ಅಪ್ಪಿತಪ್ಪಿಯೂ ಕೂಡ ಮುಂಚಿತವಾಗಿ ಹೆಚ್ಚಿಟ್ಟ ಈರುಳ್ಳಿ ಸೇವಿಸಬೇಡಿ... ಕಾರಣ ಇಲ್ಲಿದೆ

ಈರುಳ್ಳಿ ಕಟ್ ಮಾಡಿ ಮೊದಲೇ ಇಟ್ಟುಕೊಳ್ಳುವುದರಿಂದ, ಅದರಲ್ಲಿ ಅಪಾಯಕಾರಿ  ಬ್ಯಾಕ್ಟೀರಿಯಾ ಸೇರಿಕೊಳ್ಳುತ್ತವೆ. ಅದನ್ನು ಕೇವಲ ತಿನ್ನುವುದರಿಂದ ಅವು ನಾಶವಾಗುವುದಿಲ್ಲ ಮತ್ತು  ಅವು ಇನ್ನಷ್ಟು ಹೆಚ್ಚು ಅಪಾಯಕಾರಿಯಾಗಿ ಬೆಳೆಯುತ್ತವೆ. ಇದು ಫುಡ್ ಪಾಯ್ಸನಿಂಗ್ ಗೆ ಕಾರಣವಾಗಬಹುದು.

Last Updated : Aug 16, 2020, 09:14 PM IST
ಅಪ್ಪಿತಪ್ಪಿಯೂ ಕೂಡ ಮುಂಚಿತವಾಗಿ ಹೆಚ್ಚಿಟ್ಟ ಈರುಳ್ಳಿ ಸೇವಿಸಬೇಡಿ... ಕಾರಣ ಇಲ್ಲಿದೆ  title=

ನವದೆಹಲಿ: ಕರೋನಾ ಕಾಲದಲ್ಲಿ ಹೌಸ್ ಮೇಡ್ ಗಳು ಮನೆಗೆ ಬರುತ್ತಿಲ್ಲ, ಈ ಸಂದರ್ಭದಲ್ಲಿ ಎಲ್ಲಾ ಕೆಲಸಗಳನ್ನು ಸ್ವತಃ ಮಾಡಬೇಕಾಗಿದೆ. ವರ್ಕ್ ಫ್ರಮ್ ಹೋಮ್ ಇರುವುದರಿಂದ ಕೆಲಸದ ಅವಧಿಯೂ ಕೂಡ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಮಹಿಳೆಯರು ತರಕಾರಿಗಳನ್ನು ಮೊದಲೇ ಕತ್ತರಿಸಿ ಇಡುತ್ತಾರೆ. ವಿಶೇಷವಾಗಿ ಈರುಳ್ಳಿ. ಇದರಿಂದ ಅಡುಗೆ ಬೇಗ ಸಿದ್ಧಪಡಿಸಬಹುದು. ಸಲಾಡ್ ಅನ್ನು ಮೊದಲೇ ಕತ್ತರಿಸಿ ಫ್ರಿಜ್ ನಲ್ಲಿ ಇಡಲಾಗುತ್ತದೆ. ಆದರೆ, ಮೊದಲೇ ಕತ್ತರಿಸಿಟ್ಟ ಈರುಳ್ಳಿ ಫುಡ್ ಪಾಯ್ಸನಿಂಗ್ ಗೆ ಕಾರಣವಾಗುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಇಲ್ಲ ಎಂದರೆ ಈ ವರದಿ ಓದಿ.

