Corona ಹೊಸ ಅಪಾಯದ ನಡುವೆಯೇ ಬೂಸ್ಟರ್ ಡೋಸ್ ಪಡೆಯಲು ಸಿಕ್ತು ಮತ್ತೊಂದು ಆಯ್ಕೆ

Nasal Vaccine: ಕೊರೊನಾ ಸೋಂಕನ್ನು ತಡೆಗಟ್ಟಲು ನೀವೂ ಕೂಡ ಇದುವರೆಗೆ ಬೂಸ್ಟರ್ ಡೋಸ್ ಪಡೆದುಕೊಂಡಿಲ್ಲ ಎಂದಾದಲ್ಲಿ ನೀವು ಭಾರತ ಬಯೋಟೆಕ್ ನ ನೆಸಲ್ ಲಸಿಕೆಯನ್ನು ಪಡೆದುಕೊಳ್ಳಬಹುದು. ಇಂದಿನಿಂದ CoWIN  ಆಪ್ ನಲ್ಲಿ ಈ ಲಸಿಕೆ ಲಭ್ಯವಿರಲಿದೆ.  

Written by - Nitin Tabib | Last Updated : Dec 23, 2022, 12:59 PM IST
  • ಸದ್ಯ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
  • ಮಾದರಿ ಪರೀಕ್ಷೆಯ ನಂತರ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಡೆಯಲಾಗುವುದಿಲ್ಲ ಎನ್ನಲಾಗಿದೆ.
  • ದೇಶಾದ್ಯಂತ ಆರೋಗ್ಯ ಕೇಂದ್ರಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ.
Corona ಹೊಸ ಅಪಾಯದ ನಡುವೆಯೇ ಬೂಸ್ಟರ್ ಡೋಸ್ ಪಡೆಯಲು ಸಿಕ್ತು ಮತ್ತೊಂದು ಆಯ್ಕೆ title=
Codrona Nasal Vaccine

Bharat Biotech Nasal Vaccine: ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ, ಭಾರತ್ ಬಯೋಟೆಕ್‌ನ ನೆಸಲ್ ವ್ಯಾಕ್ಸಿನ್ ಇಂದಿನಿಂದ CoWIN ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ. ಕೋವಿಡ್ ಮೂಗಿನ ಮೂಲಕ ಪಡೆದುಕೊಳ್ಳುವ ಲಸಿಕೆಯನ್ನು ಬೂಸ್ಟರ್ ಡೋಸ್ ರೂಪದಲ್ಲಿ ನೀವು ಆಯ್ಕೆ ಮಾಡಬಹುದು. ಮೊದಲು ನೀವು ಪಡೆದ ಎರಡು ಲಸಿಕೆಯ ಪ್ರಮಾಣಗಳನ್ನು ಲೆಕ್ಖಿಸದೆ ನೀವು ಈ ನೆಸಲ್ ವ್ಯಾಕ್ಸಿನ್ ಅನ್ನು ಬೂಸ್ಟರ್ ಡೋಸ್ ರೂಪದಲ್ಲಿ ಪಡೆದುಕೊಳ್ಳಬಹುದು. ಪ್ರಸ್ತುತ, ಕೋವಿಡ್ ನೆಸಲ್ ಲಸಿಕೆ ಖಾಸಗಿಯಾಗಿ ಮಾತ್ರ ಲಭ್ಯವಿರುತ್ತದೆ ಮತ್ತು ಇದಕ್ಕಾಗಿ ನೀವು ಹಣವನ್ನು ಪಾವತಿಸಬೇಕಾಗುತ್ತದೆ.

