ಸ್ನಾನದ ವೇಳೆ ಮಾಡುವ ಈ ತಪ್ಪು ಮೆದುಳಿಗೆ ಹಾನಿಯುಂಟು ಮಾಡಬಹುದು.!

Brain Stroke: ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವ ಮೂಲಕ ದಿನವನ್ನು ಪ್ರಾರಂಭಿಸುವುದು ಜನರ ಸಾಮಾನ್ಯ ದಿನಚರಿ. ಆದರೆ ನೀವು ತಪ್ಪಾಗಿ ಸ್ನಾನ ಮಾಡುತ್ತಿದ್ದರೆ ಇದು ಮೆದುಳಿಗೆ ಹಾಣಿಯನ್ನುಂಟು ಮಾಡಬಹುದು.

Written by - Chetana Devarmani | Last Updated : Apr 28, 2022, 05:26 PM IST
  • ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವುದು ಜನರ ಸಾಮಾನ್ಯ ದಿನಚರಿ
  • ಸ್ನಾನ ಮಾಡುವುದರಿಂದ ಯಾವುದೇ ಅಪಾಯವಿಲ್ಲ ನಿಜ
  • ಸ್ನಾನದ ವೇಳೆ ಮಾಡುವ ಈ ತಪ್ಪು ಮೆದುಳಿಗೆ ಹಾನಿಯುಂಟು ಮಾಡಬಹುದು
ಸ್ನಾನದ ವೇಳೆ ಮಾಡುವ ಈ ತಪ್ಪು ಮೆದುಳಿಗೆ ಹಾನಿಯುಂಟು ಮಾಡಬಹುದು.!   title=
ಸ್ನಾನ

ಬೇಸಿಗೆಯ ಬಿಸಿಲಿಗೆ ಮೈಯಿಂದ ಕಿತ್ತುಬರುವ ಬೆವರು ನಮ್ಮನ್ನು ಹಲವು ಬಾರಿ ತಣ್ಣೀರು ಸ್ನಾನ ಮಾಡುವಂತೆ ಮಾಡುತ್ತದೆ. ಸ್ನಾನ ಮಾಡುವುದರಿಂದ ಯಾವುದೇ ಅಪಾಯವಿಲ್ಲ ನಿಜ. ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವ ಮೂಲಕ ದಿನವನ್ನು ಪ್ರಾರಂಭಿಸುವುದು ಜನರ ಸಾಮಾನ್ಯ ದಿನಚರಿ. ಆದರೆ ನೀವು ತಪ್ಪಾಗಿ ಸ್ನಾನ ಮಾಡುತ್ತಿದ್ದರೆ ಇದು ಮೆದುಳಿಗೆ ಹಾಣಿಯನ್ನುಂಟು ಮಾಡಬಹುದು. ಕಳೆದ ಒಂದು ತಿಂಗಳಿನಿಂದ ದೇಶದಲ್ಲಿ ಚಳಿಗಾಲದ ತೀವ್ರತೆಯಿಂದಾಗಿ ಬ್ರೈನ್ ಸ್ಟ್ರೋಕ್ ಪ್ರಕರಣಗಳು ಸಹ ಹೆಚ್ಚಾಗಿದೆ. ಇದರಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವೈದ್ಯರ ಪ್ರಕಾರ, ಬ್ರೈನ್ ಸ್ಟ್ರೋಕ್‌ಗೆ ಪ್ರಮುಖ ಕಾರಣವೆಂದರೆ ನಮ್ಮ ತಪ್ಪು ಸ್ನಾನದ ವಿಧಾನ.

ಇದನ್ನೂ ಓದಿ: ಆರೋಗ್ಯಕರವಾಗಿ ತೂಕ ತಿಳಿಸಲು ನಿಮ್ಮ ಬೆಳಗಿನ ಉಪಹಾರದಲ್ಲಿ ಇವುಗಳನ್ನು ತಪ್ಪದೇ ಸೇವಿಸಿ

ವೈದ್ಯರ ಪ್ರಕಾರ, ಚಳಿಗಾಲದಲ್ಲಿಯೂ ಅನೇಕ ಜನರು ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಅವರಲ್ಲಿ ಹಲವರು ಸ್ನಾನ ಮಾಡಲು ಪ್ರಾರಂಭಿಸಿದ ತಕ್ಷಣ ತಲೆಗೆ ನೇರವಾಗಿ ನೀರು ಸುರಿಯುತ್ತಾರೆ. ಮೆದುಳು ಒಮ್ಮೆಗೆ ತಣ್ಣೀರು ಸಹಿಸಿಕೊಳ್ಳಲು ಸಿದ್ಧವಾಗಲ್ಲ. ಅಂತಹ ಪರಿಸ್ಥಿತಿಯಲ್ಲಿ, ತಣ್ಣೀರು ಇದ್ದಕ್ಕಿದ್ದಂತೆ ತಲೆಯ ಮೇಲೆ ಬಿದ್ದಾಗ, ಮೆದುಳಿನ ಸ್ಟ್ರೋಕ್ ಅಪಾಯವು ಹೆಚ್ಚಾಗುತ್ತದೆ.