ಕತ್ತರಿಸಿ ಇಟ್ಟ ಹಳೆ ಈರುಳ್ಳಿ ಎಂದಿಗೂ ಸೇವಿಸಬೇಡಿ
ದೇಹದಲ್ಲಿ ಪಿತ್ತ ಶಾಂತಗೊಳಿಸಲು ಈರುಳ್ಳಿ ಒಂದು ಉತ್ತಮ ಔಷಧಿಯಾಗಿದೆ. ಪಿತ್ತವನ್ನು ಸಂತುಲಿತಗೊಳಿಸಲು ಈರುಳ್ಳಿ ಒಂದು ಉತ್ತಮ ತರಕಾರಿಯಾಗಿದೆ. ಆದರೆ, ಈ ಗುಣ ಬಿಳಿ ಈರುಳ್ಳಿಯಲ್ಲಿರುತ್ತದೆ. ಕೆಂಪು ಈರುಳ್ಳಿಯನ್ನು ನೀವು ರುಚಿಗಾಗಿ ಸೇವಿಸಬಹುದು. ಕೆಲವರು ಈರುಳ್ಳಿಯನ್ನು ಸಂಗ್ರಹಿಸಿ ಇಡುತ್ತಾರೆ. ಆದರೆ, ಇದು ಸರಿಯಲ್ಲ. ಕೆಂಪು ಮತ್ತು ತಿಳಿ ಹಳದಿ ಬಣ್ಣದ ಈರುಲ್ಲಿಗಳು ದೀರ್ಘ ಕಾಲದವರೆಗೆ ಬಾಳುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಪ್ರಕಾರದ ಈರುಳ್ಳಿ ದೀರ್ಘ ಕಾಲದವರೆಗೆ ಶೇಖರಿಸಿ ಇಡುವುದರಿಂದ ಇವುಗಳಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ ಹಾಗೂ ಇದು ನಿಮ್ಮ ಶರೀರಕ್ಕೆ ತುಂಬಾ ಹಾನಿಕಾರಕವಾಗಿರುತ್ತದೆ.

ಮೊದಲಿನಿಂದಲೇ ಕಟ್ ಮಾಡಿಟ್ಟ ಈರುಳ್ಳಿಯಲ್ಲಿ ಸ್ವಲ್ಪ ಕಾಲದ ಬಳಿಕ ಬ್ಯಾಕ್ಟಿರಿಯಾಗಳು ಉತ್ಪತ್ತಿಯಾಗುತ್ತವೆ. ಸೇವನೆಯಿಂದ ಈ ಬ್ಯಾಕ್ತಿರೀಯಾಗಳು ನಾಶವಾಗುವುದಿಲ್ಲ ಹಾಗೂ ಮತ್ತಷ್ಟು ಹೆಚ್ಚಾಗುತ್ತವೆ. ಇದರಿಂದ ನಿಮಗೆ ಫುಡ್ ಪಾಯ್ಸನಿಂಗ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. 

ಕಚ್ಚಾ ಈರುಳ್ಳಿ
ಕಚ್ಚಾ ಈರುಳ್ಳಿ ಆಂಟಿ ಬ್ಯಾಕ್ಟೀರಿಯಲ್ ಆಗಿರುತ್ತದೆ. ಆದರೆ, ಕೆಲವರು ಕಚ್ಚಾ ಈರುಳ್ಳಿ ಸೇವಿಸದೆ ಇರುವುದು ಉತ್ತಮ.  ಲೀವರ್ ಗೆ ಸಂಬಂಧಿಸಿದ ಕಾಯಿಲೆ ಇರುವವರು ಕಚ್ಚಾ ಈರುಳ್ಳಿ ಸೇವಿಸುವುದು ಉತ್ತಮ. ಶರೀರದಲ್ಲಿ ರಕ್ಸ್ತದ ಕೊರತೆ ಇರುವವರು, ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು, ರಕ್ತದೊತ್ತಡ ಸಮಸ್ಯೆ ಇರುವವರು ಕಚ್ಚಾ ಈರುಳ್ಳಿ ಸೇವಿಸುವುದು ಉತ್ತಮ. ಆದರೆ, ಬ್ಲೀಡಿಂಗ್ ಸಮಸ್ಯೆ ಇರುವವರು ಕಚ್ಚಾ ಈರುಳ್ಳಿ ಸೇವಿಸಿದರೆ ಬ್ಲೀಡಿಂಗ್ ಹೆಚ್ಚಾಗುವ ಸಾಧ್ಯತೆ ಇದೆ. 

Trending News