Winter Health tips : ಚಳಿಗಾಲ ಇದೆ ಅಂತ ಮಲ್ಕೊಂಡೆ ಇರ್ಬೇಡಿ.. ಮಾರ್ನಿಂಗ್‌ ಈ ಕೆಲಸ ಮಾಡಿ..!

ಮಾಂಡೋಸ್‌ ಚಂಡಮಾರುತ ಪ್ರಭಾವದಿಂದಾಗಿ ಚಳಿಗಾಲದಲ್ಲಿ ಈ ಭಾರಿ ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಆಗಂತ ಯಪ್ಪಾ... ಎನ್‌ ಚಳಿ ಮಾರಾಯ.. ಅಂತ ಸೂರ್ಯ ನೆತ್ತಿಯ ಮೇಲೆ ಬರೋವರೆಗೂ ಮನೆಯಲ್ಲೇ ಮಲಗುವುದನ್ನು ಬಿಟ್ಟು ಎದ್ದು ರನ್ನಿಂಗ್‌ ಹೋದ್ರೆ ದೇಹಕ್ಕೆ ತುಂಬಾ ಒಳ್ಳೆಯದು ಗೊತ್ತಾ..! ಅಯ್ಯೋ ಇದೊಳ್ಳೆ ಕಥೆ ಆಯ್ತು. ಚುಮುಚುಮು ಚಳಿಯಲ್ಲಿ ಎಲ್ಲಿಗೆ ಹೋಗೋದು.. ಬೆಚ್ಚಗೆ ಮನೆಲಿ ಇದ್ರೆ ಸಾಕು ಅನ್ನೋದಲ್ಲ. ಕೆಲವೊಂದು ಮುಂಜಾಗೃತ ಕ್ರಮಗಳನ್ನು ಬಳಸಿ ರನ್ನಿಂಗ್‌ ಮಾಡಿದ್ರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ.

Written by - Krishna N K | Last Updated : Dec 20, 2022, 04:59 PM IST
  • ಚಳಿಗಾಲದಲ್ಲಿ ಈ ಭಾರಿ ಚಳಿ ಹೆಚ್ಚಾಗುವ ಸಾಧ್ಯತೆ ಇದೆ.
  • ಸೂರ್ಯ ನೆತ್ತಿಯ ಮೇಲೆ ಬರೋವರೆಗೂ ಮನೆಯಲ್ಲೇ ಮಲಗುವುದನ್ನು ಬಿಡಿ.
  • ಎದ್ದು ರನ್ನಿಂಗ್‌ ಹೋದ್ರೆ ದೇಹಕ್ಕೆ ತುಂಬಾ ಒಳ್ಳೆಯದು ಗೊತ್ತಾ..!
Winter Health tips : ಚಳಿಗಾಲ ಇದೆ ಅಂತ ಮಲ್ಕೊಂಡೆ ಇರ್ಬೇಡಿ.. ಮಾರ್ನಿಂಗ್‌ ಈ ಕೆಲಸ ಮಾಡಿ..! title=

Winter Health tips : ಮಾಂಡೋಸ್‌ ಚಂಡಮಾರುತ ಪ್ರಭಾವದಿಂದಾಗಿ ಚಳಿಗಾಲದಲ್ಲಿ ಈ ಭಾರಿ ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಆಗಂತ ಯಪ್ಪಾ... ಎನ್‌ ಚಳಿ ಮಾರಾಯ.. ಅಂತ ಸೂರ್ಯ ನೆತ್ತಿಯ ಮೇಲೆ ಬರೋವರೆಗೂ ಮನೆಯಲ್ಲೇ ಮಲಗುವುದನ್ನು ಬಿಟ್ಟು ಎದ್ದು ರನ್ನಿಂಗ್‌ ಹೋದ್ರೆ ದೇಹಕ್ಕೆ ತುಂಬಾ ಒಳ್ಳೆಯದು ಗೊತ್ತಾ..! ಅಯ್ಯೋ ಇದೊಳ್ಳೆ ಕಥೆ ಆಯ್ತು. ಚುಮುಚುಮು ಚಳಿಯಲ್ಲಿ ಎಲ್ಲಿಗೆ ಹೋಗೋದು.. ಬೆಚ್ಚಗೆ ಮನೆಲಿ ಇದ್ರೆ ಸಾಕು ಅನ್ನೋದಲ್ಲ. ಕೆಲವೊಂದು ಮುಂಜಾಗೃತ ಕ್ರಮಗಳನ್ನು ಬಳಸಿ ರನ್ನಿಂಗ್‌ ಮಾಡಿದ್ರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ.

