ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಅವಶ್ಯವಾಗಿ ತಿನ್ನಿಸಬೇಕು ಈ ಐದು ಸೂಪರ್‌ಫುಡ್‌

Superfoods For Children:ಮಕ್ಕಳ ಬೆಳವಣಿಗೆಗೆ ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್‌ಗಳಂತಹ ಪೋಷಕಾಂಶಗಳ ಅಗತ್ಯವಿದೆ.  ಮಕ್ಕಳಿಗೆ ಆಹಾರ ನೀಡುವ ಮೊದಲು ಮಗುವಿನ ಒಟ್ಟಾರೆ ಬೆಳವಣಿಗೆಗೆ ನಿಯಮಿತ ಆಹಾರದಲ್ಲಿ ಯಾವ ಸೂಪರ್‌ಫುಡ್‌ಗಳನ್ನು ಸೇರಿಸಬಹುದು ಎನ್ನುವುದು ತಿಳಿದಿರಬೇಕು.   

Written by - Ranjitha R K | Last Updated : Nov 14, 2022, 02:14 PM IST
  • ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಾರೆ.
  • ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುತ್ತೀರಿ.
  • ಮಕ್ಕಳಿಗಾಗಿ ನೀಡಬೇಕು ಸೂಪರ್‌ಫುಡ್‌
ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಅವಶ್ಯವಾಗಿ ತಿನ್ನಿಸಬೇಕು ಈ ಐದು ಸೂಪರ್‌ಫುಡ್‌  title=
Superfoods For Children (file photo)

Superfoods For Children : ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 14 ರಂದು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಾರೆ. ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುತ್ತೀರಿ. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಏನು ಬೇಕು ಅದೆಲ್ಲವನ್ನೂ ಮಾಡುವ ಪ್ರಯತ್ನ ಮಾಡುತ್ತೀರಿ.  ಮಕ್ಕಳ ಬೆಳವಣಿಗೆಗೆ ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್‌ಗಳಂತಹ ಪೋಷಕಾಂಶಗಳ ಅಗತ್ಯವಿದೆ.  ಮಕ್ಕಳಿಗೆ ಆಹಾರ ನೀಡುವ ಮೊದಲು ಮಗುವಿನ ಒಟ್ಟಾರೆ ಬೆಳವಣಿಗೆಗೆ ನಿಯಮಿತ ಆಹಾರದಲ್ಲಿ ಯಾವ ಸೂಪರ್‌ಫುಡ್‌ಗಳನ್ನು ಸೇರಿಸಬಹುದು ಎನ್ನುವುದು ತಿಳಿದಿರಬೇಕು. 

ಮಕ್ಕಳಿಗಾಗಿ ಸೂಪರ್‌ಫುಡ್‌  : 
ಮೊಟ್ಟೆ :
ಮೊಟ್ಟೆ ಅತ್ಯಗತ್ಯ ಸೂಪರ್‌ಫುಡ್‌ಗಳಲ್ಲಿ  ಒಂದು ಎಂದು ಹೇಳಲಾಗುತ್ತದೆ.  ಬೆಳಗಿನ ಉಪಹಾರದಲ್ಲಿ ಮೊಟ್ಟೆಯನ್ನು ತಿನ್ನಲು ಶಿಫಾರಸು ಮಾಡಲಾಗುತ್ತದೆ.  ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್, ವಿಟಮಿನ್-ಬಿ, ವಿಟಮಿನ್-ಡಿ, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಫೋಲಿಕ್ ಆಮ್ಲ ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳನ್ನು ಇದು ಒಳಗೊಂಡಿದೆ.

ಇದನ್ನೂ ಓದಿ : Health Tips: ಹಾಲಿನ ಜೊತೆ ಈ ಎಲೆಯನ್ನು ಮಿಕ್ಸ್ ಮಾಡಿ ಕುಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ಮಾಯವಾಗುತ್ತವೆ!

ಹಾಲು :
ಹಾಲನ್ನು ಸಂಪೂರ್ಣ ಆಹಾರ ಎಂದು ಕರೆಯಲಾಗುತ್ತದೆ. ಮಕ್ಕಳ ಬೆಳವಣಿಗೆಗೆ ಮುಖ್ಯವಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು ಹಾಲು ಹೊಂದಿರುತ್ತದೆ. ಇದರೊಂದಿಗೆ, ದೇಹವು ಕ್ಯಾಲ್ಸಿಯಂ ಮತ್ತು ವಿಟಮಿನ ಗಳನ್ನೂ ಪಡೆಯುತ್ತದೆ, 

ಡ್ರೈ ಫ್ರುಟ್ಸ್  :
ಎಲ್ಲಾ ವಯೋಮಾನದವರಿಗೂ ಡ್ರೈ ಫ್ರುಟ್ಸ್  ಪ್ರಯೋಜನಕಾರಿಯಾಗಿದೆ.  ಆದರೆ ಮಕ್ಕಳಿಗೆ ಡ್ರೈ ಫ್ರುಟ್ಸ್  ತಿನ್ನಿಸುವುದರಿಂದ ಅವರ ಮಾನಸಿಕ ಬೆಳವಣಿಗೆಗೆ ಸಹಾಯವಾಗುತ್ತದೆ. ಇದು ಮೆದುಳನ್ನು ಚುರುಕುಗೊಳಿಸುತ್ತದೆ. ಬಾದಾಮಿ, ವಾಲ್‌ನಟ್ಸ್, ಅಂಜೂರ, ಗೋಡಂಬಿಗಳ ಸೇವನೆ ಮಕ್ಕಳಿಗೆ ಅತ್ಯವಶ್ಯಕವಾಗಿದೆ.  

ಬಾಳೆಹಣ್ಣು :
ಬಾಳೆಹಣ್ಣನ್ನು  ಮಕ್ಕಳು ಪ್ರತಿದಿನ ಸೇವಿಸಿದರೆ, ಅವರ ದೇಹವು ವಿಟಮಿನ್ ಬಿ 6, ವಿಟಮಿನ್ ಸಿ, ವಿಟಮಿನ್ ಎ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಬಯೋಟಿನ್ ಮತ್ತು ಫೈಬರ್ ಅನ್ನು ಪಡೆಯುತ್ತದೆ. ಬಾಳೆಹಣ್ಣು ಮಕ್ಕಳಿಗೆ ಶಕ್ತಿ ನೀಡುವ ಕೆಲಸ ಮಾಡುತ್ತದೆ.

ಇದನ್ನೂ ಓದಿ : World Diabetes Day: ಮಧುಮೇಹದ ಅಪಾಯವನ್ನು ಗುರುತಿಸುವುದು ಏಕೆ ಮುಖ್ಯ?

ಓಟ್ಸ್ :
ಓಟ್ಸ್ ತುಂಬಾ ಆರೋಗ್ಯಕರ ಆಹಾರವಾಗಿದೆ. ಇದು ಕರಗುವ ಫೈಬರ್ ಮತ್ತು ಬೀಟಾ-ಗ್ಲುಕನ್ ಅನ್ನು ಹೊಂದಿರುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಮೂಲಕ ಹೃದಯದ ಆರೋಗ್ಯಕವನ್ನು ಕೂಡಾ ಕಾಪಾಡುತ್ತದೆ. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಬೆಳಗಿನ ಉಪಾಹಾರದಲ್ಲಿ ಓಟ್ಸ್  ನೀಡುವುದು ಉತ್ತಮ. 

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,  ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News