ನವದೆಹಲಿ : ಚಳಿಗಾಲವು ಪ್ರಾರಂಭವಾಗಿದೆ. ಈ ಋತುವಿನಲ್ಲಿ ಮಾರುಕಟ್ಟೆಯಲ್ಲಿ ಅನೇಕ ತರಕಾರಿಗಳನ್ನು ಕಾಣಬಹುದು. ಹಸಿರು ತರಕಾರಿಗಳು ಚಳಿಗಾಲದಲ್ಲಿ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಹಸಿರು ತರಕಾರಿ ಮಾತ್ರವಲ್ಲ ಇತರ ಕೆಲವು ತರಕಾರಿಗಳು ಕೂಡಾ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತವೆ. ಹೌದು ಇಂದು ನಾವು ಮೂಲಂಗಿಯ (Radish) ಪ್ರಯೋಜನಗಳ ಬಗ್ಗೆ ಹೇಳಲಿದ್ದೇವೆ. ಮೂಲಂಗಿ ರೋಗನಿರೋಧಕ ಶಕ್ತಿಯನ್ನು (immunity) ಹೆಚ್ಚಿಸುತ್ತದೆ. ಮೂಲಂಗಿ ದೇಹಕ್ಕೆ ನೀಡುವ 7 ಪ್ರಯೋಜನಗಳಿಗಾಗಿ ಅದನ್ನು ಸೇವಿಸಲೇ ಬೇಕು.
ಮೂಲಂಗಿಯ ಪ್ರಯೋಜನಗಳು :
1.ನೀವು ಚಳಿಗಾಲದಲ್ಲಿ ಪ್ರತಿದಿನ ಮೂಲಂಗಿಯನ್ನು ಸೇವಿಸಿದರೆ, ನಿಮ್ಮ ರೋಗನಿರೋಧಕ ಶಕ್ತಿ (immunity) ತುಂಬಾ ಬಲವಾಗಿರುತ್ತದೆ ಮತ್ತು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ತಡೆಯಲು ಸಾಧ್ಯವಾಗುತ್ತದೆ.
2. ಮೂಲಂಗಿಯನ್ನು (radish) ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ. ಮೂಲಂಗಿಯಲ್ಲಿ ಅಂಥಾಸಾರ್ನಿನ್ ಇದ್ದು, ಇದು ಹೃದ್ರೋಗದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
3. ಚಳಿಗಾಲದಲ್ಲಿ ಮೂಲಂಗಿಯನ್ನು (Radish for winter) ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ ಮತ್ತು ಆಹಾರವು ಚೆನ್ನಾಗಿ ಜೀರ್ಣವಾಗುತ್ತದೆ.
ಇದನ್ನೂ ಓದಿ : Honey for Childrens : ಹುಟ್ಟಿದ ಮಗುವಿಗೆ ಜೇನುತುಪ್ಪ ತಿನ್ನಿಸುವುದು ಯಾವಾಗ? ಇದರ ಪ್ರಯೋಜನಗಳೇನು?
4. ಮನೆಯಲ್ಲಿ ಮಧುಮೇಹಿಗಳಿದ್ದರೆ ಮೂಲಂಗಿಯ ಬಿಳಿ ಭಾಗವನ್ನು ಸೇವಿಸುವುದು ತುಂಬಾ ಒಳ್ಳೆಯದು. ಮೂಲಂಗಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು (Sugar level) ಕಡಿಮೆಯಾಗುತ್ತದೆ. ಆದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುವವರು ಮೂಲಂಗಿಯನ್ನು ಸೇವಿಸಬಾರದು. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿದ್ದರೆ ಮೂಲಂಗಿ ತಿನ್ನುವುದಕ್ಕೂ ಮುನ್ನ ವೈದ್ಯರನ್ನೊಮ್ಮೆ ಸಂಪರ್ಕಿಸಿ.
5. ದೈಹಿಕವಾಗಿ ದಣಿದಿದ್ದರೆ ಮೂಲಂಗಿ ರಸವನ್ನು ಕುಡಿಯಿರಿ. ಮೂಲಂಗಿ ರಸವನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಕಲ್ಲುಪ್ಪು ಬೆರೆಸಿ, ಗಾರ್ಗ್ಲಿಂಗ್ ಮಾಡಿದರೆ ಹೆಚ್ಚು ಪ್ರಯೋಜನಕಾರಿಯಾಗಿದೆ.
6.ನಿಮ್ಮ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ, ಮೂಲಂಗಿಯನ್ನು ಸಣ್ಣ ತುಂಡುಗಳಾಗಿ ಮಾಡಿ ಮತ್ತು ಅದರ ಮೇಲೆ ನಿಂಬೆ ರಸವನ್ನು ಹಾಕಿ ಹಲ್ಲುಗಳ ಮೇಲೆ ಉಜ್ಜಿಕೊಳ್ಳಿ. ಹಳದಿ ಹಲ್ಲಿನ ಸಮಸ್ಯೆ ದೂರವಾಗುತ್ತದೆ.
7. ಮೂಲಂಗಿಯ ನಿಯಮಿತ ಸೇವನೆಯು ಮೂತ್ರಪಿಂಡ (Kidney) ಮತ್ತು ಯಕೃತ್ತನ್ನು ಆರೋಗ್ಯವಾಗಿರಿಸುತ್ತದೆ(Liver health). ಅಲ್ಲದೆ, ಇದನ್ನು ತಿನ್ನುವುದರಿಂದ ಹಸಿವು ಹೆಚ್ಚಾಗುತ್ತದೆ.
ಇದನ್ನೂ ಓದಿ : Health Tips: ಮೊಟ್ಟೆ ಸೇವನೆಯಿಂದಾಗುತ್ತದೆ ಈ ವಿಶಿಷ್ಟ ರೀತಿಯ ಕ್ಯಾನ್ಸರ್, ತಿನ್ನುವ ಮೊದಲು ಈ ಸುದ್ದಿಯನ್ನೊಮ್ಮೆ ಓದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