Onion Oil Benefits For Hairs: ಕೂದಲಿಗೆ ಈರುಳ್ಳಿ ಎಣ್ಣೆಯನ್ನು ಬಳಸಿ ಈ ರೀತಿ ಪ್ರಯೋಜನ ಪಡೆಯಿರಿ

Onion Oil Benefits For Hairs:  ಈರುಳ್ಳಿ ಎಣ್ಣೆ ಕೂದಲು ಉದುರುವುದನ್ನು ತಡೆಯುವುದಲ್ಲದೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

Written by - Yashaswini V | Last Updated : Jul 1, 2021, 03:16 PM IST
  • ಮಳೆಗಾಲದಲ್ಲಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ
  • ಕೆಲವು ಸಾಮಾನ್ಯ ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಕೂದಲು ಉದುರುವುದನ್ನು ತಡೆಯಬಹುದು
  • ಕೂದಲು ಉದುರುವುದನ್ನು ತಡೆಯಲು ಈರುಳ್ಳಿ ಎಣ್ಣೆ ತುಂಬಾ ಸಹಾಯಕವಾಗಿದೆ
Onion Oil Benefits For Hairs: ಕೂದಲಿಗೆ ಈರುಳ್ಳಿ ಎಣ್ಣೆಯನ್ನು ಬಳಸಿ ಈ ರೀತಿ ಪ್ರಯೋಜನ ಪಡೆಯಿರಿ title=
Onion Oil Benefits For Hairs

Onion Oil Benefits For Hairs: ಮಳೆಗಾಲದಲ್ಲಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ, ಆದರೆ ಕೆಲವೊಮ್ಮೆ ನಿಮ್ಮ ಜೀವನಶೈಲಿ ಮತ್ತು ಆಹಾರಕ್ರಮವೂ ಇದಕ್ಕೆ ದೊಡ್ಡ ಕಾರಣವಾಗಿರಬಹುದು. ಕೆಲವೊಮ್ಮೆ ಹಾರ್ಮೋನುಗಳು ಬದಲಾಗುವುದರಿಂದ ಕೂಡ ಕೂದಲು ಉದುರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಸಾಮಾನ್ಯ ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಕೂದಲು ಉದುರುವುದನ್ನು ತಡೆಯಬಹುದು. ಕೂದಲು ಉದುರುವುದನ್ನು ತಡೆಯಲು ಈರುಳ್ಳಿ ಎಣ್ಣೆ ತುಂಬಾ ಸಹಾಯಕವಾಗಿದೆ. ಈರುಳ್ಳಿ ಎಣ್ಣೆ ಕೂದಲು ಉದುರುವುದನ್ನು ತಡೆಯುವುದಲ್ಲದೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈರುಳ್ಳಿ ಎಣ್ಣೆಯನ್ನು ಹೇಗೆ ತಯಾರಿಸುವುದು ಮತ್ತು ಅದರ ಬಳಕೆಯ ಪ್ರಯೋಜನಗಳ ಬಗ್ಗೆ ತಿಳಿಯೋಣ...

ಈರುಳ್ಳಿ ಎಣ್ಣೆ ತಯಾರಿಸುವುದು ಹೇಗೆ?
>> ಮೊದಲಿಗೆ ನೀವು ಈರುಳ್ಳಿಯ (Onion) ರಸವನ್ನು ತೆಗೆಯುತ್ತೀರಿ. 
>> ಈರುಳ್ಳಿಯ ರಸವನ್ನು ಹೊರತೆಗೆಯಲು ನೀವು ಗ್ರೈಂಡರ್ ಬಳಸಬಹುದು.
>> ಈಗ ಬಾಣಲೆಯಲ್ಲಿ ತೆಂಗಿನ ಎಣ್ಣೆ ಹಾಕಿ ಎಣ್ಣೆಗೆ ಈರುಳ್ಳಿ ರಸ ಸೇರಿಸಿ.
>> ತಂಪಾದ ನಂತರ, ಅದನ್ನು ಜರಡಿಯೊಂದಿಗೆ ಪ್ರತ್ಯೇಕ ಪಾತ್ರೆಯಲ್ಲಿ ಇರಿಸಿ.
>> ಈ ಎಣ್ಣೆಯನ್ನು ನೀವು ಸಂಗ್ರಹಿಸಿಟ್ಟು ಕೂಡ ಬಳಸಬಹುದು.

