ವಾತಕ್ಕೆ ಉತ್ತಮ ಪರಿಹಾರ ನೀಡುತ್ತದೆ ʼಪಿಸ್ತಾʼ

ಡ್ರೈ ಫೂಟ್ಸ್‌ಗಳಲ್ಲಿ ಪಿಸ್ತಾ ಪೌಷ್ಟಿಕಾಂಶಯುತ ಆಹಾರ. ಆಯುರ್ವೇದದಲ್ಲಿಯೂ ಪಿಸ್ತಾದ ಔಷಧೀಯ ಗುಣಗಳನ್ನು ಬಳಕೆ ಮಾಡಲಾಗುತ್ತದೆ. ಇನ್ನು ಪಿಸ್ತಾವು ವಾತಕ್ಕೆ ಪರಿಹಾರ ನೀಡುವುದಲ್ಲದೆ ದೇಹದ ಶಕ್ತಿ ವೃದ್ಧಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. 

Written by - Bhavishya Shetty | Last Updated : Apr 17, 2022, 04:27 PM IST
  • ಡ್ರೈ ಫೂಟ್ಸ್‌ಗಳಲ್ಲಿ ಪಿಸ್ತಾ ಪೌಷ್ಟಿಕಾಂಶಯುತ ಆಹಾರ
  • ಪಿಸ್ತಾದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ
  • ಪಿಸ್ತಾ ಸೇವನೆ ಸಂಬಂಧ ಆರೋಗ್ಯ ತಜ್ಞರು ಹೇಳಿದ್ದು ಹೀಗೆ...
ವಾತಕ್ಕೆ ಉತ್ತಮ ಪರಿಹಾರ ನೀಡುತ್ತದೆ ʼಪಿಸ್ತಾʼ title=
Pistachio

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಾಗಿ ಗಮನ ಕೊಡುತ್ತಿರುವ ಜನರು ನಿಯಮಿತ ಆಹಾರದ ಜೊತೆಗೆ ಡ್ರೈ ಫ್ರೂಟ್ಸ್‌ಗಳನ್ನು ಸೇವನೆ ಮಾಡುತ್ತಾರೆ. ಆರೋಗ್ಯ ತಜ್ಞರು ಹೇಳಿದ್ದಾರೆ ಎಂದ ಮಾತ್ರಕ್ಕೆ ಸೇವಿಸುತ್ತಾರೆ ವಿನಃ ಹೆಚ್ಚಿನವರಿಗೆ ಅವುಗಳ ಬಗ್ಗೆ ಮಾಹಿತಿ ಇರುವುದು ಕಡಿಮೆ. ಈ ಹಿನ್ನೆಲೆಯಲ್ಲಿ ಡ್ರೈ ಫೂಟ್ಸ್‌ಗಳಲ್ಲಿ ಒಂದಾಗಿರುವ ಪಿಸ್ತಾದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ. 

ಇದನ್ನು ಓದಿ: ಬೇಸಿಗೆಯಲ್ಲಿ ಈ ಒಂದು ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸಿಗುತ್ತೆ ಅದ್ಭುತ ಪ್ರಯೋಜನ!

ಡ್ರೈ ಫೂಟ್ಸ್‌ಗಳಲ್ಲಿ  ಪಿಸ್ತಾ ಪೌಷ್ಟಿಕಾಂಶಯುತ ಆಹಾರ. ಆಯುರ್ವೇದದಲ್ಲಿಯೂ ಪಿಸ್ತಾದ ಔಷಧೀಯ ಗುಣಗಳನ್ನು ಬಳಕೆ ಮಾಡಲಾಗುತ್ತದೆ. ಇನ್ನು ಪಿಸ್ತಾವು ವಾತಕ್ಕೆ ಪರಿಹಾರ ನೀಡುವುದಲ್ಲದೆ ದೇಹದ ಶಕ್ತಿ ವೃದ್ಧಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪಿಸ್ತಾ ಮಾತ್ರವಲ್ಲ, ಅದರ ತೊಗಟೆ, ಎಲೆಗಳು ಮತ್ತು ಎಣ್ಣೆಯನ್ನು ಕೂಡ ಔಷಧೀಯ ಚಿಕಿತ್ಸೆಗಳಿಗೆ ಬಳಸಲಾಗುತ್ತದೆ. 

