್ರೋಟೀನ್ ಕೊರತೆಯನ್ನು ನೀಗಿಸಬಹುದು. ಇದಕ್ಕಾಗಿ ಮಾಂಸಾಹಾರವನ್ನೇ ಅವಲಂಬಿಸಬೇಕಾಗಿಲ್ಲ.
ಪ್ರೋಟೀನ್ ಭರಿತ ಹಣ್ಣುಗಳು :
1. ಕಿತ್ತಳೆ :
ಕಿತ್ತಳೆ ವಿಟಮಿನ್ ಸಿಯ ಸಮೃದ್ದ ಮೂಲ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸ್ನಾಯುಗಳನ್ನು ಬಲಪಡಿಸುವ ಪ್ರೋಟೀನ್ ಅನ್ನು ಸಹ ಹೊಂದಿದೆ. ಈ ಎಲ್ಲಾ ಕಾರಣಗಳಿಂದ ಕಿತ್ತಳೆಯನ್ನು ನಿಯಮಿತವಾಗಿ ಸೇವಿಸಿಬೇಕು.
ಇದನ್ನೂ ಓದಿ : ಯಾವುದು ಆರೋಗ್ಯಕ್ಕೆ ಒಳ್ಳೆಯದು ಬಿಳಿ ಪೇರಳೆಯೋ ? ಕೆಂಪು ಪೇರಳೆಯೋ ?
2. ಪೇರಳೆ :
ಸಾಮಾನ್ಯವಾಗಿ ಪೇರಳೆಯನ್ನು ಜೀರ್ಣಕ್ರಿಯೆಗೆ ಪ್ರಮುಖ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಆದರೆ, ಇದರಲ್ಲಿ ಪ್ರೋಟೀನ್ ಕೂಡಾ ಭರಪೂರವಾಗಿದೆ. ಕತ್ತರಿಸಿದ ಒಂದು ಬಟ್ಟಲು ಪೇರಳೆಯಲ್ಲಿ ಸುಮಾರು 4.2 ಗ್ರಾಂ ಪ್ರೋಟೀನ್ ಕಂಡುಬರುತ್ತದೆ.
3. ಆವಕಾಡೊ :
ಆವಕಾಡೊವನ್ನು ಪ್ರೋಟೀನ್ನ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ, ಒಂದು ಬೌಲ್ ಆವಕಾಡೊ ಸೇವಿಸಿದರೆ, ದೇಹವು ಸುಮಾರು 4 ಗ್ರಾಂ ಪ್ರೋಟೀನ್ ಅನ್ನು ಪಡೆಯುತ್ತದೆ. ಇದರಲ್ಲಿ ಹಲವು ಪೌಷ್ಟಿಕ ಅಂಶಗಳು ಕೂಡಾ ಇವೆ.
ಇದನ್ನೂ ಓದಿ : ಈ ಎರಡು ವಸ್ತುಗಳನ್ನು ಬಳಸಿದರೆ ಒಂದೇ ಗಂಟೆಯಲ್ಲಿ ಬಿಳಿ ಕೂದಲು ಕಪ್ಪಾಗುವುದು ! ಒಮ್ಮೆ ಟ್ರೈ ಮಾಡಿ
4. ಕಿವಿ :
ಕಿವಿಯ ರುಚಿ ಎಲ್ಲರನ್ನೂ ಆಕರ್ಷಿಸುತ್ತದೆ. ಹಾಗೆಯೇ ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಒಂದು ಕಿವಿ ತಿನ್ನುವುದರಿಂದ ಸುಮಾರು 2.1 ಗ್ರಾಂ ಪ್ರೋಟೀನ್ ಸಿಗುತ್ತದೆ. ಇದಲ್ಲದೇ ಇನ್ನೂ ಹಲವು ಪೋಷಕಾಂಶಗಳು ಕೂಡಾ ದೇಹವನ್ನು ಸೇರುತ್ತವೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.