ಇದು ಹೆಪಟೈಟಿಸ್ ಲಕ್ಷಣವಾಗಿರಬಹುದು .! ನಿರ್ಲಕ್ಷಿಸಿದರೆ ಸಾವಿಗೆ ಸನಿಹವಾಗಬೇಕಾದಿತು .!

World Hepatitis Day 2022:  ಹೆಪಟೈಟಿಸ್‌ನಿಂದಾಗಿ, ನಮ್ಮ ದೇಹದ ಬಹುಮುಖ್ಯ ಅಂಗವಾಗಿರುವ ಯಕೃತ್ತಿಗೆ ಸಾಕಷ್ಟು ಹಾನಿ ಉಂಟಾಗುತ್ತದೆ. ಇದು ವೈರಲ್ ಸೋಂಕಿನಿಂದ ಪ್ರಾರಂಭವಾಗುತ್ತದೆ.

Written by - Ranjitha R K | Last Updated : Jul 28, 2022, 12:33 PM IST
  • ಪ್ರತಿ ವರ್ಷ 'ವಿಶ್ವ ಹೆಪಟೈಟಿಸ್ ದಿನ'ವನ್ನು ಜುಲೈ 28 ರಂದು ಆಚರಿಸಲಾಗುತ್ತದೆ.
  • ಈ ಅಪಾಯಕಾರಿ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶ
  • ದೇಹದ ಬಹುಮುಖ್ಯ ಅಂಗವಾಗಿರುವ ಯಕೃತ್ತಿಗೆ ಹಾನಿ ಉಂಟಾಗುತ್ತದೆ.
ಇದು ಹೆಪಟೈಟಿಸ್ ಲಕ್ಷಣವಾಗಿರಬಹುದು .! ನಿರ್ಲಕ್ಷಿಸಿದರೆ ಸಾವಿಗೆ ಸನಿಹವಾಗಬೇಕಾದಿತು .! title=
World Hepatitis Day 2022 (file photo)

World Hepatitis Day 2022 : ಪ್ರತಿ ವರ್ಷ 'ವಿಶ್ವ ಹೆಪಟೈಟಿಸ್ ದಿನ'ವನ್ನು ಜುಲೈ 28 ರಂದು ಆಚರಿಸಲಾಗುತ್ತದೆ.  ಈ ಅಪಾಯಕಾರಿ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಹೆಪಟೈಟಿಸ್‌ನಿಂದಾಗಿ, ನಮ್ಮ ದೇಹದ ಬಹುಮುಖ್ಯ ಅಂಗವಾಗಿರುವ ಯಕೃತ್ತಿಗೆ ಸಾಕಷ್ಟು ಹಾನಿ ಉಂಟಾಗುತ್ತದೆ. ಇದು ವೈರಲ್ ಸೋಂಕಿನಿಂದ ಪ್ರಾರಂಭವಾಗುತ್ತದೆ. ಹೆಪಟೈಟಿಸ್ ನಮ್ಮ ದೇಹವನ್ನು ಆಕ್ರಮಿಸುವ ಸುಮಾರು 5 ವಿಧಾನಗಳಿವೆ. ಇವುಗಳಲ್ಲಿ ಆಹಾರ, ನೀರು, ರಕ್ತ, ಯೋನಿ ಸ್ರವಿಸುವಿಕೆ ಅಥವಾ ವೀರ್ಯ ಸೇರಿವೆ. 

ಈ ಕಾರಣದಿಂದಾಗಿ ಹೆಪಟೈಟಿಸ್ ಉಂಟಾಗುತ್ತದೆ :
ಅತಿಯಾಗಿ ಆಲ್ಕೋಹಾಲ್ ಕುಡಿಯುವ ಜನರಲ್ಲಿ ಯಕೃತ್ತಿನ ಹಾನಿಯ ಅಪಾಯವು  ಬಹಳ ಹೆಚ್ಚಾಗಿರುತ್ತದೆ. ಇದು ಉರಿಯೂತವನ್ನು ಉಂಟುಮಾಡುತ್ತದೆ. ಆಲ್ಕೋಹಾಲ್ ನೇರವಾಗಿ ಯಕೃತ್ತಿನ ಜೀವಕೋಶಗಳನ್ನು ಹಾನಿಗೊಳಿಸುತ್ತದೆ. ಅನೇಕ ಸಂದರ್ಭಗಳಲ್ಲಿ, ಇದು ಹೆಪಟೈಟಿಸ್, ಸಿರೋಸಿಸ್ ಮತ್ತು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ : Cholesterol Lowering Drinks: ಈ ನಾಲ್ಕು ಪಾನೀಯಗಳ ಸೇವನೆಯಿಂದ ಕಡಿಮೆಯಾಗುತ್ತದೆ ಕೊಲೆಸ್ಟ್ರಾಲ್

