Head bath daily : ಮುಖದ ಸೌಂದರ್ಯ ಹೆಚ್ಚುವಲ್ಲಿ ಕೂದಲು ಪ್ರಮುಖ ಸ್ಥಾನ ವಹಿಸುತ್ತದೆ. ಕೂದಲಿನ ರಕ್ಷಣೆ ಬಹಳ ಮುಖ್ಯ. ಕೆಲವರು ತಮ್ಮ ಕೂದಲಿಗೆ ಏನೂ ಆಗಬಾರದು ಅಂತ ಜಾಗೃತಿ ವಹಿಸುತ್ತಾರೆ. ಈ ಪೈಕಿ ಕೆಲವು ಜನರು ಪ್ರತಿನಿತ್ಯ ತಲೆ ಸ್ನಾನ ಮಾಡುತ್ತಾರೆ, ಇನ್ನೂ ಕೆಲವು ಮಂದಿ ವಾರಕ್ಕೊಮ್ಮೆ ತಲೆ ಸ್ನಾನ ಮಾಡುತ್ತಾರೆ.. ಹಾಗಿದ್ರೆ, ಇವು ಎರಡರಲ್ಲಿ ಯಾವುದು ಉತ್ತಮ ವಿಧಾನ.. ಬನ್ನಿ ತಿಳಿಯೋಣ..
ನಮ್ಮ ದೇಹದಲ್ಲಿರುವ ಬೆವರನ್ನು ಸ್ವಚ್ಛಗೊಳಿಸಲು ಮತ್ತು ಕೊಳೆಯನ್ನು ತೆಗೆದುಹಾಕಲು ಪ್ರತಿದಿನ ಸ್ನಾನ ಮಾಡಬೇಕು. ದೇಹದಿಂದ ಬೆವರು ಬರುವಂತೆ ತಲೆಯಿಂದಲೂ ಬೆವರು ಬರುತ್ತದೆ. ನೀವು ನಿಯಮಿತವಾಗಿ ನಿಮ್ಮ ತಲೆಯನ್ನು ತೊಳೆಯದಿದ್ದರೆ, ತಲೆಹೊಟ್ಟು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಗುರಿಯಾಗಬಹುದು.
ಇದನ್ನೂ ಓದಿ:ಮಧುಮೇಹಿಗಳಿಗೆ ವರದಾನ ಈ ಗೋಧಿ.. ಇದನ್ನು ತಿಂದರೆ ತೂಕ ಹೆಚ್ಚಾಗುವುದಿಲ್ಲ, ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ..!
ದಿನವೂ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು. ಆದರೆ, ಕೂದಲಿಗೆ ಸಂಬಂಧಿಸಿದಂತೆ ಕೂದಲಿನ ವಿನ್ಯಾಸ ಅವಲಂಬಿಸಿ, ಪ್ರತಿದಿನ ನಮ್ಮ ತಲೆಯನ್ನು ತೊಳೆಯಬೇಕು. ಆದ್ದರಿಂದ, ನಿಮ್ಮ ಕೂದಲಿನ ವಿನ್ಯಾಸವನ್ನು ತಿಳಿದುಕೊಂದು ದಿನ ನಿತ್ಯ ಸ್ನಾನ ಮಾಡುವುದು ಉತ್ತಮ..
ಒಣ ಕೂದಲು ಹೊಂದಿರುವವರು ವಾರಕ್ಕೊಮ್ಮೆ ಅಥವಾ ಎರಡು ಬಾರಿ ತಲೆ ಸ್ನಾನ ಮಾಡಿದರೆ ಸಾಕು. ತುಂಬಾ ಒಣ ಕೂದಲು ಇರುವವರು ವಾರಕ್ಕೊಮ್ಮೆ ಮಾತ್ರ ತಮ್ಮ ಕೂದಲನ್ನು ತೊಳೆಯಬೇಕು ಎಂದು ವೈದ್ಯರು ಹೇಳುತ್ತಾರೆ. ತಲೆಹೊಟ್ಟು ಸಮಸ್ಯೆ ಇರುವವರು ಪ್ರತಿ ದಿನವೂ ತಮ್ಮ ಕೂದಲನ್ನು ತೊಳೆಯಬಹುದು.
ಇದನ್ನೂ ಓದಿ:ಸುಲಭವಾಗಿ ಬೊಜ್ಜು ಕರಗಿಸಲು ಈ ರೀತಿ ಕುಂಬಳಕಾಯಿ ಸೇವಿಸಿ
ನೆತ್ತಿಯಲ್ಲಿರುವ ನೈಸರ್ಗಿಕ ಎಣ್ಣೆಯು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆಗಾಗ ತಲೆ ಸ್ನಾನ ಮಾಡುವುದರಿಂದ ಅದು ಹಾಳಾಗುತ್ತದೆ. ನಾವು ಸ್ನಾನ ಮಾಡಿದ ನಂತರ ಹೇರ್ ಡ್ರೈಯರ್ ಬಳಸಿದರೂ ಕೂದಲಿಗೆ ಹಾನಿಯಾಗುತ್ತದೆ. ಆದ್ದರಿಂದ, ಪ್ರತಿದಿನ ತಲೆ ಸ್ನಾನ ಮಾಡುವುದನ್ನು ತಪ್ಪಿಸಬೇಕು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.