ಈ ಐದು ಕಾಯಿಲೆಯನ್ನು ಬುಡದಿಂದಲೇ ನಾಶ ಮಾಡುತ್ತದೆ ಹುರಿಗಡಲೆ !

Roasted Chana Benefits:ಒಮ್ಮೊಮ್ಮೆ ಟೈಮ್ ಪಾಸ್ ಗಾಗಿ ನಾವು ಸೇವಿಸುವ ಕೆಲವೊಂದು ವಸ್ತುಗಳು ನಮ್ಮ ಆರೋಗ್ಯಕ್ಕೆ ಆರೋಗ್ಯದ ಗಣಿಯಾಗಿ ಕೆಲಸ ಮಾಡುತ್ತದೆ. ಅಂಥಹ ಆಹಾರ ಪದಾರ್ಥಗಳಲ್ಲಿ ಹುರಿಗಡಲೆ ಕೂಡಾ ಒಂದು.  

Written by - Ranjitha R K | Last Updated : Jan 25, 2024, 06:45 PM IST
  • ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಹುರಿಗಡಲೆ ಪ್ರಮುಖ ಪಾತ್ರ ವಹಿಸುತ್ತದೆ.
  • ಸಕ್ಕರೆ ಮಟ್ಟ ನಿಯಂತ್ರಣದಲಿರುತ್ತದೆ
  • ಮಲಬದ್ಧತೆಯಿಂದ ಪರಿಹಾರ ಸಿಗುತ್ತದೆ
ಈ ಐದು ಕಾಯಿಲೆಯನ್ನು ಬುಡದಿಂದಲೇ ನಾಶ ಮಾಡುತ್ತದೆ ಹುರಿಗಡಲೆ ! title=

Roasted Chana Benefits : ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆ ಎನ್ನುವುದು ಬಹಳ ಮುಖ್ಯ. ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯವನ್ನು ಕಾಪಾಡುವುದು.ಒಮ್ಮೊಮ್ಮೆ ಟೈಮ್ ಪಾಸ್ ಗಾಗಿ ನಾವು ಸೇವಿಸುವ ಕೆಲವೊಂದು ವಸ್ತುಗಳು ನಮ್ಮ ಆರೋಗ್ಯಕ್ಕೆ ಆರೋಗ್ಯದ ಗಣಿಯಾಗಿ ಕೆಲಸ ಮಾಡುತ್ತದೆ. ಅಂಥಹ ಆಹಾರ ಪದಾರ್ಥಗಳಲ್ಲಿ ಹುರಿಗಡಲೆ ಕೂಡಾ ಒಂದು. ಹುರಿಗಡಲೆಯಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣ ಹೇರಳವಾಗಿ ಕಂಡುಬರುತ್ತದೆ.ಇದು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

1.ಸಕ್ಕರೆ ಮಟ್ಟ ನಿಯಂತ್ರಣದಲಿರುತ್ತದೆ  : 
ಮಧುಮೇಹಿಗಳು ತಮ್ಮ ಆಹಾರದಲ್ಲಿ ಹುರಿಗಡಲೆ ಸೇರಿಸಿಕೊಳ್ಳಬೇಕು. ಹುರಿಗಡಲೆ ರಕ್ತದಲ್ಲಿನ ಗ್ಲೂಕೋಸ್ ಅನ್ನು ಹೀರಿಕೊಳ್ಳುತ್ತದೆ. ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದರೆ ನಿತ್ಯ ಒಂದು ಮುಷ್ಠಿ ಹುರಿಗಡಲೆ ತಿಂದರೆ ಸಾಕು. 

ಇದನ್ನೂ ಓದಿ:  ಈ ಐದು ಸಮಸ್ಯೆ ನಿಮಗಿದ್ದರೆ ತಿನ್ನಲೇಬೇಡಿ ಮೂಲಂಗಿ ! ಆರೋಗ್ಯದ ಮೇಲಾಗುವುದು ಭಾರೀ ಪರಿಣಾಮ

2. ಮಲಬದ್ಧತೆಯಿಂದ ಪರಿಹಾರ : 
ಹೊಟ್ಟೆ ಸ್ವಚ್ಛವಾಗಿಲ್ಲದಿದ್ದರೆ ಅಥವಾ ಮಲಬದ್ಧತೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ,ಹುರಿಗಡಲೆ  ಔಷಧಿಯಾಗಿ ಕೆಲಸ ಮಾಡುತ್ತದೆ. ಹುರಿಗಡಲೆಯಲ್ಲಿ  ನಾರಿನಂಶ ಅಥವ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.  ಇದು ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. 

3. ರಕ್ತದ ಕೊರತೆ ಸರಿದೂಗಿಸುತ್ತದೆ :  
ಹುರಿಗಡಲೆಯಲ್ಲಿ ಕಬ್ಬಿಣದ ಅಂಶ ಕೂಡಾ ಹೇರಳವಾಗಿ ಕಂಡುಬರುತ್ತದೆ. ದೇಹದಲ್ಲಿ ರಕ್ತದ ಕೊರತೆಯಿದ್ದರೆ ಪ್ರತಿದಿನ ಒಂದು ಹಿಡಿ ಹುರಿಗಡಲೆ ತಿನ್ನಬೇಕು. ಇದನ್ನು ಸೇವಿಸುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ ಮತ್ತು ರಕ್ತಹೀನತೆಯೂ ಕಡಿಮೆಯಾಗುತ್ತದೆ. 

ಇದನ್ನೂ ಓದಿ: ಪೋಷಕರೇ..! ಮಕ್ಕಳ ಮೂಗಿನಲ್ಲಿ ರಕ್ತಸ್ರಾವಕ್ಕೆ ಕಾರಣವೇನು ಗೊತ್ತಾ?

4. ತೂಕ ಇಳಿಕೆಗೆ ಸಹಕಾರಿ :
ಮೊದಲೇ ಹೇಳಿದಂತೆ ಹುರಿಗಡಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೈಬರ್  ಕಂಡುಬರುತ್ತದೆ. ಇದನ್ನು ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದು ದೇಹ ತೂಕ ಹೆಚ್ಚಿಸಲು ಆವಕಾಶ ಮಾಡುವುದಿಲ್ಲ. ದೇಹದ ಬೊಜ್ಜು ಕಡಿಮೆ ಮಾಡಲು ಕೂಡ ಇದು ಸಹಾಯ ಮಾಡುತ್ತದೆ. 

5. ರೋಗನಿರೋಧಕ ಶಕ್ತಿ  ಹೆಚ್ಚಳ : 
ಚಳಿಗಾಲದಲ್ಲಿ, ಶೀತ, ಜ್ವರ ಮತ್ತು ಕೆಮ್ಮಿನಂತಹ ಋತುಮಾನದ ಕಾಯಿಲೆಗಳು ಹೆಚ್ಚಾಗಿ ಕಾಡುತ್ತವೆ. ಈ ಕಾಯಿಲೆಗಳಿಂದ ದೂರವಿರಲು, ದೈನಂದಿನ ಆಹಾರದಲ್ಲಿ ಒಂದು ಹಿಡಿ ಹುರಿಗಡಲೆ ಸೇರಿಸಿಕೊಳ್ಳಬೇಕು.

(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News