Oversleeping Effects : ಉತ್ತಮ ನಿದ್ರೆಯು ದೇಹಕ್ಕೆ ಒಳ್ಳೆಯದು. ಆರೋಗ್ಯ ದೃಷ್ಟಿಯಿಂದಲೂ ಉತ್ತಮ. ದೇಹವನ್ನು ಆರೋಗ್ಯವಾಗಿಡಲು ಅನೇಕ ವೈದ್ಯಕೀಯ ತಜ್ಞರು ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಮಲಗಲು ಹೇಳ್ತಾರೆ. ನಿದ್ರಾಹೀನತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಂತ ಅತಿಯಾದ ನಿದ್ದೆಯೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಚ್ಚರ..!
ಹೌದು, ಅತಿಯಾದ ನಿದ್ರೆ ಕೂಡ ಹೃದಯಾಘಾತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರೊಂದಿಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ. ಸದ್ಯ ಅತಿಯಾದ ನಿದ್ದೆಯಿಂದಾಗುವ ದುಷ್ಪರಿಣಾಮಗಳೇನು ಎಂದು ತಿಳಿಯೋಣ ಬನ್ನಿ.
ಇದನ್ನೂ ಓದಿ: Diabetes Control : ಮಧುಮೇಹ ನಿಯಂತ್ರಣಕ್ಕೆ ಸೇವಿಸಿ ಈ ಮಸಾಲೆ ಪದಾರ್ಥಗಳನ್ನು!
- ಹೃದಯ ರೋಗಗಳು : ಪ್ರತಿದಿನ 8 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕೆಲವು ಸಂದರ್ಭಗಳಲ್ಲಿ, ಹೃದಯ ಸಂಬಂಧಿ ಸಮಸ್ಯೆಗಳು ಸಹ ಸಂಭವಿಸುತ್ತವೆ. ಅತಿಯಾದ ನಿದ್ರೆಯು ಪರಿಧಮನಿಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
- ತಲೆನೋವು : ಪ್ರತಿದಿನ ಸಾಕಷ್ಟು ನಿದ್ದೆ ಮಾಡುವುದರಿಂದ ಆಯಾಸ ಮತ್ತು ತಲೆನೋವು ದೂರವಾಗುತ್ತದೆ. ಆದರೆ, ಅತಿಯಾದ ನಿದ್ದೆಯಿಂದಲೂ ತಲೆನೋವು ಉಂಟಾಗುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ಹಾಗಾಗಿ ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.
- ಖಿನ್ನತೆ : ನಿದ್ರೆಯ ಕೊರತೆಯು ಒತ್ತಡಕ್ಕೆ ಕಾರಣವಾಗಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅತಿಯಾದ ನಿದ್ರೆ ಕೂಡ ಇದೇ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅತಿಯಾಗಿ ನಿದ್ದೆ ಮಾಡುವವರು ನಿದ್ದೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ತುಂಬಾ ಒಳ್ಳೆಯದು.
- ಬೊಜ್ಜು : ಅತಿಯಾದ ನಿದ್ರೆಯಿಂದ ಅನೇಕ ಜನರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ತಜ್ಞರು ಇತ್ತೀಚೆಗೆ ತೀರ್ಮಾನಿಸಿದ್ದಾರೆ. ಅಲ್ಲದೆ ಜಾಸ್ತಿ ಹೊತ್ತು ಮಲಗುವವರ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ತೂಕವೂ ಹೆಚ್ಚುತ್ತದೆ. ಹಾಗಾಗಿ ಅತಿಯಾದ ನಿದ್ದೆ ಸರಿಯಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.