ಈರುಳ್ಳಿ ಮಾತ್ರವಲ್ಲ ಇದರ ಸಿಪ್ಪೆಯಲ್ಲಿಯೂ ಇದೆ ಈ ರೋಗಗಳನ್ನು ಓಡಿಸುವ ಮಾಂತ್ರಿಕ ಶಕ್ತಿ

How To Use Onion Peels: ಈರುಳ್ಳಿಯನ್ನು ಬಳಸುವಾಗ   ಹೆಚ್ಚಿನವರು ಸಿಪ್ಪೆ ಸುಲಿದು ಕಸದ ಬುಟ್ಟಿಗೆ ಎಸೆಯುತ್ತಾರೆ. ಆದರೆ ಈರುಳ್ಳಿ ಸಿಪ್ಪೆಯ ಪ್ರಯೋಜನ ತಿಳಿದರೆ ಮುಂದೆ ಎಂದಿಗೂ  ಈ ಕೆಲಸಕ್ಕೆ ಕೈ ಹಾಕುವುದಿಲ್ಲ.   

Written by - Ranjitha R K | Last Updated : Sep 21, 2023, 12:19 PM IST
  • ಈರುಳ್ಳಿ ಸಿಪ್ಪೆಗಳ ಪ್ರಯೋಜನಗಳು
  • ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
  • ಕೂದಲನ್ನು ಆರೋಗ್ಯಕರವಾಗಿ ಮತ್ತು ರೇಷ್ಮೆಯಂತೆ ಮಾಡುತ್ತದೆ
ಈರುಳ್ಳಿ ಮಾತ್ರವಲ್ಲ ಇದರ ಸಿಪ್ಪೆಯಲ್ಲಿಯೂ ಇದೆ ಈ ರೋಗಗಳನ್ನು ಓಡಿಸುವ ಮಾಂತ್ರಿಕ ಶಕ್ತಿ  title=

How To Use Onion Peels : ಹೆಚ್ಚಿನ ಪಾಕವಿಧಾನಗಳ ಜೀವಾಳವೇ ಈರುಳ್ಳಿ. ಈರುಳ್ಳಿ ಬೆಲೆ ಗಗನಕ್ಕೇರುವ ಸಮಯದಲ್ಲಿ  ಜನಸಾಮಾನ್ಯರ ಆಹಾರದ ರುಚಿ ಕೆಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಈರುಳ್ಳಿಯಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಈರುಳ್ಳಿಯನ್ನು ಬಳಸುವಾಗ ಹೆಚ್ಚಿನವರು ಸಿಪ್ಪೆ ಸುಲಿದು ಕಸದ ಬುಟ್ಟಿಗೆ ಎಸೆಯುತ್ತಾರೆ. ಆದರೆ ಈರುಳ್ಳಿ ಸಿಪ್ಪೆಯ ಪ್ರಯೋಜನ ತಿಳಿದರೆ ಮುಂದೆ ಎಂದಿಗೂ  ಈ ಕೆಲಸಕ್ಕೆ ಕೈ ಹಾಕುವುದಿಲ್ಲ. 

ಈರುಳ್ಳಿ ಸಿಪ್ಪೆಗಳ ಪ್ರಯೋಜನಗಳು : 
1. ಹೃದಯಾಘಾತದ ಅಪಾಯವು ಕಡಿಮೆಯಾಗುತ್ತದೆ : 

ಭಾರತ ಸೇರಿದಂತೆ ವಿಶ್ವದಾದ್ಯಂತ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮತ್ತು ಸಾಯುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಹೆಚ್ಚು ಅನಾರೋಗ್ಯಕರ ಆಹಾರವನ್ನು ಸೇವಿಸುವುದು. ಈರುಳ್ಳಿ ಸಿಪ್ಪೆಯಿಂದ ನೀವು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಾದರೆ  ಈರುಳ್ಳಿ ಸಿಪ್ಪೆಯನ್ನು ಸೇವಿಸುವುದು ಹೇಗೆ? ಅದಕ್ಕೂ ವಿಧಾನವಿದೆ. ಈರುಳ್ಳಿ ಸಿಪ್ಪೆಯನ್ನು ಬಾಣಲೆಯಲ್ಲಿ ಹಾಕಿ, ಶುದ್ಧ ನೀರನ್ನು ಸುರಿಯಿರಿ. ನಂತರ  ಈ ನೀರನ್ನು ಬಿಸಿ ಮಾಡಿ. ಸಂಪೂರ್ಣವಾಗಿ ಕುದಿಸಿದ ನಂತರ ಫಿಲ್ಟರ್ ಸಹಾಯದಿಂದ ಫಿಲ್ಟರ್ ಮಾಡಿ  ಈ ನೀರು ಉಗುರು ಬೆಚ್ಚಗಿರುವಾಗ ಕುಡಿಯಿರಿ.

