ಕಿಡ್ನಿಯಲ್ಲಿ ಸ್ಟೋನ್ ಆಗಿದ್ದರೆ ಬೆಳಿಗ್ಗೆ ಎದ್ದ ಕೂಡಲೇ ದೇಹದಲ್ಲಿ ಈ ರೀತಿ ಆಗುತ್ತದೆ !ಕಲ್ಲು ಕರಗಿಸುವ ಪ್ರಯತ್ನ ತಕ್ಷಣವೇ ಆರಂಭಿಸಿ

ನಮ್ಮ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ನಾವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಮೂತ್ರಪಿಂಡ ವೈಫಲ್ಯದ ಆರಂಭಿಕ ಲಕ್ಷಣಗಳನ್ನು ಈ ಲೇಖನದಲ್ಲಿ  ನೋಡೋಣ.  

Written by - Ranjitha R K | Last Updated : Dec 9, 2024, 01:34 PM IST
  • ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ.
  • ಸ್ವಲ್ಪ ಸಮಸ್ಯೆಯಾದರೂ ನಾನಾ ರೀತಿಯ ಆರೋಗ್ಯ ಸಮಸ್ಯೆ ಕಾಡುವುದಕ್ಕೆ ಆರಂಭವಾಗುತ್ತದೆ.
  • ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಇರುವ ತ್ಯಾಜ್ಯವನ್ನು ಫಿಲ್ಟರ್ ಮಾಡುತ್ತವೆ.
ಕಿಡ್ನಿಯಲ್ಲಿ ಸ್ಟೋನ್ ಆಗಿದ್ದರೆ ಬೆಳಿಗ್ಗೆ ಎದ್ದ ಕೂಡಲೇ ದೇಹದಲ್ಲಿ ಈ ರೀತಿ ಆಗುತ್ತದೆ !ಕಲ್ಲು ಕರಗಿಸುವ ಪ್ರಯತ್ನ ತಕ್ಷಣವೇ ಆರಂಭಿಸಿ  title=

ಬೆಂಗಳೂರು : ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ.ಇದರಲ್ಲಿ ಸ್ವಲ್ಪ ಸಮಸ್ಯೆಯಾದರೂ ನಾನಾ ರೀತಿಯ ಆರೋಗ್ಯ ಸಮಸ್ಯೆ ಕಾಡುವುದಕ್ಕೆ ಆರಂಭವಾಗುತ್ತದೆ. ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಇರುವ ತ್ಯಾಜ್ಯವನ್ನು ಫಿಲ್ಟರ್ ಮಾಡುತ್ತವೆ.ಇತ್ತೀಚಿನ ದಿನಗಳಲ್ಲಿ ತಪ್ಪು ಜೀವನಶೈಲಿಯಿಂದ ಬಹುತೇಕ ಜನರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ನಮ್ಮ ದಿನಚರಿ, ತಪ್ಪು ಆಹಾರ ಪದ್ಧತಿ ಮತ್ತು ನಮ್ಮ ಜೀವನದಲ್ಲಿ ದೈಹಿಕ ಚಟುವಟಿಕೆಗೆ ಸ್ಥಾನ ನೀಡದಿರುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ. ನಮ್ಮ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ನಾವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಮೂತ್ರಪಿಂಡ ವೈಫಲ್ಯದ ಆರಂಭಿಕ ಲಕ್ಷಣಗಳನ್ನು ಈ ಲೇಖನದಲ್ಲಿ  ನೋಡೋಣ.

ಕಿಡ್ನಿ ಸ್ಟೋನ್ ಇರುವ ಆರಂಭಿಕ ಲಕ್ಷಣಗಳು : 
ಬೆಳಿಗ್ಗೆ ಚಳಿಯ ಅನುಭವ : 

ಬೆಳಿಗ್ಗೆ ಎದ್ದ ತಕ್ಷಣ ಚಳಿ ಚಳಿ ಅನ್ನಿಸುತ್ತಿದ್ದರೆ  ಅದು ಕಿಡ್ನಿ ವೈಫಲ್ಯದ ಲಕ್ಷಣವಾಗಿರಬಹುದು. ಬೆಳಿಗ್ಗೆ ಎದ್ದ ತಕ್ಷಣ ಚಳಿ ಅನುಭವವಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಮೂತ್ರಪಿಂಡಗಳನ್ನು ಪರೀಕ್ಷಿಸಿ. 

ಇದನ್ನೂ ಓದಿ : ನಿದ್ರಾಹೀನತೆ ಸಮಸ್ಯೆ ಕಾಡ್ತಿದ್ಯಾ...! ಹೀಗೆ ಮಾಡಿದ್ರೆ ಮಲಗಿದ ಕೂಡಲೇ ನಿದ್ರೆಗೆ ಜಾರ್ತೀರಾ..!

ನೊರೆ ಮೂತ್ರ : 
ಮೂತ್ರಪಿಂಡದ ಹಾನಿಯ ಮತ್ತೊಂದು ಲಕ್ಷಣವೆಂದರೆ ನೊರೆ ಮೂತ್ರ. ಮೂತ್ರದಲ್ಲಿ  ಫೋಮ್ ಇದ್ದರೆ, ಮೂತ್ರದೊಂದಿಗೆ ಪ್ರೋಟೀನ್ ಕೂಡಾ ದೇಹದಿಂದ ಹೊರ ಹೋಗುತ್ತಿದೆ ಎಂದರ್ಥ. ಮೂತ್ರಪಿಂಡಗಳು ಪೋಷಕಾಂಶಗಳನ್ನು ಸರಿಯಾಗಿ ಫಿಲ್ಟರ್ ಮಾಡಲು ಸಾಧ್ಯವಾಗದಿದ್ದಾಗ ಇದು ಸಂಭವಿಸುತ್ತದೆ.

ದೇಹದಲ್ಲಿ ಊತದ ಭಾವನೆ : 
ಅನೇಕ ಬಾರಿ ನಮ್ಮ ಕೈಗಳು, ಕಾಲುಗಳು ಅಥವಾ ದೇಹದ ಯಾವುದೇ ಭಾಗದಲ್ಲಿ ಊತ ಕಂಡು ಬರುವಂತೆ ಭಾಸವಾಗುತ್ತದೆ. ನಾವು ಸುಲಭವಾಗಿ ಅದನ್ನು ನಿರ್ಲಕ್ಷಿಸುತ್ತೇವೆ. ಆದರೆ ಇದು ಮೂತ್ರಪಿಂಡದ ಹಾನಿಯ ಸಂಕೇತವಾಗಿರಬಹುದು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಬೆಳಿಗ್ಗೆ ದೇಹದಲ್ಲಿ ತುರಿಕೆ : 
ನಿಮ್ಮ ದೇಹದಲ್ಲಿ ಅನಗತ್ಯವಾಗಿ ತುರಿಕೆ ಕಂಡು ಬಂದರೆ ಅದು ಮೂತ್ರಪಿಂಡದ ಹಾನಿಯ ಸಮಸ್ಯೆಯನ್ನು  ಸೂಚಿಸುತ್ತದೆ.ಮೂತ್ರಪಿಂಡದ ಕಲ್ಲು ಅಥವಾ ದೇಹಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯ ಸಂಕೇತವಾಗಿರಬಹುದು. ಆದ್ದರಿಂದ ಇದನ್ನು ನಿರ್ಲಕ್ಷಿಸಬೇಡಿ.  

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News