ಇದನ್ನೂ ಓದಿ- Hair Care Tips: ನಿಮ್ಮ ಕೂದಲು ಬೇಗ ಉದ್ದವಾಗಬೇಕೆ? ಇದನ್ನು ಬಳಸಿ, ಕೆಲವೇ ದಿನಗಳಲ್ಲಿ ನೀವು ಪ್ರಯೋಜನ ನೋಡುತ್ತೀರಿ

ಈರುಳ್ಳಿ ಎಣ್ಣೆಯನ್ನು ಹೇಗೆ ಬಳಸುವುದು?
ಕೂದಲಿಗೆ ಈರುಳ್ಳಿ ಎಣ್ಣೆಯನ್ನು (Onion Oil Benefits For Hairs) ಹಚ್ಚಲು, ಅದನ್ನು ಲಘುವಾಗಿ ಬಿಸಿ ಮಾಡಿ. ಇದನ್ನು ಕೂದಲಿನ ಬುಡಕ್ಕೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ. ಬಳಿಕ ಒಂದು ಗಂಟೆಯ ನಂತರ ಯಾವುದೇ ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

ಈರುಳ್ಳಿ ಎಣ್ಣೆಯ ಪ್ರಯೋಜನಗಳು:
>> ಈರುಳ್ಳಿ ಎಣ್ಣೆ ಬಳಸುವುದರಿಂದ ಕೂದಲು ಹೊಳೆಯುತ್ತದೆ. ಇದನ್ನು ಬಳಸಲು, ನೀವು ಅದಕ್ಕೆ ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆಯನ್ನು ಸೇರಿಸಬಹುದು.

>>  ಈರುಳ್ಳಿ ಎಣ್ಣೆ ಬಳಸುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ. ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಇದು ತುಂಬಾ ತುಂಬಾ ಪ್ರಯೋಜನಕಾರಿ. 

ಇದನ್ನೂ ಓದಿ- Hair Care Tips: ವಾರಕ್ಕೆ ಎರಡು ಬಾರಿ ಈ ಪ್ಯಾಕ್ ಹಾಕಿ ದಟ್ಟವಾದ ಕೂದಲು ನಿಮ್ಮದಾಗಿಸಿ

>> ನೆತ್ತಿಯಲ್ಲಿರುವ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕಿನಿಂದಾಗಿ ಅನೇಕ ಜನರಿಗೆ ಕೂದಲು ಉದುರುವಿಕೆ ಸಮಸ್ಯೆ ಉಂಟಾಗುತ್ತದೆ. ಅಂತಹ ಜನರು ನಿಯಮಿತವಾಗಿ ತಮ್ಮ ಕೂದಲಿಗೆ ಈರುಳ್ಳಿ ಎಣ್ಣೆಯನ್ನು ಬಳಸಬಹುದು.

>> ಇದನ್ನು ಕೂದಲಿಗೆ ನಿಯಮಿತವಾಗಿ ಹಚ್ಚುವುದರಿಂದ ನೆತ್ತಿಗೆ ಸಾಕಷ್ಟು ಪೋಷಣೆ ಸಿಗುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸುವುದಲ್ಲದೆ ಕೂದಲನ್ನು ದಪ್ಪ ಮತ್ತು ದೃಢವಾಗಿಸಲು ಸಹಾಯ ಮಾಡುತ್ತದೆ.

(ಹಕ್ಕುತ್ಯಾಗ: ಲೇಖನದಲ್ಲಿ ನೀಡಿರುವ ಸಲಹೆಯು ಸಾಮಾನ್ಯ ಮಾಹಿತಿ ಮಾತ್ರ. ಇದು ತಜ್ಞರ ಅಭಿಪ್ರಾಯವಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News