Omicron Sub-Variant BA.5 Case In Pune: ಮಹಾರಾಷ್ಟ್ರದ ಪುಣೆ ನಗರದಲ್ಲಿ ಓಮಿಕ್ರಾನ್‌ನ ಉಪ-ವೇರಿಯಂಟ್ ಆಗಿರುವ ಬಿಎ.5 ನಿಂದ ಸೋಂಕಿತ ರೋಗಿಯೊಬ್ಬರು ಪತ್ತೆಯಾಗಿದ್ದಾರೆ. ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ 37 ವರ್ಷದ ಈ ಸೋಂಕಿತ ವ್ಯಕ್ತಿಯ ವರದಿಯನ್ನು ನಗರದ ಬಿಜೆ ವೈದ್ಯಕೀಯ ಕಾಲೇಜು ನೀಡಿದೆ. ವರದಿಯ ಪ್ರಕಾರ, ಈ ವ್ಯಕ್ತಿಯು ಮೇ 21 ರಂದು ಇಂಗ್ಲೆಂಡ್‌ನಿಂದ ಭಾರತಕ್ಕೆ ಮರಳಿದ್ದಾರೆ ಮತ್ತು ಲ್ಯಾಬ್ ವರದಿಯಲ್ಲಿ ಅವರು ಓಮಿಕ್ರಾನ್ ಉಪ-ರೂಪಾಂತರಿಯ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢಪಡಿಸಲಾಗಿದೆ.
ಮಹಾರಾಷ್ಟ್ರ ರಾಜ್ಯ ಮತ್ತು ಅದರ ರಾಜಧಾನಿ ಮುಂಬೈನಲ್ಲಿ ಕೋವಿಡ್ -19 ಸೋಂಕಿನ ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ ಎಂಬುದು ಇಲ್ಲಿ ಉಲ್ಲೇಖನೀಯ. ಹೊಸ ಪ್ರಕರಣಗಳ ನಿರಂತರ ಹೆಚ್ಚಳದಿಂದಾಗಿ, ಇದೀಗ ಅಲ್ಲಿನ ಆರೋಗ್ಯ ಘಟಕಗಳ ಚಿಂತೆಯೂ ಕೂಡ ಹೆಚ್ಚಾಗತೊಡಗಿದೆ. ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟು 2,922 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 1,745 ಪ್ರಕರಣಗಳು ರಾಜಧಾನಿ ಮುಂಬೈನಲ್ಲಿ ಮಾತ್ರ ದಾಖಲಾಗಿವೆ.
ಇದನ್ನೂ ಓದಿ-Water Benefits : ಬೆಳಿಗ್ಗೆ ಎದ್ದ ತಕ್ಷಣ ಯಾವ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು!
ಪುಣೆಯಲ್ಲಿ ಪತ್ತೆಯಾದ ಬಿಎ.5 ಸೋಂಕಿಗೆ ಒಳಗಾದ ವ್ಯಕ್ತಿ
ದೊರೆತ ಮಾಹಿತಿಯ ಪ್ರಕಾರ, ಪುಣೆಯಲ್ಲಿ ಉಪ-ರೂಪಾಂತರಿ ಬಿಎ.5 ಸೋಂಕಿಗೆ ಗುರಿಯಾಗಿ ದೃಢಪಟ್ಟಿರುವ ವ್ಯಕ್ತಿಯು ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆ. ಜೂನ್ 2 ರಂದು ಈ ವ್ಯಕ್ತಿಗೆ ಕೋವಿಡ್ ಸೋಂಕು ತಗುಲಿರುವ ಬಗ್ಗೆ ಮಾಹಿತಿ ದೊರೆತಿತ್ತು. ಸಂತ್ರಸ್ತರಲ್ಲಿ ಕೋವಿಡ್ ಸೋಂಕಿನ ಸೌಮ್ಯ ಮತ್ತು ಕಡಿಮೆ ತೀವ್ರತರವಾದ ಲಕ್ಷಣಗಳು ಕಂಡುಬಂದಿದ್ದು, ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ-Cold Water Side Effects: ತಂಪು ನೀರು ಕುಡಿಯುವುದರಿಂದ ಈ 4 ಹಾನಿಗಳು ಸಂಭವ, ನಿಮಗೂ ಗೊತ್ತಿರಲಿ
ಅಂಕಿಅಂಶಗಳ ಪ್ರಕಾರ, ಪುಣೆ ನಗರದಲ್ಲಿ ಇದುವರೆಗೆ 7 ಒಮಿಕ್ರಾನ್ ಸೋಂಕಿನ ಪ್ರಕರಣಗಳನ್ನು ಗುರುತಿಸಲಾಗಿದೆ, ಅದರಲ್ಲಿ 31 ವರ್ಷದ ಮಹಿಳೆ BA.5 ಉಪ-ರೂಪಾಂತರಿ ಸೋಂಕಿತರಾಗಿದ್ದು, ಇತರ ಎಲ್ಲಾ ಪ್ರಕರಣಗಳು ಬಿಎ.4 ಪ್ರಕರಣಗಳಾಗಿವೆ ಎನ್ನಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.