ವಿಟಮಿನ್ ಎ, ಕೆ, ಸಿ, ಡಿ, ಇ ಮತ್ತು ಬಿ-6, ಖನಿಜಗಳು, ಮೆಗ್ನೀಶಿಯಂ, ಕಬ್ಬಿಣ, ಫೈಬರ್, ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಅಮೈನೋ ಆಮ್ಲ, ಫೋಲೇಟ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಥಯಾಮಿನ್, ಅಪರ್ಯಾಪ್ತ ಕೊಬ್ಬು, ಒಲೀಕ್, ಲಿನೋಲಿಕ್ ಆಮ್ಲ ಮತ್ತು ಫೈಟೊಕೆಮಿಕಲ್ಸ್ ಇದರಲ್ಲಿವೆ. 

ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ (NCBI)ನಲ್ಲಿ ಪ್ರಕಟವಾದ ಸಂಶೋಧನೆಯ ವರದಿ ಪ್ರಕಾರ, ಪಿಸ್ತಾಗಳ ಸೇವನೆಯು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (LDL) ಮಟ್ಟವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ (HDL) ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಉಲ್ಲೇಖಿಸಿದೆ. ಪಿಸ್ತಾಗಳು ಬೊಜ್ಜು ವಿರೋಧಿ ಗುಣ ಲಕ್ಷಣಗಳನ್ನೂ ಹೊಂದಿದ್ದು, ಇದು ಪಿಷ್ಟದಿಂದ ಉಂಟಾಗುವ ಅಡೆತಡೆಗಳನ್ನು ಕಡಿಮೆ ಮಾಡಲು, ಕೊಬ್ಬು ಹೆಚ್ಚಾಗುವುದನ್ನು ತಡೆಗಟ್ಟಲು ಮತ್ತು ಕಡಿಮೆ ಶಕ್ತಿಯ ಸಾಂದ್ರತೆ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.

ಇದನ್ನು ಓದಿ: ನಿಮಗೆ BP ಸಮಸ್ಯೆ ಇದೆಯಾ? ಹಾಗಿದ್ರೆ ಸೌತೆಕಾಯಿ ಜ್ಯೂಸ್ ಕುಡಿಯಿರಿ!

ಇನ್ನೊಂದು ಸಂಶೋಧನೆಯು ಪಿಸ್ತಾದಲ್ಲಿ ಕೀಮೋ-ತಡೆಗಟ್ಟುವ ಗುಣಲಕ್ಷಣಗಳು ಇರುವುದನ್ನು ಕಂಡುಹಿಡಿದಿದೆ. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಪಿಸ್ತಾದಲ್ಲಿರುವ ಪಿ-ಟೊಕೊಫೆರಾಲ್ ಮತ್ತು ಇತರ ಆ್ಯಂಟಿ ಆಕ್ಸಿಡೆಂಟ್‌ಗಳು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. 2014ರಲ್ಲಿ ಪೆನ್ ಸ್ಟೇಟ್ ಯೂನಿವರ್ಸಿಟಿ ನಡೆಸಿದ ಅಧ್ಯಯನದ ಪ್ರಕಾರ, ದಿನಕ್ಕೆ ಎರಡು ಬಾರಿ ಪಿಸ್ತಾ ತಿನ್ನುವುದು ಮಧುಮೇಹ ಟೈಪ್ 2 ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆಯಂತೆ. ಜೊತೆಗೆ ಒತ್ತಡ ನಿವಾರಣೆ ಮತ್ತು ಹೃದಯದ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News