ಇದನ್ನೂ ಓದಿ : ನಾಯಿಗಳಿಂದ ಮನುಷ್ಯರಲ್ಲಿ ಹರಡುತ್ತಿದೆ ಈ ವಿಚಿತ್ರ ಕಾಯಿಲೆ, ಸೋಂಕಿತ 3 ಪ್ರಕರಣಗಳ ಬಳಿಕ ವಿಜ್ಞಾನಿಗಳ ಅಲರ್ಟ್!

2. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ:
ಬದಲಾಗುತ್ತಿರುವ ಹವಾಮಾನದಲ್ಲಿ, ವೈರಲ್ ಸೋಂಕಿನ ಅಪಾಯ ಹೆಚ್ಚುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಶೀತ, ಕೆಮ್ಮು ಮತ್ತು ಜ್ವರ ಪದೇ ಪದೇ ಬಾಧಿಸುತ್ತದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದಾಗ ಮಾತ್ರ  ಅಂತಹ ಸಂದರ್ಭಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಈರುಳ್ಳಿ ಸಿಪ್ಪೆಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೇಲೆ ಹೇಳಿದಂತೆ ನೀವು ಈ ಸಿಪ್ಪೆಗಳನ್ನು ಕುದಿಸಿ, ನೀರನ್ನು ಫಿಲ್ಟರ್ ಮಾಡಿ ಕುಡಿಯಬೇಕು.

3. ಕಣ್ಣಿನ ಆರೋಗ್ಯಕ್ಕೆ : 
ಈರುಳ್ಳಿ ಸಿಪ್ಪೆಗಳನ್ನು ರೆಟಿನಾಲ್ ಅಂದರೆ ವಿಟಮಿನ್ ಎ ಸಮೃದ್ಧ ಮೂಲವೆಂದು ಪರಿಗಣಿಸಲಾಗುತ್ತದೆ. ಇದು ನಮ್ಮ ಕಣ್ಣುಗಳಿಗೆ ಪ್ರಮುಖ ಪೋಷಕಾಂಶವಾಗಿದೆ. ಅದರ ಕೊರತೆಯಿದ್ದರೆ, ದೃಷ್ಟಿ ದುರ್ಬಲವಾಗಬಹುದು. ಈರುಳ್ಳಿ ಸಿಪ್ಪೆಗಳ ಸಹಾಯದಿಂದ ನಿಮ್ಮ ದೃಷ್ಟಿಯನ್ನು ಸುಧಾರಿಸಬಹುದು. ಅಲ್ಲದೆ ಈರುಳ್ಳಿ ನೀರು ಕಣ್ಣುಗಳ ಜೊತೆಗೆ ಚರ್ಮದ ಆರೋಗ್ಯವನ್ನು ಕೂಡಾ ವೃದ್ದಿಸುತ್ತದೆ. 

ಇದನ್ನೂ ಓದಿ :ಈ ಜನರ ಆರೋಗ್ಯಕ್ಕೆ ಮಾರಕ ಹಾಗಲಕಾಯಿ, ಮರೆತೂ ಕೂಡ ಸೇವಿಸಬಾರದು!

4. ಕೂದಲನ್ನು ಆರೋಗ್ಯಕರವಾಗಿ ಮತ್ತು ರೇಷ್ಮೆಯಂತೆ ಮಾಡುತ್ತದೆ :
ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು ಈರುಳ್ಳಿ ಸಿಪ್ಪೆಯನ್ನು ಬಳಸಬಹುದು. ಇದಕ್ಕಾಗಿ, ಒಂದು ಬೌಲ್ ನೀರನ್ನು ತೆಗೆದುಕೊಂಡು ಅದಕ್ಕೆ ಈರುಳ್ಳಿ ಸಿಪ್ಪೆಯನ್ನು ಸೇರಿಸಿ. ನಂತರ ಒಂದು ಗಂಟೆಯವರೆಗೆ ಆ ನೀರನ್ನು ಹಾಗೆಯೇ ಬಿಡಿ. ನಂತರ, ನಿಮ್ಮ ಕೂದಲನ್ನು  ಈರುಳ್ಳಿ ಸಿಪ್ಪೆ  ನೀರಿನಿಂದ ತೊಳೆಯಿರಿ. ಇದರಿಂದ ಕೂದಲು ಉದುರುವ ಸಮಸ್ಯೆ ದೂರವಾಗುವುದಲ್ಲದೆ, ಕೂದಲು ಉದ್ದನೇ ಬೆಳೆಯುತ್ತದೆ. ದಟ್ಟ ಹಾಗೂ ರೇಷ್ಮೆಯಂತಾಗುತ್ತದೆ. 

( ಸೂಚನೆ : ಪ್ರಿಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಸಾಕಷ್ಟು ಮಾಹಿತಿಯನ್ನು ನೀಡಲು ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನೀವು ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಬೇಕು. Zee ಮೀಡಿಯಾ ಈ ಮಾಹಿತಿಯನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News