ಹೆಪಟೈಟಿಸ್‌ನ ಲಕ್ಷಣಗಳು :
ಹೆಪಟೈಟಿಸ್‌ಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ಮಾರಣಾಂತಿಕ ಕಾಯಿಲೆಯಾಗಿ ಪರಿಣಮಿಸುತ್ತದೆ. ಈ ರೋಗದ ಮುಖ್ಯ ಲಕ್ಷಣಗಳು ಯಾವುವು  ನೋಡೋಣ :  

- ಆಯಾಸ -
- ಜ್ವರ ರ
-ಹಸಿವಾಗದೆ ಇರುವುದು 
- ತ್ವರಿತ ತೂಕ ನಷ್ಟ
- ಕಾಮಾಲೆ ಲಕ್ಷಣಗಳು 
- ಹೊಟ್ಟೆ ನೋವು 
- ಕೀಲು ನೋವು 
- ಗಾಢ ಬಣ್ಣದ ಮೂತ್ರ 
- ತಿಳಿ ಬಣ್ಣದ ಮಲ

ಹೆಪಟೈಟಿಸ್ ವಿಧಗಳು :
ಹೆಪಟೈಟಿಸ್ ಎ - ಈ ರೋಗವು ತುಂಬಾ ಅಪಾಯಕಾರಿ ಅಲ್ಲ ಮತ್ತು ಸೌಮ್ಯವಾದ ಔಷಧಿಗಳ ಸಹಾಯದಿಂದ ಇದನ್ನು ಗುಣಪಡಿಸಬಹುದು. ಈ ಪರಿಸ್ಥಿತಿಯಲ್ಲಿ, ವೈದ್ಯರು ವಿಶ್ರಾಂತಿ ಮತ್ತು ಕೆಲವು ವಿಶೇಷ ಆಹಾರವನ್ನು ಶಿಫಾರಸು ಮಾಡುತ್ತಾರೆ.

ಇದನ್ನೂ ಓದಿ :  ಬ್ಲಡ್ ಶುಗರ್ ಕಡಿಮೆ ಮಾಡಲು ಅಡುಗೆಮನೆಯಲ್ಲಿರುವ ಈ ಒಂದು ಮಸಾಲೆ ಸಾಕು

ಹೆಪಟೈಟಿಸ್ ಬಿ - ಇದು ಕರೋನಿಕ್ ಕಾಯಿಲೆಯಾಗಿದ್ದು, ಆಂಟಿವೈರಲ್ ಔಷಧಿಗಳನ್ನು ಬಳಸಿ ಗುಣಪಡಿಸಿಕೊಳ್ಳಬಹುದು. ಅಲ್ಲದೆ ಲಸಿಕೆಯ ಮೂಲಕ ಕೂಡಾ ಇದರ ವಿರುದ್ದ ಪರಿಹಾರ ಕಂಡು ಕೊಳ್ಳಬಹುದು. 

ಹೆಪಟೈಟಿಸ್ ಸಿ- ಆಂಟಿವೈರಲ್ ಔಷಧಗಳು ಮತ್ತು ಚಿಕಿತ್ಸೆಗಳ ಮೂಲಕ ಈ ರೋಗವನ್ನು ನಿವಾರಿಸಬಹುದು. ರೋಗ ಲಕ್ಷಣಗಳು ಕಂಡುಬಂದಾಗ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಹೆಪಟೈಟಿಸ್ ಡಿ - ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, Pegylated Interferon Alphaವನ್ನು  ಹೆಪಟೈಟಿಸ್ ಡಿ ಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ :  ತಲೆನೋವನ್ನು ಕ್ಷಣಾರ್ಧದಲ್ಲೇ ಶಮನ ಮಾಡುತ್ತೆ ಈ ಮನೆಮದ್ದು

ಹೆಪಟೈಟಿಸ್ ಇ- ಈ ಕಾಯಿಲೆಗೆ ಸರಿಯಾದ ಔಷಧಿಯನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ. ಆದರೆ ಅನೇಕ ಬಾರಿ ಅದು ಸ್ವತಃ ಗುಣವಾಗುತ್ತದೆ. ಇದಕ್ಕಾಗಿ ಸಂಪೂರ್ಣ ವಿಶ್ರಾಂತಿ, ದ್ರವ ಪದಾರ್ಥಗಳ ಸೇವನೆ, ಆರೋಗ್ಯಕರ ಆಹಾರ ಕ್ರಮಗಳನ್ನು  ಅನುಸರಿಸಬೇಕಾಗುತ್ತದೆ. ಮದ್ಯಪಾನದಿಂದ ಸಂಪೂರ್ಣವಾಗಿ ದೂರವಿರಬೇಕು.

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News