Study: ಅಧಿಕ ಸೆಕ್ಸ್ ಡ್ರೈವ್ ಹೊಂದಿರುವ ಪುರುಷರು ಹೆಚ್ಚು ಕಾಲ ಬದುಕುತ್ತಾರಂತೆ...ಅಧ್ಯಯನದಲ್ಲಿ ಅಂಶ ಬಹಿರಂಗ!

Research: ಪುರುಷರ ಕಾಮೇಚ್ಛೆಗೆ ಸಂಬಂಧಿಸಿದಂತೆ ಅಧ್ಯಯನವೊಂದು ನಡೆಸಲಾಗಿದೆ. ಈ ಅಧ್ಯಯನದಲ್ಲಿ ನಿಬ್ಬೇರಗಾಗಿಸುವ ಮಾಹಿತಿಯೊಂದು ಬಹಿರಂಗವಾಗಿದೆ. ಯಾಮಾಗಾಟಾ ವಿಶ್ವವಿದ್ಯಾಲಯದ ಡಾ. ಕಾವೋರಿ ಸುಕುರಾಡಾ ಈ ಅಧ್ಯಯನ ನಡೆಸಿದ್ದು, ಯಾವ ಪುರುಷರ ಕಾಮೇಚ್ಛೆಯ ಕೊರತೆ ಇತ್ತೋ ಅವರ ಜೀವನಶೈಲಿ ತುಂಬಾ ಅನಾರೋಗ್ಯಕರವಾಗಿತ್ತು ಎಂದು ಹೇಳಿದ್ದಾರೆ.   

Written by - Nitin Tabib | Last Updated : May 7, 2023, 04:37 PM IST
  • ಈ ಅಧ್ಯಯನಕ್ಕಾಗಿ ಅಧ್ಯಯನಕಾರರು ಒಟ್ಟು 21000 ವ್ಯಕ್ತಿಗಳ ದತ್ತಾಂಶಗಳನ್ನು ಪರಿಗಣಿಸಿದ್ದು, ಇದರಲ್ಲಿ 8500 ಪುರುಷರು ಶಾಮಿಲಾಗಿದ್ದರು.
  • ಶಾರೀರಿಕ ಸಂಬಂಧ ಬೆಳೆಸುವಲ್ಲಿ ಅತಿಯಾದ ಉತ್ಸುಕತೆಯನ್ನು ತೋರಿದ ಪುರುಷರಲ್ಲಿ ಯಾವುದೇ ಕಾರಣದಿಂದ ಸಾವನ್ನಪ್ಪುವ ಸಾಧ್ಯತೆ ಶೇ 69 ರಷ್ಟು ಕಡಿಮೆ ಇರುವುದನ್ನು ಗಮನಿಸಲಾಗಿದೆ.
  • ಸಾಮಾನ್ಯವಾಗಿ ಕಾಮೇಚ್ಛೆಯ ಕೊರತೆ ಅನಾರೋಗ್ಯದ ಸಂಕೇತ ಎಂದು ಭಾವಿಸಲಾಗುತ್ತದೆ. ಇದರಲ್ಲಿ ಬೊಜ್ಜು, ಕ್ರಾನಿಕ್ ಕಾಯಿಲೆಗಳು ಶಾಮೀಲಾಗಿವೆ.
Study: ಅಧಿಕ ಸೆಕ್ಸ್ ಡ್ರೈವ್ ಹೊಂದಿರುವ ಪುರುಷರು ಹೆಚ್ಚು ಕಾಲ ಬದುಕುತ್ತಾರಂತೆ...ಅಧ್ಯಯನದಲ್ಲಿ ಅಂಶ ಬಹಿರಂಗ! title=
ಪುರುಷರ ಆರೋಗ್ಯ!

