ಬಿಕ್ಕಿ ಬಿಕ್ಕಿ ಅಳುವಾಗ ಮೂಗಿನಿಂದ ನೀರು ಏಕೆ ಬರುತ್ತೆ ಗೊತ್ತೆ..? ಕುತೂಹಲ ವಿಷಯ ಇಲ್ಲಿದೆ

Interesting facts : ಪ್ರಾಣಿ ಪಕ್ಷಿಗಳು ಕಣ್ಣಿರು ಹಾಕುತ್ತವೆ. ಮನಸ್ಸಿಗೆ ನೋವಾದರೆ, ಆತ್ಮೀಯರು ಸಾವನ್ನಪ್ಪಿದರೆ ಇಲ್ಲವೆ ಮನಸ್ಸಿಗೆ ಘಾಸಿಯಾದಾಗ ಕಂಬನಿ ಮಿಡಿಯುತ್ತೇವೆ. ಆದರೆ ಯಾವುದೇ ವಿಚಾರಕ್ಕೂ ಅತ್ತರು ಸಹ ಕಣ್ಣಿರು ಬರುತ್ತದೆ. ಅದರ ಜೊತೆ ಮೂಗಿನಲ್ಲಿ ನೀರು ಸುರಿಯುತ್ತದೆ.. ಏಕೆ ಗೊತ್ತೆ..? ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ..

Written by - Krishna N K | Last Updated : Apr 4, 2024, 01:37 PM IST
    • ಅಳು ಭಾವನೆಯ ಒಂದು ಸ್ವರೂಪ. ಮನಸ್ಸಿಗೆ ನೋವಾದರೂ ಅಳು ಬರುತ್ತದೆ.
    • ಅಳು ಬಂದಾಗ ಮೂಗಿನಲ್ಲಿ ನೀರು ಏಕೆ ಬರುತ್ತೆ..? ಅಂತ ನಿಮ್ಗೆ ಗೊತ್ತೆ.
    • ಅತ್ತಾಗ ಮೂಗಿನಲ್ಲಿ ನೀರು ಏಕೆ ಬರುತ್ತೆ ಎನ್ನುವ ವಿಚಾರ ತಿಳಿಯೋಣ..
ಬಿಕ್ಕಿ ಬಿಕ್ಕಿ ಅಳುವಾಗ ಮೂಗಿನಿಂದ ನೀರು ಏಕೆ ಬರುತ್ತೆ ಗೊತ್ತೆ..? ಕುತೂಹಲ ವಿಷಯ ಇಲ್ಲಿದೆ title=

Nose runs when you cry : ಅಳು ಭಾವನೆಯ ಒಂದು ಸ್ವರೂಪ. ಮನಸ್ಸಿಗೆ ನೋವಾದರೂ ಅಳು ಬರುತ್ತದೆ, ಖುಷಿಯಾದರೂ ಅಳು ಬರುತ್ತದೆ. ಆದರೆ ಅಳು ಬಂದಾಗ ಮೂಗಿನಲ್ಲಿ ನೀರು ಏಕೆ ಬರುತ್ತೆ..? ಎನ್ನುವ ವಿಚಾರ ನಿಮ್ಮ ತೆಲೆಗೆ ಬಂದಿದ್ಯಾ..? ಬನ್ನಿ ಇಂದು ಅತ್ತಾಗ ಮೂಗಿನಲ್ಲಿ ನೀರು ಏಕೆ ಬರುತ್ತೆ ಎನ್ನುವ ವಿಚಾರ ತಿಳಿಯೋಣ..

