ತೂಕವನ್ನು ಹೆಚಿಸಲು ಸಹಾಯ ಮಾಡುವ ಅತ್ಯುತ್ತಮ ಆಹಾರಗಳಿವು..!

Weight Gain Tips : ತೂಕವನ್ನು ಹೆಚ್ಚಿಸುವುದು ಕೆಲವು ಜನರಿಗೆ ಒಂದು ಸವಾಲಿನಂತೆ ಪರಿಣಮಿಸಿರುತ್ತದೆ. ತೂಕವನ್ನು ಸರಿಯಾದ ವಿಧಾನದೊಂದಿಗೆ, ಆರೋಗ್ಯಕರ ಮತ್ತು ಸಮರ್ಥನೀಯ ರೀತಿಯಲ್ಲಿ ಪಡೆಯಬೇಕು, ಪರ್ಯಾಯ ಮಾರ್ಗಗಳನ್ನು ಹುಡುಕಿದರೆ ಮತ್ತು ಅದನ್ನು ವೈದ್ಯರ ಮಾರ್ಗದರ್ಶನವಿಲ್ಲದೇ ಪ್ರಯೋಹಗಿಸಿದರೆ ಅದು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ.

Written by - Zee Kannada News Desk | Last Updated : Apr 25, 2023, 02:02 PM IST
  • ಹಾಲಿನಲ್ಲಿರುವ ಎರಡು ರೀತಿಯ ಪ್ರೋಟೀನ್‌ಗಳು ಸ್ನಾಯುಗಳ ಬೆಳವಣಿಗೆ ಸಹಾಯ ಮಾಡುತ್ತವೆ.
  • ಇದು ತೂಕವನ್ನು ಪಡೆಯಲು ಬಯಸುವವರಿಗೆ ಅವಶ್ಯವಾದುದಾಗಿದೆ.
  • ಬೆಣ್ಣೆಯು ತೂಕವನ್ನು ಹೆಚ್ಚಿಸಲು ಸಹಾಯಕವಾಗಿದೆ
ತೂಕವನ್ನು ಹೆಚಿಸಲು ಸಹಾಯ ಮಾಡುವ ಅತ್ಯುತ್ತಮ ಆಹಾರಗಳಿವು..!  title=

Home Remedies for weight Gain : ಉತ್ತಮ ವಿಧಾನಗಳಿಂದ ತೂಕವನ್ನು ಹೆಚ್ಚಿಸಲು ವ್ಯಾಯಾಮ, ಸಮತೋಲಿತ ಆಹಾರವನ್ನು ಸೇವಿಸುವ ಅವಶ್ಯವಿರುತ್ತದೆ. ಹಾಗಾದರೇ ತೂಕವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುವ ಉತ್ತಮ ವಿಧಾನಗಳು ಯಾವವು ಎನ್ನುವುದನ್ನು ತಿಳಿದುಕೊಳ್ಳೋಣ. 

ಹಾಲು
ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಇತರ ಅಗತ್ಯ ಪೋಷಕಾಂಶಗಳ ಸಮೃದ್ಧ ಮೂಲವಾಗಿರುವ ಹಾಲು ತೂಕ ಹೆಚ್ಚಿಸುವ ಆಹಾರದಲ್ಲಿ ಒಂದಾಗಿದೆ. ಹಾಲಿನಲ್ಲಿರುವ ಎರಡು ರೀತಿಯ ಪ್ರೋಟೀನ್‌ಗಳು  ಸ್ನಾಯುಗಳ ಬೆಳವಣಿಗೆ ಸಹಾಯ ಮಾಡುತ್ತವೆ. ಇದು ತೂಕವನ್ನು ಪಡೆಯಲು ಬಯಸುವವರಿಗೆ ಅವಶ್ಯವಾದುದಾಗಿದೆ. ಅಲ್ಲದೇ ಹಾಲಿನಲ್ಲಿರುವ ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಬಲಪಡಿಸಲು ಸಹಾಯಮಾಡುತ್ತದೆ. 