Research Study: ದೈಹಿಕ ಸಂಬಂಧ ಬೆಳೆಸುವುದು ಒಂದು ಸಾಮಾನ್ಯ ಪ್ರಕ್ರಿಯೆಯಾಗಿದ್ದು ಇದರಿಂದ ಶಾರೀರಿಕ ಹಾಗೂ ಮಾನಸಿಕ ಸಂತೃಪ್ತಿ ಸಿಗುತ್ತದೆ. ಆದರೆ ಉತ್ತಮ ಅಥವಾ ಹೆಚ್ಚಿನ ಸೆಕ್ಸ್ ಡ್ರೈವ್ ಹೊಂದುರುವುದು ಅಸಾಮಾನ್ಯ ಸಂಗತಿಯಲ್ಲಿಯ. ಇದರ ಹಿಂದಿನ ವಿಜ್ಞಾನವನ್ನು ನೀವು ತಿಳಿದರೆ ನಿಮಗೂ ಕೂಡ ನೆಮ್ಮದಿ ಸಿಗಲಿದೆ. ಅತಿಯಾದ ದೈಹಿಕ ಸಂಬಂಧ ಬೆಳೆಸುವ ಇಚ್ಛೆ ಹೊಂದಿರುವುದು ನಿಮ್ಮ ಆಯಸ್ಸನ್ನು ವೃದ್ಧಿಗೊಳಿಸುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಈ ಕುರಿತು ಇತ್ತೀಚೆಗೆ ಒಂದು ಅಧ್ಯಯನ ನಡೆಯಲಾಗಿದ್ದು, ಇದರಲ್ಲಿ ಅತಿಯಾದ ಸೆಕ್ಸ್ ಡ್ರೈವ್ ಹೊಂದಿರುವುದು ಪುರುಷರು ದೀರ್ಘ ಕಾಲ ಬಾಳಿ ಬದುಕುತ್ತಾರೆ ಎನ್ನಲಾಗಿದೆ. ಇಂತಹ ಪುರುಷರು ಸಾವನ್ನಪ್ಪುವ ಸಾಧ್ಯತೆ ಶೇ.69 ರಷ್ಟು ಕಡಿಮೆ ಎನ್ನಲಾಗಿದೆ. ಜಪಾನ್ ನಲ್ಲಿ ನಡೆಸಲಾಗಿರುವ 7 ವರ್ಷಗಳ ಸುದೀರ್ಘ ಅಧ್ಯಯನದಲ್ಲಿ ಈ ಅಂಶ ಬಹಿರಂಗಗೊಂಡಿದೆ. 

ಈ ಅಧ್ಯಯನಕ್ಕಾಗಿ ಅಧ್ಯಯನಕಾರರು ಒಟ್ಟು 21000 ವ್ಯಕ್ತಿಗಳ ದತ್ತಾಂಶಗಳನ್ನು ಪರಿಗಣಿಸಿದ್ದು, ಇದರಲ್ಲಿ 8500 ಪುರುಷರು ಶಾಮಿಲಾಗಿದ್ದರು. ಶಾರೀರಿಕ ಸಂಬಂಧ ಬೆಳೆಸುವಲ್ಲಿ ಅತಿಯಾದ ಉತ್ಸುಕತೆಯನ್ನು ತೋರಿದ ಪುರುಷರಲ್ಲಿ ಯಾವುದೇ ಕಾರಣದಿಂದ ಸಾವನ್ನಪ್ಪುವ ಸಾಧ್ಯತೆ ಶೇ 69 ರಷ್ಟು ಕಡಿಮೆ ಇರುವುದನ್ನು ಗಮನಿಸಲಾಗಿದೆ. ಸಾಮಾನ್ಯವಾಗಿ ಕಾಮೇಚ್ಛೆಯ ಕೊರತೆ ಅನಾರೋಗ್ಯದ ಸಂಕೇತ ಎಂದು ಭಾವಿಸಲಾಗುತ್ತದೆ. ಇದರಲ್ಲಿ ಬೊಜ್ಜು, ಕ್ರಾನಿಕ್ ಕಾಯಿಲೆಗಳು ಶಾಮೀಲಾಗಿವೆ. 

