Spinach Juice Benefits: ವೇಗವಾಗಿ ಬದಲಾಗುತ್ತಿರುವ ಜೀವನಶೈಲಿಯಲ್ಲಿ ದೇಹವನ್ನು ಆರೋಗ್ಯಕರವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿಯೇ, ಉತ್ತಮ ಆರೋಗ್ಯಕ್ಕಾಗಿ ಹಸಿರು ತರಕಾರಿಗಳ ಸೇವನೆ ಕೂಡ ಅತ್ಯಗತ್ಯ. ಜನರು ಚಳಿಗಾಲದಲ್ಲಿ ಪಾಲಕ್ ಸೊಪ್ಪನ್ನು ತಿನ್ನಲು ಇಷ್ಟಪಡುತ್ತಾರೆ, ಆದರೆ ಬೇಸಿಗೆಯಲ್ಲಿ ಪಾಲಕ್ ರಸವನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಅದರಲ್ಲೂ ನಿತ್ಯ ಬೆಳಿಗ್ಗೆ ಪಾಲಕ್ ರಸವನ್ನು ಸೇವಿಸುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಪಾಲಕ್ ಸೊಪ್ಪು ಸಾಕಷ್ಟು ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದ್ದು ದೇಹವನ್ನು ಆರೋಗ್ಯವಾಗಿರಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಐರನ್ ಸಮೃದ್ಧವಾಗಿದೆ. ಪಾಲಕ್ ತಿನ್ನುವುದು ದೃಷ್ಟಿ ಹೆಚ್ಚಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ಸರಿಯಾಗಿ ಕಾಪಾಡಿಕೊಳ್ಳಲು ಪ್ರಯೋಜನಕಾರಿಯಾಗಿದೆ.
ಪಾಲಕ್ ರಸ ಏಕೆ ಮುಖ್ಯ?
ಪಾಲಕ್ ಸೊಪ್ಪನ್ನು (Spinach Benefits) ಆಹಾರದಲ್ಲಿ ಸೇರಿಸುವುದರಿಂದ ಅನೇಕ ದೈಹಿಕ ಕಾಯಿಲೆಗಳನ್ನು ದೂರವಿಡಬಹುದು. ಪಾಲಕ್ ಸೊಪ್ಪು ಮುಖ್ಯವಾಗಿ ಕ್ಯಾಲ್ಸಿಯಂ, ಸೋಡಿಯಂ, ಕ್ಲೋರಿನ್, ರಂಜಕ, ಕಬ್ಬಿಣ, ಖನಿಜ ಲವಣಗಳು, ಪ್ರೋಟೀನ್, ಕಬ್ಬಿಣ, ವಿಟಮಿನ್ ಎ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಪಾಲಕ್ ರಸವನ್ನು ಸೇವಿಸುವ ಮೂಲಕ ವೈರಲ್ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ- Skin Care Tips: ಹೊಳೆಯುವ ತ್ವಚೆಗೆ ಬಹಳ ಪ್ರಯೋಜನಕಾರಿ ಮೊಸರು
ಪಾಲಕ್ ರಸವನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು:
1. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ರೋಗನಿರೋಧಕ (Immunity) ಶಕ್ತಿಯನ್ನು ಹೆಚ್ಚಿಸಲು ಪಾಲಕ್ ರಸವು ಉತ್ತಮ ಆಯ್ಕೆಯಾಗಿದೆ. ಆದ್ದರಿಂದ ನೀವು ಅದನ್ನು ಆಹಾರದಲ್ಲಿ ಸೇರಿಸಬಹುದು. ಇದರಲ್ಲಿರುವ ಮೆಗ್ನೀಸಿಯಮ್ ದೇಹಕ್ಕೆ ಶಕ್ತಿ ನೀಡಲು ಕೆಲಸ ಮಾಡುತ್ತದೆ. ಪಾಲಕ್ ಸೊಪ್ಪಿನ ಜ್ಯೂಸ್ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಅನೇಕ ರೀತಿಯ ವೈರಲ್ ಸೋಂಕುಗಳಿಂದ ದೂರವಿರಬಹುದು.
2. ಕಣ್ಣುಗಳಿಗೆ ಪ್ರಯೋಜನಕಾರಿ:
ಪಾಲಕ್ ಸೊಪ್ಪಿನ ಜ್ಯೂಸ್ ದೃಷ್ಟಿಯನ್ನು ಸಹ ಹೆಚ್ಚಿಸುತ್ತದೆ. ಇದಲ್ಲದೇ ಪಾಲಕ್ ಸೊಪ್ಪಿನ ರಸವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮಗೊಳ್ಳುತ್ತದೆ.
3. ಜೀರ್ಣಕ್ರಿಯೆ ಬಲವಾಗಿರುತ್ತದೆ:
ಪಾಲಕ್ ಸೊಪ್ಪಿನ ರಸವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಪಾಲಕ್ ಸೊಪ್ಪಿನಲ್ಲಿ ಕಂಡುಬರುವ ಅಂಶಗಳು ದೇಹದಿಂದ ಕೆಟ್ಟ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಮಲಬದ್ಧತೆ ಸಮಸ್ಯೆಯನ್ನೂ ಹೋಗಲಾಡಿಸುತ್ತದೆ.
ಇದನ್ನೂ ಓದಿ- Benefits Of Coconut Water: ಬೇಸಿಗೆಯಲ್ಲಿ ಎಳನೀರಿನ ಸೇವನೆ ಏಕೆ ಮುಖ್ಯ?
4. ತೂಕ ನಷ್ಟದಲ್ಲಿ ಸಹಾಯಕವಾಗಿದೆ:
ಸ್ಥೂಲಕಾಯದ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಖಂಡಿತವಾಗಿಯೂ ಪಾಲಕ್ ರಸವನ್ನು ಆಹಾರದಲ್ಲಿ ಸೇರಿಸಿ. ಪಾಲಕ್ ಸೊಪ್ಪಿನಲ್ಲಿ ನಾರಿನಂಶ ಹೆಚ್ಚಿರುತ್ತದೆ ಮತ್ತು ಅದೇ ಸಮಯದಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆಯಿರುತ್ತದೆ, ಇದು ತೂಕವನ್ನು ಕಡಿಮೆ (Weight Loss) ಮಾಡಲು ಸಹಕಾರಿಯಾಗಿದೆ.
5. ಮೂಳೆಗಳನ್ನು ಸ್ಟ್ರಾಂಗ್ ಮಾಡುತ್ತದೆ:
ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಪಾಲಕ್ ಸೊಪ್ಪಿನಲ್ಲಿ ಕಂಡುಬರುತ್ತವೆ, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.