Potato Juice Benefits: ಆಲೂಗಡ್ಡೆ ಎಲ್ಲಾ ಋತುಗಳಲ್ಲೂ ದೊರೆಯುವ ತರಕಾರಿ. ನಮ್ಮಲ್ಲಿ ಹಲವರಿಗೆ ಆಲೂಗಡ್ಡೆ ಒಂದು ಪ್ರಿಯ ತರಕಾರಿ. ಅದರಲ್ಲೂ ಮಕ್ಕಳಿಗೆ ಆಲೂಗಡ್ಡೆ ಚಿಪ್ಸ್, ಪಾಪಡ್ ಮತ್ತು ಫ್ರೆಂಚ್ ಫ್ರೈಗಳಂತಹ ಖಾದ್ಯಗಳೆಂದರೆ ಬಲು ಇಷ್ಟ. ಕೆಲವು ಖಾದ್ಯಗಳ ರುಚಿಯನ್ನು ಹೆಚ್ಚಿಸಬಲ್ಲ ಆಲೂಗಡ್ಡೆ ಆರೋಗ್ಯಕ್ಕೆ ಹಲವು ರೀತಿಯಿಂದ ಪ್ರಯೋಜನಕಾರಿ ಆಗಿದೆ. ಆಲೂಗಡ್ಡೆ ಜ್ಯೂಸ್ ಸೇವನೆಯು ನಿಮ್ಮನ್ನು ಹಲವು ಕಾಯಿಲೆಗಳಿಂದ ದೂರ ಉಳಿಯುವಂತೆ ಮಾಡಬಲ್ಲದು ಎಂದು ತಿಳಿದರೆ ನಿಮಗೆ ನಿಜಕ್ಕೂ ಅಚ್ಚರಿಯಾಗಬಹುದು.
ಹೌದು, ಪೋಷಕಾಂಶಗಳ ಆಗರವಾಗಿರುವ ಆಲೂಗಡ್ಡೆ ರಸವು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಆಲೂಗಡ್ಡೆ ಜ್ಯೂಸ್ ಸೇವನೆಯಿಂದ ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ.
ಆಲೂಗಡ್ಡೆ ಜ್ಯೂಸ್ ಸೇವನೆಯಿಂದ ಸಿಗುವ ಲಾಭಗಳೇನು?
ರೋಗನಿರೋಧಕ ಶಕ್ತಿ ಹೆಚ್ಚಳ:
ಆಲೂಗಡ್ಡೆಯಲ್ಲಿರುವ ವಿಟಮಿನ್ ಸಿ ಸಾಂಕ್ರಾಮಿಕ ರೋಗಗಳನ್ನು ಗುಣಪಡಿಸುತ್ತದೆ. ಆಲೂಗೆಡ್ಡೆ ರಸವು ಶೀತ ಮತ್ತು ಜ್ವರದಂತಹ ಕಾಯಿಲೆಗಳನ್ನು ಗುಣಪಡಿಸಲು ಕೆಲಸ ಮಾಡುತ್ತದೆ. ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದಾಗಿ ರೋಗಗಳ ವಿರುದ್ಧ ಹೋರಾಡುವ ಶಕ್ತಿ ವೃದ್ಧಿಯಾಗುತ್ತದೆ.
ಇದನ್ನೂ ಓದಿ- Health Tips : ಊಟದ ನಂತರ ಹೊಟ್ಟೆ ಉಬ್ಬಿದಂತಾಗುತ್ತದೆಯೇ? ಈ ಕಾಯಿಲೆಯ ಲಕ್ಷಣವಿರಬಹುದು
ಹುಣ್ಣುಗಳನ್ನು ಗುಣಪಡಿಸಲು ಪ್ರಯೋಜನಕಾರಿ:
ಹುಣ್ಣುಗಳನ್ನು ಗುಣಪಡಿಸಲು ಆಲೂಗಡ್ಡೆ ಜ್ಯೂಸ್ ಸೇವನೆಯು ಬಹಳ ಪ್ರಯೋಜನಕಾರಿ ಆಗಿದೆ. ಆಲೂಗಡ್ಡೆಯಲ್ಲಿ ಅಲ್ಸರ್ ಎಂದರೆ ಹುಣ್ಣುಗಳನ್ನು ಗುಣಪಡಿಸಬಲ್ಲ ಹಲವು ಪೋಷಕಾಂಶಗಳು ಕಂಡು ಬರುತ್ತವೆ. ಇದನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಇದು ಹುಣ್ಣುಗಳು ಬೆಳೆಯುವುದನ್ನು ತಡೆಯುತ್ತದೆ.
ಯಕೃತ್ತು ಆರೋಗ್ಯಕರಕ್ಕೆ ಲಾಭದಾಯಕ:
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಯುವುದರಿಂದ ಲಿವರ್ ಕ್ಲೀನ್ ಆಗುತ್ತದೆ. ಇದು ಹೆಪಟೈಟಿಸ್ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಲೂಗಡ್ಡೆ ರಸವು ಯಕೃತ್ತನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಯಕೃತ್ತನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ:
ಆಲೂಗಡ್ಡೆ ಜ್ಯೂಸ್ ದೇಹದಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಕೂಡ ಪ್ರಯೋಜ್ನಕಾಗಿ ಆಗಿದೆ. ಆಲೂಗಡ್ಡೆ ರಸದಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ನಂತಹ ಪೋಷಕಾಂಶಗಳು ಕಂಡು ಬರುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ- Garlic Milk : ಬೆಳ್ಳುಳ್ಳಿ- ಹಾಲು ಸೇವನೆ ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯ ಗೋತ್ತಾ?
ಮೈಗ್ರೇನ್ನಲ್ಲಿ ಪ್ರಯೋಜನಕಾರಿ:
ಆಲೂಗಡ್ಡೆ ಜ್ಯೂಸ್ ಮೈಗ್ರೇನ್ ತಡೆಯುವಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಆಲೂಗಡ್ಡೆ ರಸ ಸೇವನೆಯಿಂದ ಒತ್ತಡ, ಆಯಾಸ ಮತ್ತು ಖಿನ್ನತೆಯನ್ನು ನಿವಾರಿಸಬಹುದಾಗಿದೆ. ಆಲೂಗೆಡ್ಡೆಯ ರಸವನ್ನು ಕುಡಿಯುವುದರ ಜೊತೆಗೆ ಇದನ್ನು ತಲೆಗೆ ಹಚ್ಚುವುದರಿಂದ ಆಗಾಗ್ಗೆ ಕಾಡುವ ತಲೆನೋವಿನ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.