ನವ ದೆಹಲಿ: ಇಂದಿನ ಮಕ್ಕಳು ಟಿವಿ ನೋಡುವುದು, ಕಂಪ್ಯೂಟರ್ ಗೇಮ್ಸ್, ವಿಡಿಯೋ ಗೇಮ್ಸ್ ಇದರಲ್ಲೇ ಮಗ್ನರಾಗಿರುತ್ತಾರೆ. ಇನ್ನೊಂದೆಡೆ, ಮಕ್ಕಳು ಶಾಲೆಯಲ್ಲಿ ಸಂಘಟಿತ ಆಟಗಳಲ್ಲಿ ಪಾಲ್ಗೊಂಡು ದೈಹಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಇದು ಅವರ ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ, ಅವರು ಮನೆಯ ಹೊರಗೆ ಇತರ ಮಕ್ಕಳೊಂದಿಗೆ ಬೆರೆಯುವುದಿಲ್ಲ ಅಥವಾ ಹೊರಗೆ ಆಡಲು ಇಷ್ಟಪಡುವುದೂ ಇಲ್ಲ. ಇದರಿಂದಾಗಿ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ. ಮಕ್ಕಳು ಶಾಲೆಯಲ್ಲಿ ಸಂಘಟಿತ ಆಟಗಳಲ್ಲಿ ಪಾಲ್ಗೊಳ್ಳುತ್ತಾರೆ ಇದರಿಂದ ಅವರ ಶರೀರ ಫಿಟ್ ಆಗಿರುತ್ತದೆ ಎಂದು ಪೋಷಕರು ಅಂದುಕೊಳ್ಳುತ್ತಾರೆ. ಆದರೆ, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅವರು ಮನೆಯಿಂದ ಹೊರಗೆ ಆಟ ಆಡುವುದು ಬಹಳ ಅಗತ್ಯ ಎಂದು ಇತ್ತೀಚಿಗೆ ನಡೆಸಲಾದ ಸಂಶೋಧನೆಯೊಂದು ತಿಳಿಸಿದೆ.
ಸಂಘಟಿತ ಜೀವನಶೈಲಿಗಾಗಿ ಎಷ್ಟು ಚಟುವಟಿಕೆ ಅವಶ್ಯಕತೆಯಿದೆ ಎಂಬುದನ್ನು ತಿಳಿಯುವುದು ಮಾತ್ರ ಸಮಸ್ಯೆ ಎಂದು ತಜ್ಞರು ಹೇಳುತ್ತಾರೆ. ದಿನನಿತ್ಯದ ದೈಹಿಕ ಚಟುವಟಿಕೆಗಳಿಗಾಗಿ ಕುಟುಂಬಗಳು ತಮ್ಮ ಮಕ್ಕಳಿಗೆ ಹೆಚ್ಚಿನ ಸಮಯವನ್ನು ನೀಡಬೇಕು. "ಕುಟುಂಬವು ತಮ್ಮ ಮಕ್ಕಳು ವೇಗವಾಗಿ ಉಸಿರಾಡುವಂತೆ ಮತ್ತು ಬೆವರಲು ಬಿಡುವುದಿಲ್ಲ ಎಂದಾದರೆ ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದರ್ಥ" ಎಂದು ತಜ್ಞರು ಹೇಳುತ್ತಾರೆ.
"ಮಕ್ಕಳಿಗೆ ದೈಹಿಕ ಚಟುವಟಿಕೆಗಾಗಿ ಹೆಚ್ಚಿನ ಅವಕಾಶಗಳು ಇರಬೇಕು. ನಿಮ್ಮ ಮಕ್ಕಳನ್ನು ನೆರೆ-ಹೊರೆಯ ಮಕ್ಕಳೊಡನೆ ಹೊರಗೆ ಆಟವಾಡಲು ಅವಕಾಶ ಕಲ್ಪಿಸಿ. ಸ್ವಲ್ಪ ದೊಡ್ಡ ಮಕ್ಕಳಾದರೆ ಸೈಕಲ್ ಹೊಡೆಯುವುದನ್ನು ಪ್ರೇರೇಪಿಸಿ ಎಂದು ವೈದ್ಯರು ಸಲಹೆ ನೀಡುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಕ್ಕಳು ಒಂದು ಕನಿಷ್ಠ ಒಂದು ಗಂಟೆಯಾದರೂ ಏರೋಬಿಕ್ ಚಟುವಟಿಕೆಯಲ್ಲಿ ತೊಡಗಬೇಕು. ಆದರೆ ಇತರ ಸಂಶೋಧನೆಗಳಲ್ಲಿ, ಕ್ರೀಡೆಗಳಲ್ಲಿ ತೊಡಗಿರುವ ಮಕ್ಕಳು 20-30 ನಿಮಿಷಗಳಲ್ಲಿ ಮಾತ್ರ ಶ್ರಮಿಸುತ್ತಿದ್ದರು ಎಂದು ಪತ್ತೆಯಾಗಿದೆ.