ಯಾಮಾಗಾಟಾ ವಿಶ್ವವಿದ್ಯಾಲಯದ ಡಾ. ಕಾವೋರಿ ಸುಕುರಾಡಾ ಈ ಅಧ್ಯಯನ ತಂಡದ ನೇತೃತ್ವ ವಹಿಸಿದ್ದರು ಹಾಗೂ ಪುರುಷರಲ್ಲಿ ಕಾಮೇಚ್ಚೆಯ ಕೊರತೆ ಅನಾರೋಗ್ಯಕರ ಜೀವನ ಶೈಲಿಯ ಸಂಕೇತವಾಗಿರಬಹುದು ಎಂದು ಅವರು ಹೇಳಿದ್ದಾರೆ. ಯಾವ ಪುರುಷರಲ್ಲಿ ಕಾಮೇಚ್ಛೆಯ ಕೊರತೆ ಇತ್ತೋ ಅವರಲ್ಲಿ ಬಹುತೇಕ ಜನರು ಧೂಮಪಾನ ಹಾಗೂ ಟೈಪ್ 2 ಮಧುಮೇಹ ಹೊಂದಿದವರಾಗಿದ್ದರು. 

ಕಾಮೇಚ್ಚೆಯ ಕೊರತೆ ಶರೀರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ತಜ್ಞರ ಪ್ರಕಾರ ಕಾಮೇಚ್ಚೆಯ ಕೊರತೆ ಇನ್ಫ್ಲಾಮೇಷನ್, ನ್ಯೂರೋಎಂಡೋಕ್ರೈನ್ ಹಾಗೂ ಇಮ್ಯೂನಿಟಿಯನ್ನು ಪ್ರಭಾವಿತಗೊಳಿಸುತ್ತದೆ. ದಂಪತಿಗಳು ವಾರದಲ್ಲಿ ಒಂದರಿಂದ ಎರಡು ಬಾರಿ ದೈಹಿಕ ಸಂಬಂಧ ಬೆಳೆಸುವುದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ.

ದೈಹಿಕ ಸಂಬಂಧ ಬೆಳೆಸುವುದರಿಂದಾಗುವ ಲಾಭಗಳು
ತಜ್ಞರ ಪ್ರಕಾರ ದಂಪತಿಗಳು ವಾರದಲ್ಲಿ ಒಂದರಿಂದ ಎರಡು ಬಾರಿ ದೈಹಿಕ ಸಂಬಂಧ ಬೆಳೆಸುವುದರಿಂದ ಅವರಿಗೆ ಹಲವು ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಎನ್ನಲಾಗಿದೆ. ವಾರದಲ್ಲಿ ಎರಡು ಬಾರಿ ಶಾರೀರಿಕ ಸಂಬಂಧ ಬೆಳೆಸುವುದರಿಂದ ಮೂಡ್ ಸರಿಯಾಗಿರುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ  ಹಾಗೂ ಇನ್ಫ್ಲಾಮೇಷನ್ ನಲ್ಲಿ ಸುಧಾರಣೆ ಕಂಡುಬರುತ್ತದೆ. 

ಇದನ್ನೂ ಓದಿ-Diabetes: ಮಧುಮೇಹ ರೋಗಿಗಳಿಗೆ ವರದಾನಕ್ಕೆ ಸಮಾನ ಕೆಂಪು ಪಾಲಕ್, ಕೆಲವೇ ನಿಮಿಷಗಳಲ್ಲಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಬರುತ್ತೆ!

