Onion Health Benefits : ಈ ಕಾರಣಗಳಿಗಾಗಿ ನಿಮ್ಮ ಆಹಾರದಲ್ಲಿ ಭರಪೂರವಾಗಿರಲಿ ಈರುಳ್ಳಿ

 Onion Benefits For Monsoon: ಈರುಳ್ಳಿಯಲ್ಲಿರುವ ಔಷಧೀಯ ಗುಣಗಳಿಂದಾಗಿ, ಇದನ್ನು ಆಹಾರದಲ್ಲಿ ಸೇರಿಸುವುದು ಎಲ್ಲ ರೀತಿಯಿಂದಲೂ ಪ್ರಯೋಜನಕಾರಿಯಾಗಿ ಸಾಬೀತಾಗಲಿದೆ. ಅದೇ ರೀತಿ, ಮಳೆಗಾಲದಲ್ಲಿ, ಈರುಳ್ಳಿ ಅನೇಕ ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ. 

Written by - Ranjitha R K | Last Updated : Aug 3, 2021, 07:19 PM IST
  • ಈರುಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
  • ಈರುಳ್ಳಿ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ
  • ವೈರಸ್ ಮತ್ತು ಬ್ಯಾಕ್ಟೀರಿಯಾವನ್ನು ತಡೆಗಟ್ಟಲು ಈರುಳ್ಳಿ ಪರಿಣಾಮಕಾರಿ
Onion Health Benefits : ಈ ಕಾರಣಗಳಿಗಾಗಿ ನಿಮ್ಮ ಆಹಾರದಲ್ಲಿ ಭರಪೂರವಾಗಿರಲಿ ಈರುಳ್ಳಿ   title=
ಈರುಳ್ಳಿ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ (file photo)

ನವದೆಹಲಿ : Onion Benefits For Monsoon: ಮಳೆಗಾಲ ಬಂತೆಂದರೆ ಜೊತೆಗೆ ಅನೇಕ ರೋಗಗಳನ್ನು ಕೂಡಾ ಹೊತ್ತು ತರುತ್ತದೆ. ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳು ಈ ಸಮಯದಲ್ಲಿ ದೇಹದಲ್ಲಿ ವೇಗವಾಗಿ ಬೆಳೆಯುತ್ತವೆ. ಈ ರೋಗಗಳಿಂದ ಮುಕ್ತಿ ಪಡೆಯವ ಸರಳ ಉಪಾಯ ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ.  ಹೌದು, ಇಲ್ಲಿ ನಾವು ಈರುಳ್ಳಿಯ ಬಗ್ಗೆ ಹೇಳುತ್ತಿದೇವೆ. ಈರುಳ್ಳಿ (Onion) ಅಡುಗೆ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಇನ್ನು ಈರುಳ್ಳಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಪ್ರಾಪರ್ಟಿಸ್ ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಈರುಳ್ಳಿಯಲ್ಲಿರುವ ಔಷಧೀಯ ಗುಣಗಳಿಂದಾಗಿ, ಇದನ್ನು ಆಹಾರದಲ್ಲಿ ಸೇರಿಸುವುದು ಎಲ್ಲ ರೀತಿಯಿಂದಲೂ ಪ್ರಯೋಜನಕಾರಿಯಾಗಿ ಸಾಬೀತಾಗಲಿದೆ. ಅದೇ ರೀತಿ, ಮಳೆಗಾಲದಲ್ಲಿ, ಈರುಳ್ಳಿ ಅನೇಕ ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ. 
 
1. ರೋಗನಿರೋಧಕ ಶಕ್ತಿ: ಈರುಳ್ಳಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು (immunity) ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈರುಳ್ಳಿಯು ಮೆಗ್ನೀಸಿಯಮ್, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಗುಣಗಳನ್ನು ಹೊಂದಿದ್ದು, ಇದು ನಮ್ಮ ದೇಹವನ್ನು ಆರೋಗ್ಯಕರವಾಗಿಸುವಲ್ಲಿ (benefits of onion) ಮುಖ್ಯವಾಗಿ ಕೆಲಸ ಮಾಡುತ್ತದೆ. ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಈರುಳ್ಳಿ ನಿಮ್ಮ ಆಹಾರದ ಒಂದು ಭಾಗವಾಗಿರಲಿ. 

