ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚುತ್ತಿದ್ದರೆ ಕಾಲಿನಲ್ಲಿ ಕಾಣಿಸಿಕೊಳ್ಳುತ್ತದೆ ಈ ಐದು ಲಕ್ಷಣ ! ನಿರ್ಲಕ್ಷ್ಯ ಖಂಡಿತಾ ಬೇಡ !

How To Know Uric Acid is High:ಯೂರಿಕ್ ಆಮ್ಲದ ಪ್ರಮಾಣವು ಅಧಿಕವಾಗಿದ್ದರೆ ಮೂತ್ರಪಿಂಡದ ಕಲ್ಲುಗಳು ಮತ್ತು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗಳ ಅಪಾಯ  ಹೆಚ್ಚಾಗುತ್ತದೆ.  

Written by - Ranjitha R K | Last Updated : Apr 15, 2024, 02:15 PM IST
  • ಯೂರಿಕ್ ಆಮ್ಲವು ಪ್ಯೂರಿನ್ ಎಂಬ ವಸ್ತುವಿನ ವಿಭಜನೆಯಿಂದ ರೂಪುಗೊಳ್ಳುವ ರಾಸಾಯನಿಕ
  • ಯೂರಿಕ್ ಆಮ್ಲದ ಅಧಿಕವಾಗಿದ್ದರೆ ಮೂತ್ರಪಿಂಡದ ಕಲ್ಲು, ಮೂತ್ರಪಿಂಡದ ಕಾಯಿಲೆಗಳ ಅಪಾಯ ಹೆಚ್ಚು
  • ಯೂರಿಕ್ ಆಮ್ಲದ ಮಟ್ಟ ಹೇಗಿರಬೇಕು?
ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚುತ್ತಿದ್ದರೆ ಕಾಲಿನಲ್ಲಿ ಕಾಣಿಸಿಕೊಳ್ಳುತ್ತದೆ ಈ ಐದು ಲಕ್ಷಣ ! ನಿರ್ಲಕ್ಷ್ಯ ಖಂಡಿತಾ ಬೇಡ !  title=

How To Know Uric Acid is High : ದೇಹದಲ್ಲಿ ಉತ್ಪತ್ತಿಯಾಗುವ ಯೂರಿಕ್ ಆಮ್ಲವು ಪ್ಯೂರಿನ್ ಎಂಬ ವಸ್ತುವಿನ ವಿಭಜನೆಯಿಂದ ರೂಪುಗೊಳ್ಳುವ ರಾಸಾಯನಿಕವಾಗಿದೆ. ಇದು ಆರೋಗ್ಯಕ್ಕೆ ಅಗತ್ಯವಾಗಿರುವುದರ ಜೊತೆಗೆ ಹಾನಿಕಾರಕವೂ ಹೌದು. ಯೂರಿಕ್ ಆಸಿಡ್ ನಿಮ್ಮ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿದೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. 

ಹೀಗಿರುವಾಗ ಯೂರಿಕ್ ಆಮ್ಲದ ಪ್ರಮಾಣವು ಅಧಿಕವಾಗಿದ್ದರೆ ಮೂತ್ರಪಿಂಡದ ಕಲ್ಲುಗಳು ಮತ್ತು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗಳ ಅಪಾಯ  ಹೆಚ್ಚಾಗುತ್ತದೆ.ಇದು ಅಧಿಕ ರಕ್ತದೊತ್ತಡ,ಹೃದಯ ವೈಫಲ್ಯ, ಮೆಟಾಬಾಲಿಕ್ ಸಿಂಡ್ರೋಮ್‌ಗೆ ಸಂಬಂಧಿಸಿದ್ದಾಗಿದೆ ಎಂದು ಕೆಲವೊಂದು ಅಧ್ಯಯನಗಳಲ್ಲಿ ಹೇಳಲಾಗಿದೆ. ಇವುಗಳು ವ್ಯಕ್ತಿಯ ಮಧುಮೇಹ ಮತ್ತು ಪಾರ್ಶ್ವವಾಯು ಸಾಧ್ಯತೆಯನ್ನು ಹೆಚ್ಚಿಸುವ ಕೆಲವು ಅಂಶಗಳಾಗಿವೆ. ಈ ಅಪಾಯಗಳನ್ನು ತಪ್ಪಿಸಲು, ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗಿದೆ ಎನ್ನುವುದನ್ನು ತೋರಿಸುವ  ರೋಗಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ : ಜೀರಿಗೆ ನೀರಿಗೆ ಈ ಬೀಜವನ್ನು ಸೇರಿಸಿ ಕುಡಿದರೆ ಜಿಡ್ಡು ಗಟ್ಟಿ ಕುಳಿತಿರುವ ಕೊಲೆಸ್ಟ್ರಾಲ್ ಕರಗುವುದು ಗ್ಯಾರಂಟಿ!ಔಷಧಿ, ವ್ಯಾಯಾಮ ಯಾವುದೂ ಬೇಡ !