ಹೌದ.. ಇದು ನಿಜ.. ಚಳಿಗಾಲದಲ್ಲಿ ರನ್ನಿಂಗ್‌ ಸೇರಿದಂತೆ ಹೊರಾಂಗಣ ಚಟುವಟಿಕೆ ಮಾಡುವುದು ಹಲವಾರು ವಿಧಗಳಲ್ಲಿ ನಿಮಗೆ ಒಳ್ಳೆಯದು. ಇದು ನಿಮ್ಮ ದೇಹಕ್ಕೆ ವಿಟಮಿನ್ ಡಿ ಹೆಚ್ಚಿಸಲು ಅವಕಾಶಗಳನ್ನು ಒದಗಿಸುತ್ತದೆ. ಆದ್ರೆ, ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಚಳಿಗಾಲದಲ್ಲಿ ರನ್ನಿಗೆ ಮಾಡಿದ್ರೆ ಸದೃಢ ದೇಹವನ್ನು ಪಡೆಯಬಹುದು. ರನ್ನಿಂಗ್‌ ಮಾಡುವಾಗ ನಿಮ್ಮನ್ನು ಸುರಕ್ಷಿತವಾಗಿ ಮತ್ತು ಬೆಚ್ಚಗಿಡಲು ಕೆಲವು ಸಲಹೆಗಳು ಇಲ್ಲಿವೆ ನೊಡಿ.

ಇದನ್ನೂ ಓದಿ: ಈ ರೋಗಗಳಿಂದ ಮುಕ್ತಿ ಪಡೆಯಲು ಚಳಿಗಾಲದಲ್ಲಿ ತಪ್ಪದೇ ಸೇವಿಸಿ ಖರ್ಜೂರ

ಬೆಚ್ಚನೆ ಬಟ್ಟೆ, ಶೂ ಧರಿಸಿ : ಯೆಸ್‌ ಓಟ ಆರಂಭಿಸುವ ಮುನ್ನ ಉತ್ತಮ ಶೂಗಳನ್ನು ಹಾಕಿಕೊಳ್ಳಬೇಕು. ಅವುಗಳು ಒದ್ದೆಯಾಗಿರಬಾರದು. ತಲೆಗೆ ಟೋಪಿ ಧರಿಸಿ. ಒಮ್ಮೆ ವೇಗವಾಗಿ ಓಡಲು ಪ್ರಾರಂಭ ಮಾಡಬೇಡಿ. ಏಕೆಂದ್ರೆ ದೇಹದ ಭಾಗಗಳು ಚಳಿಗೆ ಹಿಡಿದುಕೊಂಡಿರುತ್ತವೆ. ದೇಹವನ್ನು ಬೆಚ್ಚಗಾಗಿಸಲು ಸ್ವಲ್ಪ ವಾರ್ಮ್‌ ಅಪ್‌ ಮಾಡಿ ನಂತರ ನಿಧಾನವಾಗಿ ಓಡಲು ಪ್ರಾರಂಭಿಸಿ. ಹಾಗೆ ಕೈಗವಸು ಧರಿಸುವುದನ್ನು ಮರೆಯಬೇಡಿ.

ಹೆಚ್ಚು ನೀರು ಕುಡಿಯಿರಿ : ಬೇಸಿಗೆಯಲ್ಲಿ ನೀರಿದ ದಾಹ ಹೆಚ್ಚಾಗುತ್ತೆ ಎನ್ನುವುದಕ್ಕಿಂತ ದೇಹದಲ್ಲಿ ನೀರಿನ ಪ್ರಮಾಣ ಚಳಿಗಾಲದಲ್ಲೂ ಕಡಿಮೆಯಾಗುತ್ತದೆ. ಅದಕ್ಕಾಗಿ ಸದಾ ದೇಹವನ್ನು ಹೈಡ್ರೇಟೆಡ್ ಆಗಿರಿಸಿರಿ. ನಿಮ್ಮ ದೇಹಕ್ಕೆ ನೀರಿನ ಅಗತ್ಯವಿರುತ್ತದೆ. ಓಟ ಪ್ರಾರಂಭಿಸುವ ಸ್ವಲ್ಪ ಮುಂಚಿತವಾಗಿ ನೀರು ಕುಡಿಯಿರಿ ಹಾಗೂ ದಾರಿಯುದ್ದಕ್ಕೂ ಕುಡಿಯಲು ನೀರನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. 

