ಮೂತ್ರಪಿಂಡದ ಹರಳುಗಳ ಸಮಸ್ಯೆ ಇರುವವರಿಗೆ ವರದಾನ ಈ ಜ್ಯೂಸ್ ಗಳು!

Kidney Care Tips: ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗ್ವೆ, ಕಿಡ್ನಿ ನಮಗೆ ನಮ್ಮ ದೇಹದ ಅನೇಕ ಕಾರ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.ಆದ್ದರಿಂದ ಮೂತ್ರಪಿಂಡವನ್ನು ಆರೋಗ್ಯಕರವಾಗಿಡುವುದು ತುಂಬಾ ಮಹತ್ವದ್ದಾಗಿದೆ.   

Written by - Nitin Tabib | Last Updated : Jul 28, 2023, 09:15 PM IST
  • ಕಿಡ್ನಿಯನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಕಿಡ್ನಿಯನ್ನು ಡಿಟಾಕ್ಸ್ ಮಾಡುವುದು ಕೂಡ ಮಹತ್ವದ್ದಾಗಿದೆ.
  • ಇದಕ್ಕಾಗಿ ನಿಮ್ಮ ಆಹಾರದಲ್ಲಿ ನೀವು ಕೆಲವು ಪಾನೀಯಗಳನ್ನು ಶಾಮೀಲುಗೊಳಿಸಬೇಕು .
  • ನಿಮ್ಮ ಕಿಡ್ನಿಯನ್ನು ನೀವು ಹೇಗೆ ಡಿಟಾಕ್ಸ್ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಮೂತ್ರಪಿಂಡದ ಹರಳುಗಳ ಸಮಸ್ಯೆ ಇರುವವರಿಗೆ ವರದಾನ ಈ ಜ್ಯೂಸ್ ಗಳು! title=

Kidney Care Tips: ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗ್ವೆ, ಕಿಡ್ನಿ ನಮಗೆ ನಮ್ಮ ದೇಹದ ಅನೇಕ ಕಾರ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.ಆದ್ದರಿಂದ ಮೂತ್ರಪಿಂಡವನ್ನು ಆರೋಗ್ಯಕರವಾಗಿಡುವುದು ತುಂಬಾ ಮಹತ್ವದ್ದಾಗಿದೆ. ಮತ್ತೊಂದೆಡೆ, ಆರೋಗ್ಯಕರ ಆಹಾರ ಮತ್ತು ಸಾಕಷ್ಟು ನೀರು ಕುಡಿಯುವ ಮೂಲಕ ಮೂತ್ರಪಿಂಡವನ್ನು (Health Care News) ಆರೋಗ್ಯಕರವಾಗಿರಿಸಿಕೊಳ್ಳಬಹುದು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಕಿಡ್ನಿ ಹಾಳಾಗುವ ಅಪಾಯ ಕಡಿಮೆಯಾಗುತ್ತದೆ. ಇನ್ನೊಂದೆಡೆ ಕಿಡ್ನಿಯನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಕಿಡ್ನಿಯನ್ನು ಡಿಟಾಕ್ಸ್ ಮಾಡುವುದು ಕೂಡ ಮಹತ್ವದ್ದಾಗಿದೆ. ಇದಕ್ಕಾಗಿ ನಿಮ್ಮ ಆಹಾರದಲ್ಲಿ ನೀವು ಕೆಲವು ಪಾನೀಯಗಳನ್ನು ಶಾಮೀಲುಗೊಳಿಸಬೇಕು . ನಿಮ್ಮ ಕಿಡ್ನಿಯನ್ನು ನೀವು ಹೇಗೆ ಡಿಟಾಕ್ಸ್ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 
 
ಕಿಡ್ನಿ ಡಿಟಾಕ್ಸ್ ಪಾನೀಯಗಳು
ಸೇಬು-ವಿನೆಗರ್ ನಿಂದ ತಯಾರಿಸಿದ ಜ್ಯೂಸ್

ಆಪಲ್ ಸೈಡರ್ ವಿನೆಗರ್‌ನಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಸಿಡ್ರಿಕ್ ಆಮ್ಲವು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಮತ್ತು ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದನ್ನು ಬಳಸಿ ಡಿಟಾಕ್ಸ್ ಪಾನೀಯವನ್ನು ತಯಾರಿಸಬಹುದು, ಇದಕ್ಕಾಗಿ ನೀವು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಸೇರಿಸಿ. ಮತ್ತು ಇದನ್ನು ಪ್ರತಿದಿನ ಸೇವಿಸಿ, ಹೀಗೆ ಮಾಡುವುದರಿಂದ ನಿಮ್ಮ ಮೂತ್ರಪಿಂಡವು ನಿರ್ವಿಶಗೊಳ್ಳಲು ಆರಂಭಗೊಳ್ಳುತ್ತದೆ. 

ದಾಳಿಂಬೆ ಜ್ಯೂಸ್ 
ದಾಳಿಂಬೆಯು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ ಮತ್ತು ಇದು ಮೂತ್ರಪಿಂಡದಲ್ಲಿನ ಕಲ್ಲುಗಳ ಸಮಸ್ಯೆಯನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ, ಇದರಲ್ಲಿರುವ ಗುಣಗಳು ಕಲ್ಲುಗಳ ಸಂರಚನೆಯನ್ನು ತಡೆಯುತ್ತದೆ. ಇದನ್ನು ಸೇವಿಸಲು, ನೀವು ಪ್ರತಿದಿನ ತಾಜಾ ದಾಳಿಂಬೆ ಜ್ಯೂಸ್ ಅನ್ನು ಸೇವಿಸಬಹುದು.

ಇದನ್ನೂ ಓದಿ-ಜೋತು ಬಿದ್ದ ಶರೀರವನ್ನು ಸ್ಲಿಮ್-ಟ್ರಿಮ್ ಆಗಿಸಲು ಈ ರೀತಿ ಹೆಸರು ಬೆಳೆಯನ್ನು ನಿಮ್ಮ ಊಟದಲ್ಲಿ ಶಾಮೀಲುಗೊಳಿಸಿ!

ಬೀಟ್ರೂಟ್ ಜ್ಯೂಸ್
ಬೀಟ್ ರಸದಲ್ಲಿ ಬೀಟೈನ್ ಎಂಬ ರಾಸಾಯನಿಕ ಇರುತ್ತದೆ, ಇದು ತುಂಬಾ ಪ್ರಯೋಜನಕಾರ ಮತ್ತು ಫೈಟೊಕೆಮಿಕಲ್ ಆಗಿರುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ, ಇಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ಬೀಟ್ ಜ್ಯೂಸ್ ಅನ್ನು ಸೇವಿಸಿದರೆ, ನಂತರ ಮೂತ್ರಪಿಂಡಗಳನ್ನು ನಿರ್ವಿಷಗೊಳಿಸುವುದರ ಜೊತೆಗೆ, ಮೂತ್ರಪಿಂಡ ಕಲ್ಲುಗಳ ಅಪಾಯ ಕೂಡ ದೂರಾಗುತ್ತದೆ.

ಇದನ್ನೂ ಓದಿ-ನೀವೂ ನಿಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು ಕಾಟನ್ ಬಡ್ಸ್ ಬಳಸುತ್ತೀರಾ? ಈ ವರದಿಯನ್ನೊಮ್ಮೆ ಓದಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು  ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News