ಯಾವುದೇ ಸಮಯದಲ್ಲಿ ಬ್ರೈನ್ ಸ್ಟ್ರೋಕ್ ಸಂಭವಿಸಬಹುದಾದರೂ, ಚಳಿಗಾಲದಲ್ಲಿ ಬ್ರೈನ್ ಸ್ಟ್ರೋಕ್ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಮಧುಮೇಹ, ಅಧಿಕ ಬಿಪಿ ಮತ್ತು ಹೃದ್ರೋಗದಿಂದ ಬಳಲುತ್ತಿರುವ ಜನರು ಬ್ರೈನ್ ಸ್ಟ್ರೋಕ್ ಅಥವಾ ಬ್ರೈನ್ ಹೆಮರೇಜ್‌ಗೆ ಹೆಚ್ಚು ಒಳಗಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಜನರು ಚಳಿಗಾಲದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. 

ಇದನ್ನೂ ಓದಿ: Diabetes Symptoms: ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಡಯಾಬಿಟಿಸ್‌ ಪರೀಕ್ಷೆ ಮಾಡಿಸಿಕೊಳ್ಳಿ!

ವೈದ್ಯರ ಪ್ರಕಾರ, ಚಳಿಗಾಲದಲ್ಲಿ ತುಂಬಾ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಬೇಡಿ. ಸಾಧ್ಯವಾದರೆ, ನೀರನ್ನು ಸ್ವಲ್ಪ ಬಿಸಿ ಮಾಡಿ. ಸ್ನಾನ ಮಾಡುವಾಗ ಮೊದಲು ಪಾದಗಳಿಗೆ, ನಂತರ ಕೈಗಳಿಗೆ, ನಂತರ ಮುಖದ ಮೇಲೆ ಮತ್ತು ಅಂತಿಮವಾಗಿ ತಲೆಯ ಮೇಲೆ ನೀರನ್ನು ಸುರಿಯಿರಿ. ಇದರ ಹೊರತಾಗಿಯೂ, ಮೆದುಳಿನ ಸ್ಟ್ರೋಕ್‌ನ ಲಕ್ಷಣಗಳು ಕಂಡುಬಂದರೆ, ರೋಗಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ವಿಳಂಬ ಮಾಡಬೇಡಿ.

ಇವು ಬ್ರೈನ್ ಸ್ಟ್ರೋಕ್‌ನ ಲಕ್ಷಣಗಳಾಗಿವೆ:

  • ದೇಹದ ಯಾವುದೇ ಭಾಗದಲ್ಲಿ ಮರಡುಗಟ್ಟುವಿಕೆ
  • ಸ್ಪಷ್ಟವಾಗಿ ನೋಡಲು ಅಸಮರ್ಥತೆ
  • ದೇಹದ ಮೇಲೆ ಇರುವೆಗಳು ಓಡುತ್ತಿರುವ ಭಾವನೆ 
  • ತಲೆನೋವು, ವಾಂತಿ ಅಥವಾ ವಾಕರಿಕೆ
  • ಮಾತನಾಡಲು ಅಥವಾ ಅರ್ಥಮಾಡಿಕೊಳ್ಳಲು ಕಷ್ಟ
  • ಉಸಿರಾಟದ ತೊಂದರೆ
  • ಮೆದುಳಿನಲ್ಲಿ ರಕ್ತಸ್ರಾವದಿಂದಾಗಿ ಮೂರ್ಛೆ

ಹೆಚ್ಚು ಅಪಾಯದಲ್ಲಿರುವವರು:

  • ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು
  • 55 ವರ್ಷಕ್ಕಿಂತ ಮೇಲ್ಪಟ್ಟ ಜನರು
  • ಮಧುಮೇಹ ರೋಗಿಗಳು
  • ಮೈಗ್ರೇನ್ ಅಥವಾ ರಕ್ತಹೀನತೆಯಿಂದ ಬಳಲುತ್ತಿರುವವರು
  • ಸ್ಥೂಲಕಾಯತೆಯೊಂದಿಗೆ ಹೋರಾಡುತ್ತಿರುವ ಜನರು

ಮೆದುಳಿನ ಸ್ಟ್ರೋಕ್ ಅನ್ನು ಹೇಗೆ ತಡೆಯುವುದು?

  • ಚಳಿಯಲ್ಲಿ ನೆಲದ ಮೇಲೆ ಅಥವಾ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಬೇಡಿ
  • ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿ
  • ದೇಹದಲ್ಲಿ ನೀರಿನ ಕೊರತೆ ಇರಬಾರದು
  • ಯಾವಾಗಲೂ ಬಿಸಿ ಅಥವಾ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ
  • ಧೂಮಪಾನ ಮಾಡಬೇಡಿ ಅಥವಾ ಮದ್ಯಪಾನ ಮಾಡಬೇಡಿ
  • ಅಧಿಕ ಬಿಪಿ ಮತ್ತು ಶುಗರ್‌ಗೆ ಔಷಧಿ ತೆಗೆದುಕೊಳ್ಳುತ್ತಿರಿ

(Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಈ ಪ್ರಿಸ್ಕ್ರಿಪ್ಷನ್‌ಗಳನ್ನು ಖಚಿತ ಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News