ಯೂರಿಕ್ ಆಮ್ಲದ ಮಟ್ಟ ಹೇಗಿರಬೇಕು? : 
ಆರ್ಥರೈಟಿಸ್ ಫೌಂಡೆಶೇನ್ ಪ್ರಕಾರ, ಯೂರಿಕ್ ಆಸಿಡ್ ಪುರುಷರಲ್ಲಿ 7 ಮಿಲಿಗ್ರಾಂ ಪ್ರತಿ ಡೆಸಿಲಿಟರ್ (mg/dL) ಮತ್ತು ಮಹಿಳೆಯರಲ್ಲಿ 6 mg/dL ಅನ್ನು ಮೀರಿದಾಗ ಅದನ್ನು ಸಾಮಾನ್ಯವಾಗಿ ಅಧಿಕವೆಂದು ಪರಿಗಣಿಸಲಾಗುತ್ತದೆ.  

ಪಾದಗಳಲ್ಲಿ ಕಂಡುಬರುವ ಲಕ್ಷಣಗಳು : 
ಕಾಲ್ಬೆರಳುಗಳಲ್ಲಿ ಚುಚ್ಚುವ ನೋವು
ಹೆಬ್ಬೆರಳಿನಲ್ಲಿ ಊತ 
ಪಾದದಿಂದ ಹಿಮ್ಮಡಿಯವರೆಗೆ ನೋವು
ಬೆಳಿಗ್ಗೆ ಪಾದದ ಅಡಿಭಾಗದಲ್ಲಿ ತೀವ್ರವಾದ ನೋವು 
ಮೊಣಕಾಲು ನೋವು

ಯೂರಿಕ್ ಆಸಿಡ್ ನ ಈ ರೋಗಲಕ್ಷಣಗಳ ಮೇಲೆ ನಿಗಾ ಇರಲಿ :
ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾದಾಗ ಕೀಲುಗಳಲ್ಲಿ ನೋವು, ಸುತ್ತಲಿನ ಚರ್ಮ ಕೆಂಪಾಗುವುದು, ಮೂತ್ರದಲ್ಲಿ ರಕ್ತ ಬರುವುದು,ಪದೇ ಪದೇ ಮೂತ್ರ ವಿಸರ್ಜನೆ, ಜನನಾಂಗದ ಪ್ರದೇಶಕ್ಕೆ ಬರುವ ಬೆನ್ನಿನ ಕೆಳಭಾಗದಲ್ಲಿ ನೋವು,ಸುಸ್ತು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 

ಇದನ್ನೂ ಓದಿ : ಈ ರೋಗಗಳು ಬುಡದಿಂದಲೇ ಗುಣವಾಗಬೇಕಾದರೆ ಹಣ್ಣಲ್ಲ, ಮಾವಿನಕಾಯಿ ತಿನ್ನಬೇಕು !

ದೇಹದಲ್ಲಿ ಯೂರಿಕ್ ಆಮ್ಲದ ಹೆಚ್ಚಳಕ್ಕೆ ಕಾರಣಗಳು : 
ಮೇಯೊ ಕ್ಲಿನಿಕ್ ಪ್ರಕಾರ, ಹೆಚ್ಚಿನ ಮಟ್ಟದ ಯೂರಿಕ್ ಆಸಿಡ್ ಅನ್ನು ಮೂತ್ರಪಿಂಡ ದೇಹದಿಂದ ಹೊರ ಹಾಕಲು ಸಾಧ್ಯವಾಗದೆ ಹೋದಾಗ ಅದು ದೇಹದಲ್ಲಿ ಸಂಗ್ರಹವಾಗುತ್ತದೆ.ಒಬ್ಬ ವ್ಯಕ್ತಿಯು ಹೆಚ್ಚು ಆಲ್ಕೊಹಾಲ್ ಸೇವಿಸಲು ಪ್ರಾರಂಭಿಸಿದಾಗ ಅಥವಾ ಮೂತ್ರವರ್ಧಕಗಳನ್ನು ತೆಗೆದುಕೊಂಡಾಗ ಇದು ಸಾಮಾನ್ಯವಾಗಿ ಸಂಭವಿಸುತ್ತದೆ.ಹೆಚ್ಚು ಸೋಡಾ ಮತ್ತು ಫ್ರಕ್ಟೋಸ್ ಹೊಂದಿರುವ ಆಹಾರಗಳ ಸೇವನೆ, ಅಧಿಕ ರಕ್ತದೊತ್ತಡ, ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಔಷಧಿಗಳು, ಮೂತ್ರಪಿಂಡದ ತೊಂದರೆಗಳು, ಲ್ಯುಕೇಮಿಯಾ, ಮೆಟಾಬಾಲಿಕ್ ಸಿಂಡ್ರೋಮ್, ಬೊಜ್ಜು, ಪ್ಯೂರಿನ್ ಭರಿತ ಆಹಾರಗಳ ಸೇವನೆ ಕೂಡಾ ಯೂರಿಕ್ ಆಸಿಡ್ ಹೆಚ್ಚಾಗಲು ಕಾರಣವಾಗುತ್ತದೆ. 

(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.).

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News