ಇಂದು ಆರೋಗ್ಯ ಸಚಿವರ ಮಹತ್ವದ ಸಭೆ
ಕೊರೊನಾ ಬಿಕ್ಕಟ್ಟಿನ ನಡುವೆಯೇ ಕೇಂದ್ರ ಸರ್ಕಾರ ಕೂಡ ಕಾರ್ಯತತ್ಪರವಾಗಿದೆ. ಇಂದು ಕೊರೊನಾ ವೈರಸ್‌ನ ಪ್ರಸ್ತುತ ಪರಿಸ್ಥಿತಿಯ ಕುರಿತು ಆರೋಗ್ಯ ಸಚಿವರ ಮಹತ್ವದ ಸಭೆ ನಡೆಯಲಿದೆ. ಕೇಂದ್ರ ಆರೋಗ್ಯ ಸಚಿವರು ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಈ ಸಭೆ ನಡೆಸಲಿದ್ದಾರೆ. ಕೊರೊನಾ ಹೊಸ ರೂಪಾಂತರಿಯ ಚರ್ಚೆಗಳ ನಡುವೆಯೇ, ಬೂಸ್ಟರ್ ಡೋಸ್‌ಗಳ ನೋಂದಣಿ ವೇಗಪಡೆದುಕೊಂಡಿದೆ ಎಂಬುದು ಇಲ್ಲಿ ಗಮನಾರ್ಹ. ಇದೇ ವೇಳೆ, ಗುರುವಾರ, ಪಿಎಂ ಮೋದಿ ಅವರು ಕರೋನಾ ಕುರಿತು ಪರಿಶೀಲನಾ ಸಭೆ ನಡೆಸಿದ್ದಾರೆ ಮತ್ತು ಜಿನೋಮ್ ಅನುಕ್ರಮವನ್ನು ಹೆಚ್ಚಿಸುವ ಬಗ್ಗೆ ಒತ್ತು ನೀಡುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-Hair Fall Control Tips: ಕೂದಲುದುರುವಿಕೆ ನಿಲ್ಲುತ್ತಿಲ್ಲವೇ? ಬಿಳಿ ಈರುಳ್ಳಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ

ಸದ್ಯಕ್ಕೆ ಮಾಸ್ಕ್ ಧರಿಸುವ ಅಗತ್ಯವಿಲ್ಲ
ಸದ್ಯ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಮಾದರಿ ಪರೀಕ್ಷೆಯ ನಂತರ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಡೆಯಲಾಗುವುದಿಲ್ಲ ಎನ್ನಲಾಗಿದೆ. ದೇಶಾದ್ಯಂತ ಆರೋಗ್ಯ ಕೇಂದ್ರಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ದೇಶದಲ್ಲಿ ಕೊರೊನಾ ಪರಿಸ್ಥಿತಿ ಇನ್ನೂ ನಿಯಂತ್ರಣದಲ್ಲಿದೆ ಮತ್ತು ಸದ್ಯಕ್ಕೆ ಪರಿಸ್ಥಿತಿಯ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದಾಗ್ಯೂ, ವಿಶ್ವದ ಅನೇಕ ದೇಶಗಳಲ್ಲಿ ಕರೋನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಹೀಗಾಗಿ ಭಾರತದಲ್ಲಿ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಇದನ್ನೂ ಓದಿ-Optical Illusion: ಕೇವಲ ಎರಡೇ ಸೆಕೆಂಡುಗಳಲ್ಲಿ ನೀವು ಎಷ್ಟು ಒತ್ತಡದಲ್ಲಿರುವಿರಿ ತಿಳಿದುಕೊಳ್ಳಬೇಕೇ?

ಈ ದೇಶಗಳಲ್ಲಿ ಕೊರೊನಾ ಸೋಂಕು ಅತಿ ಹೆಚ್ಚು
ವಿಶ್ವದ ಹಲವು ದೇಶಗಳಲ್ಲಿ ಕರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಅಮೆರಿಕದಲ್ಲಿ 19 ಲಕ್ಷ 50 ಸಾವಿರಕ್ಕೂ ಹೆಚ್ಚು, ಫ್ರಾನ್ಸ್‌ನಲ್ಲಿ 11 ಲಕ್ಷಕ್ಕೂ ಹೆಚ್ಚು, ಬ್ರೆಜಿಲ್‌ನಲ್ಲಿ 6 ಲಕ್ಷ 75 ಸಾವಿರಕ್ಕೂ ಹೆಚ್ಚು, ಭಾರತದಲ್ಲಿ 3 ಸಾವಿರದ 380, ಆಸ್ಟ್ರೇಲಿಯಾದಲ್ಲಿ 1 ಲಕ್ಷ 24 ಸಾವಿರಕ್ಕೂ ಹೆಚ್ಚು ಮತ್ತು ಚೀನಾದಲ್ಲಿ 39 ಸಾವಿರದ 400 ಕ್ಕೂ ಹೆಚ್ಚು ಸಕ್ರಿಯ ಕರೋನಾ ಪ್ರಕರಣಗಳಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News