ಇದನ್ನೂ ಓದಿ: Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಹೇಗಿರಬೇಕು..?

ವೈದ್ಯರನ್ನು ಸಂಪರ್ಕಿಸಿ : ಓಟದ ವೇಳೆ ಏನಾದರೂ ತೊಂದರೆ ಆದ್ರೆ ನಿಲ್ಲಿ. ನಿಮ್ಮ ಎದೆ ನೋಯಿಸಲು ಪ್ರಾರಂಭಿಸಿದರೆ ಇಲ್ಲವೆ, ನಿಮ್ಮ ಕಾಲಿನ ಸ್ನಾಯು ಸೆಳೆತವಾದ್ರೆ ನೀವೆ ಚಿಕಿತ್ಸೆ ಮಾಡಿಕೊಂಡು ಕುಳಿತುಕೊಳ್ಳಬೇಡಿ. ವೈದ್ಯರಿಗೆ ಕರೆ ಮಾಡಿ. ಅದಕ್ಕೂ ಮೊದಲು ನೀವು ಯಾವ ಸ್ಥಳಕ್ಕೆ ವಾಕಿಂಗ್‌ ಹೋಗುತ್ತಿದ್ದಿರಾ ಎಂದು ಮನೆಯವರಿಗೆ ತಿಳಿಸಿ ಹೋಗುವುದು ಉತ್ತಮ. 

ಶೀತ ವಾತಾವರಣದಲ್ಲಿ ಓಡುವುದರಿಂದ ಏನು ಪ್ರಯೋಜನ? : ಶೀತ ವಾತಾವರಣದಲ್ಲಿ ಓಡುವುದರ ಪ್ರಮುಖ ಪ್ರಯೋಜನವೆಂದರೆ ನೀವು ಕೆಲವು ಏರೋಬಿಕ್ ವ್ಯಾಯಾಮವನ್ನು ಪಡೆಯುತ್ತೀರಿ. ಹೆಚ್ಚಾಗಿ ತಂಪಾದ ತಾಪಮಾನವು ನಿಮ್ಮ ಚಯಾಪಚಯ ಕ್ರಿಯೆಯನ್ನು ಪುನರುಜ್ಜೀವನಗೊಳಿಸುತ್ತದೆ. ಕ್ಯಾಲೊರಿಗಳನ್ನು ಸುಡುತ್ತದೆ. ಇದರಿಂದ ನೀವು ಸ್ಲೀಮ್‌ ಅಗ್ತೀರಾ..

ಇದನ್ನೂ ಓದಿ: Health Care : ಈ ರೀತಿಯ ಆಹಾರಗಳು ನಿಮ್ಮನ್ನು ಮರೆವಿನ ಕಾಯಿಲೆಗೆ ದೂಡಬಹುದು!

ಎಚ್ಚರಿಕೆ : ನೀವು ಹೃದಯ ರೋಗದ ಸಮಸ್ಯೆ ಹೊಂದಿದ್ದರೆ ಜಾಗರೂಕರಾಗಿರಿ. ಹೃದಯರಕ್ತನಾಳದ ಕಾಯಿಲೆಯ ಹಿನ್ನೆಲೆ ಹೊಂದಿರುವ ಜನರು ಜಾಗರೂಕರಾಗಿರಬೇಕು. ತುಂಬಾ ತಂಪಾಗಿರುವಾಗ ಹೊರಗೆ ವ್ಯಾಯಾಮ ಮಾಡುವುದು ಹೃದಯಕ್ಕೆ ಒತ್ತಡವನ್ನು ಉಂಟುಮಾಡಬಹುದು. ಉದಾಹರಣೆಗೆ, ಶೀತವು ರಕ್ತದೊತ್ತಡವನ್ನು ಹೆಚ್ಚಿಸಲು ಕಾರಣವಾಗಬಹುದು ಎಂದು ವಿಶ್ವಾಸಾರ್ಹ ಮೂಲ ಸಂಶೋಧನೆ ಸೂಚಿಸುತ್ತದೆ. ಹಠಾತ್ ಅಥವಾ ಹೆಚ್ಚಾದ ವ್ಯಾಯಾಮ ಹೃದ್ರೋಗ ಹೊಂದಿರುವ ಕೆಲವು ಜನರಿಗೆ ಅಪಾಯಕಾರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News