Health Tipes: ಕಂಟೋಲ ಅಥವಾ ಮಾಡ ಹಾಗಲಕಾಯಿ ಕೂಡ ಮಾರುಕಟ್ಟೆಗಳಲ್ಲಿ ದುಬಾರಿ ಬೆಲೆಯಲ್ಲಿ ಲಭ್ಯವಾಗುತ್ತದೆ. ಕಾರಣ ಇದನ್ನು ಬೆಳೆಯುವವರ ಸಂಖ್ಯೆ ತೀರ ಕಡಿಮೆ. ಆದರೆ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ.
ಇದರಲ್ಲಿ ಫೈಬರ್, ವಿಟಮಿನ್, ಖನಿಜ,ಪ್ರೋಟೀನ್ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಅನೇಕ ಪೋಷಕಾಂಶ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿನವಿಟಮಿನ್ ಎ ಇರುವುದರಿಂದ ಕಣ್ಣಿನ ಸಮಸ್ಯೆಗಳನ್ನು ದೂರಗೊಳಿಸಿ ಉತ್ತಮ ದೃಷ್ಟಿ ಹೊಂದಲು ಸಹಕಾರಿಯಾಗಿದೆ.
ಇದನ್ನೂ ಓದಿ:Lemon peel & Juice: ನಿಂಬೆ ಹಣ್ಣಿನ ಸಿಪ್ಪೆ& ರಸದಿಂದ ಈ ಸಮಸ್ಯೆಗಳಿಗೆ ಪರಿಹಾರ..!
ಮಧುಮೇಹ ನಿಯಂತ್ರಣ: ಇದು ಹಾಗಲಕಾಯಿ ಅಷ್ಟೇ ಪರಿಣಾಮಕಾರಿಯಾಗಿದೆ ಆದ್ರೆ ಕಹಿ ಅಂಶ ಹೊಂದಿರುವುದಿಲ್ಲ. ಇದರ ನಿಯಮಿತ್ತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಿಸಿ ಮಧುಮೇಹವನ್ನು ನಿಯಂತ್ರಿಸುತ್ತದೆ.
ಇದು ಕಡಿಮೆ ಕ್ಯಾಲೋರಿ ಮತ್ತು ಅಧಿಕ ನೀರಿನಾಂಶ,ಫೈಬರ್ ಹೊಂದಿರುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ.
ಕಂಟೋಲ ಆಂಟಿಆಕ್ಸಿಡೆಂಟ್‌ಗಳು, ಆಲ್ಫಾ-ಕ್ಯಾರೋಟಿನ್, ಲುಟೀನ್, ಬೀಟಾ-ಕ್ಯಾರೋಟಿನ್ ಮತ್ತು ಜಿಯಾಕ್ಸಾಂಥಿನ್ ಅಂಶವು ದೇಹವನ್ನು ಆರೋಗ್ಯವಾಗಿರಿಸಲು ಸಹಕರಿಸುತ್ತದೆ.
ಇದನ್ನೂ ಓದಿ:Wild Tomato: ಊರಲ್ಲ...ʼಕಾಡು ಟೊಮೆಟೊʼ ಬಗ್ಗೆ ನಿಮಗೆಷ್ಟು ಗೊತ್ತು..?
ಕಂಟೋಲ ಅಥವಾ ಮಾಡ ಹಾಗಲಕಾಯಿ ಪಲ್ಯದ ರೀತಿಯಲ್ಲಿ ಸೇವಿಸಬಹುದಾಗಿದೆ. ಅಥವಾಇದರಿಂದ ಬೋಂಡ ಕೂಡ ಮಾಡಬಹುದು. ಈ ತರಕಾರಿಯನ್ನು ಬೇಯಿಸಿ ಮಕ್ಕಳಿಗೆ ಇದರ ರಸ ನೀಡುವುದರಿಂದ ಮಕ್ಕಳ ಕಫ ನಿವಾರಣೆ ಆಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.