Health tipes:ದೇಹದ ಪ್ರತಿಯೊಂದು ಭಾಗಕ್ಕೂ ರಕ್ತ ಅವಶ್ಯಕ. ರಕ್ತದಲ್ಲಿ ಕೆಂಪುರಕ್ತಕಣ, ಬಿಳಿರಕ್ತಕಣ ಮತ್ತು ಕಿರುಬಿಲ್ಲೆಗಳಿರುವುದು ಕೆಂಪು ರಕ್ತದ ಕಣದಲ್ಲಿ ಕಬ್ಬಿಣವೆಂಬ ಖನಿಜಾಂಶವಿದೆ. ಇದನ್ನು ವೈದ್ಯಕೀಯ ವಿಜ್ಞಾನದ್ಲಲಿ ಹಿಮೋಗ್ಲೋಬಿನ್ ಎಂದು ಕರೆಯಲಾಗುತ್ತದೆ.ರಕ್ತದ ಕೊರತೆಯು ವ್ಯಕ್ತಿಗೆ ತಲೆತಿರುಗುವಿಕೆ, ತೀವ್ರ ತಲೆನೋವು ಮತ್ತು ದೇಹದಲ್ಲಿನ ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ.ಕೆಲವು ಸಂದರ್ಭಗಳಲ್ಲಿ, ರಕ್ತಹೀನತೆ ಸಹ ಸಾವಿಗೆ ಕಾರಣವಾಗಬಹುದು.
ಹಿಮೋಗ್ಲೋಬಿನ್‌ನ ಮುಖ್ಯ ಕಾರ್ಯ ಹೃದಯದಿಂದ ಆಮ್ಲಜನಕವನ್ನು ದೇಹದ ಇತರ ಎಲ್ಲಾ ಭಾಗಗಳಿಗೆ ಸರಬರಾಜು ಮಾಡುತ್ತದೆ. . ದೇಹದ ಎಲ್ಲಾ ಕೋಶಗಳಿಗೆ ಕಾರ್ಬನ್ ಡೈಯಾಕ್ಸೈಡ್ ಅನ್ನು ತೆಗೆದುಕೊಳ್ಳುವ ಹಿಮೋಗ್ಲೋಬಿನ್ ಇದನ್ನು ಶ್ವಾಸಕೋಶಕ್ಕೆ ಸರಬರಾಜು ಮಾಡುತ್ತದೆ.
ಇದನ್ನೂ ಓದಿ: Drinks For Constipation : ಮಲಬದ್ಧತೆ ಸಮಸ್ಯೆಗೆ ಪ್ರತಿದಿನ ಬೆಳಿಗ್ಗೆ ಸೇವಿಸಿ ಈ ಪಾನೀಯಗಳನ್ನು!
ಟೊಮೆಟೊ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಪ್ರತಿನಿತ್ಯ ನಿಯಮಿತವಾಗಿ ಟೊಮೆಟೊ ಹಣ್ಣನ್ನು ಸೇವಿಸಿ .
ಪಾಲಕ್‌ನಲ್ಲಿ ವಿಟಮಿನ್ ಎ, ಸಿ, ಬಿ 9, ಕಬ್ಬಿಣವಿದೆ, ಇದು ದೇಹದಲ್ಲಿನ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಕರಿಸುತ್ತದೆ.
ಮಾಂಸ ದೇಹದಲ್ಲಿ ಹಿಮೋಗ್ಲೋಬಿನ್ ಅಂಶವು ಹೆಚ್ಚಿಸುತ್ತದೆ. ಅದಕ್ಕೆ ಪ್ರಾಣಿಗಳ ಪ್ರೋಟೀನ್ ಅಗತ್ಯವಾಗಿದೆ. ಬೀಫ್, ಮಾಂಸ ಮತ್ತು ಪ್ರಾಣಿಗಳ ಯಕೃತ್ ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚು ಮಾಡುವಂತಹ ಪ್ರಮುಖ ಆಹಾರವಾಗಿದೆ. ಕೋಳಿ ಮಾಂಸ ಆದರೆ ನಿಯಮಿತವಾಗಿ ಸೇವಿಸುವುದರಿಂದ ಹೆಚ್ಚಿನ ಪ್ರಮಾಣದ ಕಬ್ಬಿನಾಂಶವು ಸಿಗುತ್ತದೆ.
ಇದನ್ನೂ ಓದಿ: Dates Side Effects: ಈ ಕಾಯಿಲೆ ಇರುವವರು ಖರ್ಜೂರವನ್ನು ತಪ್ಪಿಯೂ ತಿನ್ನಬಾರದು
ಸಮುದ್ರದ ಆಹಾರ
ವಿವಿಧ ರೀತಿಯ ಸಮುದ್ರದ ಆಹಾರಗಳಾದ ಮೀನು, ಏಡಿ, ಇನ್ನು ಅನೇಕ ಪದಾರ್ಥಗಳಲ್ಲಿ ಕಬ್ಬಿನಾಂಶ ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಹಿಮೋಗ್ಲೋಬಿನ್ ಬೆಳವಣಿಗೆ ಸಹಕಾರಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.