ಇದನ್ನೂ ಓದಿ-ದಾಳಿಂಬೆ ಹಣ್ಣಿನ ಪ್ರಯೋಜನಗಳೇನು ಗೊತ್ತಾ..?

ಕಾಳುಗಳು 
ಕಾಳುಗಳು ಪೌಷ್ಟಿಕವಾದ ಆಹಾರವಾಗಿದ್ದು ಅದು ತೂಕ ಹೆಚ್ಚಿಸುವ ಆಹಾರಕ್ಕೆ ಉತ್ತಮ ಉದಾಹರಣೆಯಾಗಿದೆ. ಕಾಳುಗಳಲ್ಲಿ ಆರೋಗ್ಯಕರ ಕೊಬ್ಬುಗಳು, ಪ್ರೊಟೀನ್ ಮತ್ತು ಫೈಬರ್, ಹಾಗೆಯೇ ವಿವಿಧ ಜೀವಸತ್ವಗಳು ಅಧಿಕವಾಗಿವೆ. ಅವುಗಳು ಅನುಕೂಲಕರವಾದ ಆಹಾರವಾಗಿದ್ದು, ಸುಲಭವಾಗಿ ಊಟದಲ್ಲಿ ಸೇರಿಸಿಕೊಳ್ಳಬಹುದು.

ಬೆಣ್ಣೆ
ಬೆಣ್ಣೆಯು ತೂಕವನ್ನು ಹೆಚ್ಚಿಸಲು ಸಹಾಯಕವಾಗಿದೆ ಏಕೆಂದರೆ ಇದು ಹೆಚ್ಚಿನ ಪ್ರಮಾಣದ ಆರೋಗ್ಯಕರ ಕೊಬ್ಬುಗಳು, ಪ್ರೊಟೀನ್ ಮತ್ತು ಫೈಬರ್ಗಳನ್ನು ಹೊಂದಿರುತ್ತದೆ. ಬೆಣ್ಣೆಯಲ್ಲಿರುವ ಕೊಬ್ಬುಗಳು ತೂಕವನ್ನು ಹೆಚ್ಚಿಸಲು ಸಹಾಯವಾಗುತ್ತವೆ.

ಇದನ್ನೂ ಓದಿ-ಮಧುಮೇಹ ಸೇರಿದಂತೆ ಮೊಳಕೆಯೊಡೆದ ಧಾನ್ಯಗಳು ಆರೋಗ್ಯಕ್ಕೆ ಶ್ರೇಷ್ಠ..! ಇಲ್ಲಿದೆ ನೋಡಿ ವಿವರ

ಮೊಟ್ಟೆಗಳು
ಮೊಟ್ಟೆಗಳು ಪ್ರೋಟಿನ್‌ನ ಉತ್ತಮ ಮೂಲಗಳಾಗಿವೆ. ಮೊಟ್ಟೆಗಳು ವಿಟಮಿನ್ ಎ, ಡಿ, ಇ ಮತ್ತು ಬಿ ಜೀವಸತ್ವಗಳು, ಹಾಗೆಯೇ ಕಬ್ಬಿಣಅಂಶಗಳನ್ನು ಒಳಗೊಂಡಿದ್ದು, ಇವು ತೂಕವನ್ನು ಹೆಚ್ಚಿಸಲು ತ್ವರಿತವಾಗಿ ಸಹಾಯ ಮಾಡುತ್ತವೆ. 

ಚೀಸ್‌ 
ಕೆಲವು ಬೇಕರಿ ಉತ್ಪನ್ನಗಳಿಗೆ ಹೋಲಿಸಿದರೆ ಚೀಸ್‌ ಹೆಚ್ಚಿನ ಕ್ಯಾಲೋರಿಯನ್ನು ಹೊಂದಿದ್ದು, ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೇ ಚೀಸ್ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಇತರ ಅಗತ್ಯ ಪೋಷಕಾಂಶಗಳ ಉತ್ತಮ ಮೂಲವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News