ಬೆಂಗಳೂರು : High Sugar Symptoms: ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆ ಚ್ಚಾಗಲು ಹಲವು ಕಾರಣಗಳಿವೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವುದರಿಂದ ಬೇರೆ ಬೇರೆ ಸಮಸ್ಯೆಗಳು ಉದ್ಬವಿಸಿಕೊಳ್ಳುತ್ತವೆ. ಸಕ್ಕರೆ ಪ್ರಮಾಣ ಹೆಚ್ಚಾದರೆ ಮಧುಮೇಹಕ್ಕೆ ಬಲಿಯಾಗುತ್ತಾರೆ. ಇದರ ನಿಯಂತ್ರಣಕ್ಕೆ ಮಾರುಕಟ್ಟೆಯಲ್ಲಿ ಬೇರೆ ಬೇರೆ ರೀತಿಯ ಔಷಧಿ ಲಭ್ಯವಿದೆ. ಹಾಗಾದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಏಕೆ ಹೆಚ್ಚಾಗುತ್ತದೆ? ಅದರ ಲಕ್ಷಣಗಳೇನು ? ಮತ್ತು ಈ ಕಾಯಿಲೆಯನ್ನು ಹೇಗೆ ನಿಯಂತ್ರಿಸಬಹುದು ನೋಡೋಣ.
ಇವು ಸಕ್ಕರೆ ಪ್ರಮಾಣ ಹೆಚ್ಚಾಗುವ ಲಕ್ಷಣಗಳು :
1. ಮೊದಲನೆಯದಾಗಿ, ಸಕ್ಕರೆ ಪ್ರಮಾಣ ಹೆಚ್ಚಾದಾಗ ತುಂಬಾ ಬಾಯಾರಿಕೆಯಾಗುವ ಅನುಭವವಾಗುತ್ತದೆ. ಪದೇ ಪದೇ ಬಾಯಾರುತ್ತಿದ್ದರೆ ಈ ಲಕ್ಷಣವನ್ನು ಖಂಡಿತಾ ಲಘುವಾಗಿ ಪರಿಗಣಿಸಬಾರದು. ಇದು ಸಕ್ಕರೆ ಪ್ರಮಾಣ ಜಾಸ್ತಿಯಾಗಿದೆ ಎನ್ನುವುದನ್ನು ತೋರಿಸುತ್ತದೆ.
2. ಮೂತ್ರವು ತುಂಬಾ ವಾಸನೆ ಹೊಂದಿದ್ದರೆ ಕೂಡಾ ಎಚ್ಚರದಿಂದ ಇರಬೇಕು. ಇದು ಕೂಡಾ ಸಕ್ಕರೆ ಪ್ರಮಾಣ ಹೆಚ್ಚಾಗಿರುವ ಲಕ್ಷಣವಾಗಿದೆ.
3. ಏನು ಕೆಲಸ ಮಾಡದಿದ್ದರೂ ಸುಸ್ತಾಗುತ್ತಿದ್ದರೆ ಅದು ಕೂಡಾ ಸಕ್ಕರೆ ಹೆಚ್ಚಾಗುವ ಲಕ್ಷಣವಾಗಿದೆ.
ಇದನ್ನೂ ಓದಿ : ICMR Guidelines:ಇನ್ನು ಡ್ರೋನ್ ಮೂಲಕ ಮನೆ ಮನೆಗೂ ತಲುಪಲಿದೆ ಔಷಧಿ, ICMR ತಂದಿದೆ ಹೊಸ ಯೋಜನೆ
4. ದೃಷ್ಟಿ ಮಜಾಗುವುದು ಕೂಡಾ ಇದರ ಲಕ್ಷಣವಾಗಿರಬಹುದು. ಹಾಗಾಗಿ ದೃಷ್ಟಿ ಮಂಜಾದಂತೆ ಅನಿಸಿದರೆ ಮೊದಲು ಬ್ಲಡ್ ಶುಗರ್ ಪರೀಕ್ಷಿಸಿಕೊಳ್ಳಿ.
5. ತ್ವರಿತ ತೂಕ ನಷ್ಟವು ಸಕ್ಕರೆಯ ಪ್ರಮಾಣ ಹೆಚ್ಚಾಗಿರುವುದರ ಲಕ್ಷಣವಾಗಿದೆ.
ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿದ್ದರೆ ನಿಯಂತ್ರಿಸುವುದು ಹೇಗೆ ?
1. ಮೊದಲನೆಯದಾಗಿ, ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು. ಆರೋಗ್ಯಕರ ಆಹಾರವನ್ನು ಸೇವಿಸುವುದು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
2. ವ್ಯಾಯಾಮ ಮಾಡುವುದು ಅವಶ್ಯಕ. ಇದರೊಂದಿಗೆ, ಅಧಿಕ ರಕ್ತದ ಸಕ್ಕರೆಯ ಸಮಸ್ಯೆಯನ್ನು ತಪ್ಪಿಸಬಹುದು.
3. ಇದರೊಂದಿಗೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ.
4. ತೂಕವನ್ನು ನಿಯಂತ್ರಣದಲ್ಲಿಟ್ಟರೆ, ಸಕ್ಕರೆ ಪ್ರಮಾಣ ಕೂಡಾ ನಿಯಂತ್ರಣದಲ್ಲಿರುತ್ತದೆ.
5. ನಿದ್ರೆ ಬಹಳ ಮುಖ್ಯ. ಸಾಕಷ್ಟು ನಿದ್ರೆ ಮಾಡದಿದ್ದರೆ ಕೂಡಾ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು.
ಇದನ್ನೂ ಓದಿ : Diabetes Diet: ಮಧುಮೇಹಿಗಳಿಗೆ ಅಪಾರ ಪ್ರಯೋಜನ ನೀಡಲಿದೆ ಈ ಬೀಜ
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.