ಇದನ್ನೂ ಓದಿ : Coffee : ಕಾಫಿ ಪ್ರಿಯರೇ ಎಚ್ಚರ : ಹೆಚ್ಚು ಕಾಫಿ ಕುಡಿಯುವುದರಿಂದ ಆಗುತ್ತೆ ಬುದ್ಧಿಮಾಂದ್ಯತೆ, ಪಾರ್ಶ್ವವಾಯು!

2. ಉಸಿರಾಟದ ಕಾಯಿಲೆಗಳು: ಈರುಳ್ಳಿಯನ್ನು ಸಲಾಡ್‌ಗಳಲ್ಲಿ ಅಥವಾ ಆಹಾರದಲ್ಲಿ ಸೇರಿಸುವ ಮೂಲಕ ನಿಮ್ಮ ಜೀರ್ಣಕ್ರಿಯೆ (Digestion) ಉತ್ತಮಗೊಳ್ಳುತ್ತದೆ ಮತ್ತು ನೀವು ಉಸಿರಾಟದ ಕಾಯಿಲೆಗಳಿಂದ ಪಾರಾಗಬಹುದು. ಈರುಳ್ಳಿಯಲ್ಲಿ ಮೆಗ್ನೀಸಿಯಮ್ ಮತ್ತು ಇತರ ಖನಿಜ ಲವಣಗಳಿದ್ದು ಅದು ನಿಮ್ಮ ದೇಹದಲ್ಲಿ ಬ್ಲಡ್ ಫ್ಲೋ ಅನ್ನು ಕಾಪಾಡುತ್ತದೆ. 

3 .ಆಂಟಿಬ್ಯಾಕ್ಟೀರಿಯಲ್: ವೈರಸ್ (Virus) ಮತ್ತು ಬ್ಯಾಕ್ಟೀರಿಯಾವನ್ನು ತಡೆಗಟ್ಟಲು ಈರುಳ್ಳಿ ಪರಿಣಾಮಕಾರಿ ಪರಿಹಾರವಾಗಿದೆ. ಹಸಿ ಈರುಳ್ಳಿ  ಬ್ಯಾಕ್ಟೀರಿಯಾ ವಿರೋಧಿಯಾಗಿ ಕೆಲಸ ಮಾಡುತ್ತದೆ. ಇದು ನಿಮ್ಮ ದೇಹದಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಬೆಳೆಯಲು ಬಿಡುವುದಿಲ್ಲ. ಜೊತೆಗೆ ಶೀತ ಮತ್ತು ಜ್ವರದಂತಹ (Fever) ಸಮಸ್ಯೆಗಳಿಂದ ರಕ್ಷಿಸುತ್ತದೆ. 

4. ಶುಗರ್ ಮತ್ತು ಕ್ಯಾನ್ಸರ್: ಹಸಿ ಈರುಳ್ಳಿಯನ್ನು ಆಹಾರದಲ್ಲಿ ಸೇರಿಸುವ ಮೂಲಕ, ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿಡಬಹುದು. ಕ್ಯಾನ್ಸರ್ ನಂತಹ (Cancer) ಮಾರಕ ರೋಗಗಳ ಜೀವಕೋಶಗಳು ಬೆಳೆಯದಂತೆ ತಡೆಯುತ್ತದೆ. 

ಇದನ್ನೂ ಓದಿ : Weight Loss With Chocolate: ಪ್ರತಿದಿನ ಈ ಸಮಯದಲ್ಲಿ ಚಾಕೊಲೇಟ್ ತಿನ್ನುವ ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News