Summer hair loss tips : ಬೇಸಿಗೆ ಬೆವರಿನಿಂದ ಕೂದಲು ಉದುರುತ್ತಿದೆಯೇ..? ಹೀಗೆ ಮಾಡಿ.. 9 ದಿನದಲ್ಲಿ ರಿಸಲ್ಟ್‌ ನೋಡಿ..!

Summer Hair Loss : ತಲೆ ಕೂದಲಿನಲ್ಲಿ ಬೆವರುವುದು ಸುಲಭವಾಗಿ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಇದಲ್ಲದೆ, ಕೂದಲಿನ ಗಂಭೀರ ಸಮಸ್ಯೆಗಳು ಬರುತ್ತವೆ. ಒಟ್ಟಿನಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಇಂತಹ ಹಲವು ಸಮಸ್ಯೆಗಳಿಂದ ಬಳಲುತ್ತಿರುವವರು ಈ ಕೆಳಗಿನ 3 ಸಲಹೆಗಳನ್ನು ಪಾಲಿಸಿದರೆ ಕೂದಲು ರಕ್ಷಣೆ ಮಾಡಬಹುದು.

Written by - Krishna N K | Last Updated : Apr 21, 2023, 05:00 PM IST
  • ಬೇಸಿಗೆ ಕಾಲದಲ್ಲಿ ತ್ವಚೆ ಮತ್ತು ಕೂದಲಿನ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತವೆ.
  • ಕೂದಲಿನ ರಕ್ಷಣೆಗೆ ಮನೆಮದ್ದು ಬಳಸುವುದು ಉತ್ತಮ.
  • ಈ ಕೆಳಗೆ ನೈಸರ್ಗಿಕವಾಗಿ ಕೂದಲಿನ ಸಂರಕ್ಷಣೆ ಮಾಡುವು ವಿಧಾನವನ್ನು ನೀಡಲಾಗಿದೆ. ಗಮನಿಸಿ..
Summer hair loss tips : ಬೇಸಿಗೆ ಬೆವರಿನಿಂದ ಕೂದಲು ಉದುರುತ್ತಿದೆಯೇ..? ಹೀಗೆ ಮಾಡಿ.. 9 ದಿನದಲ್ಲಿ ರಿಸಲ್ಟ್‌ ನೋಡಿ..! title=

Summer Hair Loss tips : ಬೇಸಿಗೆ ಕಾಲದಲ್ಲಿ ತ್ವಚೆ ಮತ್ತು ಕೂದಲಿನ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತವೆ. ಇದರ ಜೊತೆಗೆ ನಿರ್ಜಲೀಕರಣದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸದ್ಯ ಬಿಸಿಲಿನಿಂದ ಬೆವರು ಹೆಚ್ಚಿ ತಲೆ ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಅತಿಯಾಗಿ ಕಾಡುತ್ತಿದ್ದರೆ, ಈ ಕೆಳಗೆ ಕೆಲವೊಂದಿಷ್ಟು ಪರಿಹಾರಗಳನ್ನು ನೀಡಲಾಗಿದೆ ಗಮನಿಸಿ.

ಸೂಕ್ತ ಸಮಯದಲ್ಲಿ ಶಾಂಪೂ ಬಳಸಿ : ಬೇಸಿಗೆಯಲ್ಲಿ ಪ್ರತಿದಿನ ತಲೆ ಸ್ನಾನ ಮಾಡುವುದು ತುಂಬಾ ಒಳ್ಳೆಯದು. ಆದ್ರೆ, ನೀವು ಸಾವಯವ ಶ್ಯಾಂಪೂಗಳನ್ನು ಮಾತ್ರ ಬಳಸಬೇಕು. ಪ್ರತಿ ದಿನ ಇಂತಹ ಶ್ಯಾಂಪೂಗಳೊಂದಿಗೆ ಸ್ನಾನ ಮಾಡುವುದರಿಂದ ಕೂದಲಿನಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಅಲ್ಲದೆ, ಬೆವರಿನ ಸಮಸ್ಯೆಗಳನ್ನು ಸಹ ಇದು ತಪ್ಪಿಸುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಪ್ರತಿದಿನ ತಲೆ ಸ್ನಾನ ಮಾಡಬೇಕು.

ಇದನ್ನೂ ಓದಿ: ಈ ಸಮಸ್ಯೆಗಳಿದ್ದಲ್ಲಿ ಹೆಸರುಕಾಳು, ಹೆಸರು ಬೇಳೆ ತಿನ್ನಲೇ ಬಾರದು !

ಆಪಲ್ ವಿನೆಗರ್ : ಆಪಲ್ ವಿನೆಗರ್ ದೇಹಕ್ಕೆ ತುಂಬಾ ಒಳ್ಳೆಯದು. ಬ್ಯೂಟಿಷಿಯನ್‌ಗಳ ಪ್ರಕಾರ, ಆಪಲ್‌ ವಿನೆಗರ್‌ ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ ಎನ್ನುತ್ತಾರೆ. ಒಂದು ಚಮಚ ಆಪಲ್ ಸೈಡರ್ ವಿನೆಗರ್‌ ಅನ್ನು ಬಿಸಿನೀರಿನೊಂದಿಗೆ ಬೆರೆಸಿ ಮತ್ತು ನೆತ್ತಿಯನ್ನು 20 ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ಕೂದಲನ್ನು ತೊಳೆಯಿರಿ.

ನಿಂಬೆ ರಸ : ನಿಂಬೆ ರಸದಲ್ಲಿ ಕರಗುವ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ. ಈ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ವಾಸನೆಯನ್ನು ಸುಲಭವಾಗಿ ಹೋಗಲಾಡಿಸಬಹುದು. ನಿಂಬೆ ರಸವನ್ನು ಹೊರತೆಗೆದು ನೀರಿನೊಂದಿಗೆ ಬೆರೆಸಬೇಕು. ಇದಕ್ಕೆ ಸೇಬಿನ ವಿನೆಗರ್ ಸೇರಿಸಿ ಕೂದಲಿಗೆ ಹಚ್ಚಿ. 30 ನಿಮಿಷಗಳ ನಂತರ ಕೂದಲು ತೊಳೆಯಬೇಕು. ಹೀಗೆ ನಿತ್ಯ ಮಾಡುವುದರಿಂದ ಬೇಸಿಗೆಯಲ್ಲಿ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News