ಹೆಚ್ಚುವರಿ ಸೆಕ್ಸ್ ಡ್ರೈವ್ ಮರಣದ ಅಪಾಯ ಹೇಗೆ ತಗ್ಗಿಸುತ್ತದೆ?
ಈ ಅಧ್ಯಯನದಲ್ಲಿ ಪಾಲ್ಗೊಂಡ ಪುರುಷರಿಗೆ ಅಧ್ಯಯನಕಾರರು, ಪರಸ್ಪರ ವಿರುದ್ಧ ಲಿಂಗ ಹೊಂದಿರುವವರ ಬಗ್ಗೆ ನಿಮಗೆ ಆಸಕ್ತಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಶೇ.82 ರಷ್ಟು ಪುರುಷರು ಹೌದು ಎಂದು ಉತ್ತರಿಸಿದ್ದಾರೆ. ಉಳಿದ ಆಸಕ್ತಿ ಹೊಂದದೆ ಇರುವ ಪುರುಷರಲ್ಲಿ ಮಧುಮೇಹದ ಸಾಧ್ಯತೆ ಅಧಿಕವಾಗಿತ್ತು ಹಾಗೂ ಬಹುತೇಕರು ವೃದ್ಧರಾಗಿದ್ದರು. ಅಧಿಕ ಕಾಮೇಚ್ಛೆ ಹೊಂದಿದ ಪುರುಷರಲ್ಲಿ ಮರಣದ ಅಪಾಯ ತುಂಬಾ ಕಡಿಮೆಯಾಗಿತ್ತು. ಆದರೆ, ಈ ಪ್ಯಾಟರ್ನ್ ಮಹಿಳೆಯರ ಮೇಲೆ ಪ್ರಯೋಗಿಸಲಾಗಿಲ್ಲ. 

ಇದನ್ನೂ ಓದಿ-Alert ! ಚಮಚೆ ಬಳಸಿ ಊಟ ಮಾಡುವವರಿಗೊಂದು ಎಚ್ಚರಿಕೆ! ಈ ಅಪಾಯ ಕಟ್ಟಿಟ್ಟ ಬುತ್ತಿ

ಕಾಮೇಚ್ಛೆಯ ಕೊರತೆಗೆ ಈ ಹಾರ್ಮೋನ್ ಕಾರಣ
ವಯಸ್ಸಿಗೆ ತಕ್ಕಂತೆ ನಮ್ಮ ದೇಹದಲ್ಲಿ ಹಾರ್ಮೋನ್ ಗಳ ಮಟ್ಟ ಕೂಡ ಬದಲಾವಣೆಯಾಗುತ್ತವೆ. ನಮ್ಮ ದೇಹದಲ್ಲಿರುವ ಸೆಕ್ಸ್ ಹಾರ್ಮೋನ್ ಗಳಾಗಿರುವ ಇಸ್ಟ್ರೊಜನ್, ಟೆಸ್ಟೊಸ್ಟಿರಾನ್ ಹಾಗೂ ಪ್ರೊಜೆಸ್ಟ್ರಾನ್ ಗಳ ಮಟ್ಟ ವಯಸ್ಸಿಗೆ ತಕ್ಕಂತೆ ಬದಲಾಗುತ್ತವೆ.  ಈ ಹಾರ್ಮೋನ್ ಗಳ ಮಟ್ಟ ಏರಿಳಿತಕ್ಕೆ ಒಳಗಾಗುತ್ತದೆ. ಒವ್ಯುಲೇಶನ್ ಅಂದರೆ ಅಂಡಾಣು ನಿರ್ಮಾಣದ ವೇಳೆ ಮಹಿಳೆಯರಲ್ಲಿ ಇಷ್ಟ್ರೋಜನ್ ಮಟ್ಟದಲ್ಲಿ ಏರಿಳಿತ ಉಂಟಾಗುತ್ತದೆ ಮತ್ತು ಇದರಿಂದ ಅವರಲ್ಲಿ ಅಧಿಕ ಸೆಕ್ಸ್ ಡ್ರೈವ್ ಕೂಡ ಗಮನಿಸಲಾಗುತ್ತದೆ. ಪುರುಷರಲ್ಲಿ   ಟೆಸ್ಟೊಸ್ಟಿರಾನ್ ಮಟ್ಟದಲ್ಲಿನ ಹೆಚ್ಚಳ ಅಧಿಕ ಕಾಮೇಚ್ಛೆಯನ್ನು ಸಂಕೇತಿಸುತ್ತದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News