ಸಾಮಾನ್ಯವಾಗಿ ಮನುಷ್ಯರು, ಪ್ರಾಣಿ ಪಕ್ಷಿಗಳು ಕಣ್ಣಿರು ಹಾಕುತ್ತವೆ. ಮನಸ್ಸಿಗೆ ನೋವಾದರೆ, ಆತ್ಮೀಯರು ಸಾವನ್ನಪ್ಪಿದರೆ ಇಲ್ಲವೆ ಮನಸ್ಸಿಗೆ ಘಾಸಿಯಾದಾಗ ಕಂಬನಿ ಮಿಡಿಯುತ್ತೇವೆ. ಆದರೆ ಯಾವುದೇ ವಿಚಾರಕ್ಕೂ ಅತ್ತರು ಸಹ ಕಣ್ಣಿರು ಬರುತ್ತದೆ. ಅದರ ಜೊತೆ ಮೂಗಿನಲ್ಲಿ ನೀರು ಸುರಿಯುತ್ತದೆ.. ಏಕೆ ಗೊತ್ತೆ..? 

ಇದನ್ನೂ ಓದಿ:ಮೂತ್ರದಿಂದ ರಕ್ತ ಈ ಖಾಯಿಲೆಗಳ ಸಂಕೇತವೂ ಆಗಿರಬಹುದು!

ಅತ್ತಾಗ ಅಷ್ಟೆ ಅಲ್ಲ, ಶೀತ, ನೆಗಡಿಯಂತಹ ಆರೊಗ್ಯ ಸಮಸ್ಯೆಗಳು ಇದ್ದಾಗ ಮೂಗು ಸೋರುತ್ತದೆ. ಇದರಿಂದಾಗಿ ತಲೆನೋವು, ಮೂಗುಗಟ್ಟುವಿಕೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ಅಲ್ಲದೆ, ಕಣ್ಣಿಗೆ ಏನಾದರೂ ವಸ್ತು ಬಿದ್ದಾ ಮೂಗಿನಲ್ಲಿಯೂ ಸಹ ನೀರು ಬರುವುದುಂಟು. 

ನಾವು ಅತ್ತಾಗಲೆಲ್ಲಾ ಮೂಗಿನಲ್ಲಿ ನೀರು ಬರುತ್ತದೆ. ಇದಕ್ಕೆ ಕಾರಣ ʼಲ್ಯಾಕ್ರಿಮಲ್ ಪಂಕ್ಟಮ್ʼ ಎನ್ನುವ ಒಂದು ಭಾಗ. ಒಮ್ಮೆ ನೀವು ನಿಮ್ಮ ಕಣ್ಣನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಏನು ಅಂತ ನಿಮಗೆ ತಿಳಿಯುತ್ತದೆ. ನಿಮ್ಮ ಕಣ್ಣಿನ ರೆಪ್ಪೆಯ ಕೆಳಭಾಗದಲ್ಲಿ ಒಂದು ಚಿಕ್ಕ ರಂಧ್ರವಿರುತ್ತದೆ. ಹೆಚ್ಚಿನ ಜನರು ಇದನ್ನು ಗಮನಿಸಿರುವುದಿಲ್ಲ.

ಇದನ್ನೂ ಓದಿ:ದಾಳಿಂಬೆ ಹಣ್ಣನ್ನು ಕೇವಲ ಏಳು ದಿನ ತಿಂದರೆ ಈ ರೋಗಗಳಿಂದ ಮುಕ್ತಿ ಸಿಗುವುದು!

ಹೌದು. ಕಣ್ಣಿನ ಕೆಳಗಿರುವ ಲ್ಯಾಕ್ರಿಮ್‌ ರಂಧ್ರವು, ನಿಮ್ಮ ಕಣ್ಣಿನಿಂದ ಹೊರಹೊಮ್ಮುವ ನೀರನ್ನು ಮೂಗಿನ ನಾಳಕ್ಕೆ ಕಳುಹಿಸುತ್ತದೆ. ಇದರಿಂದಲೇ ಕಣ್ಣಲ್ಲಿ ನೀರು ಬಂದ ತಕ್ಷಣ ಮೂಗಿನಿಂದ ಸೋರಿಕೆ ಶುರುವಾಗುತ್ತದೆ. ಇದೇ ಕಣ್ಣಿಗು ಮತ್ತು ಮೂಗಿಗು ಇರುವ ಸಂಬಂಧ. 

 

 

Trending News