Side Effects Of Paneer :ಈ ಸಮಸ್ಯೆಗಳಿರುವವರು ಪನ್ನೀರ್ ತಿನ್ನುವುದನ್ನು ತಕ್ಷಣ ನಿಲ್ಲಿಸಬೇಕು

ಪನೀರ್  ಅನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಬಹುದು. ಆದರೆ ದೇಹದಲ್ಲಿ ಅಧಿಕ ಪ್ರಮಾಣದ ಪ್ರೋಟೀನ್ ಇದ್ದರೆ, ಅತಿಸಾರದ ಸಮಸ್ಯೆ ಉಂಟಾಗಬಹುದು. 

Written by - Ranjitha R K | Last Updated : Sep 24, 2021, 09:10 PM IST
  • ಪನೀರ್ ನಲ್ಲಿ ಅನೇಕ ಖಾದ್ಯಗಳನ್ನು ತಯಾರಿಸಬಹುದು.
  • ಸಸ್ಯಾಹಾರಿಗಳೇ ಆಗಲಿ ಮಾಂಸಾಹಾರಿಗಳೇ ಆಗಲಿ, ಪನೀರ್ ತಿನ್ನಲು ಇಷ್ಟಪಡುತ್ತಾರೆ.
  • ಪನೀರ್ ಪ್ರೋಟೀನ್‌ನ ಉತ್ತಮ ಮೂಲ
 Side Effects Of Paneer :ಈ ಸಮಸ್ಯೆಗಳಿರುವವರು ಪನ್ನೀರ್ ತಿನ್ನುವುದನ್ನು ತಕ್ಷಣ ನಿಲ್ಲಿಸಬೇಕು title=
ಪನೀರ್ ಪ್ರೋಟೀನ್‌ನ ಉತ್ತಮ ಮೂಲ (file photo)

ನವದೆಹಲಿ : Side Effects Of Eating Paneer: ಪನೀರ್ ನಲ್ಲಿ ಅನೇಕ ಖಾದ್ಯಗಳನ್ನು ತಯಾರಿಸಬಹುದು. ಪನ್ನೀರ್ ಅನ್ನು ಇಷ್ಟಪಡದವರು ಸಾಮಾನ್ಯವಾಗಿ ಯಾರೂ ಇರಲಿಕ್ಕಿಲ್ಲ. ಕೆಲವರಂತೂ ಬೆಳಗಿನ ಉಪಾಹಾರದಿಂದ ರಾತ್ರಿಯವರೆಗೆ ಪನೀರ್‌ನಿಂದ (Paneer) ಮಾಡಿದ ಖಾದ್ಯವನ್ನು ತಿನ್ನಲು ಇಷ್ಟಪಡುತ್ತಾರೆ. ಪನೀರ್ ಹೆಸರನ್ನು ತೆಗೆದುಕೊಂಡ ತಕ್ಷಣ ನಮ್ಮ ಬಾಯಲ್ಲಿ ನೀರು ಹರಿಯಲು ಆರಂಭವಾಗುತ್ತದೆ. ಸಸ್ಯಾಹಾರಿಗಳೇ ಆಗಲಿ ಮಾಂಸಾಹಾರಿಗಳೇ ಆಗಲಿ, ಪನೀರ್ ತಿನ್ನಲು ಇಷ್ಟಪಡುತ್ತಾರೆ. ಪನೀರ್ ಅನ್ನು ಹಾಲಿನಿಂದ (Milk) ತಯಾರಿಸಲಾಗುತ್ತದೆ. ಆದ್ದರಿಂದ ಇದನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್ ಮಾತ್ರವಲ್ಲದೆ ಕ್ಯಾಲ್ಸಿಯಂ, ಫಾಸ್ಪರಸ್, ಸೆಲೆನಿಯಮ್, ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಆದರೆ ಪನೀರ್ ನ ಅತಿಯಾದ ಸೇವನೆಯು ಆರೋಗ್ಯಕ್ಕೆ (Side effects of paneer)ಹಾನಿಕಾರಕವಾಗಿದೆ. ಇದನ್ನು ಅತಿಯಾಗಿ ಸೇವಿಸಿದರೆ, ಕೊಲೆಸ್ಟ್ರಾಲ್ ಹೆಚ್ಚುತ್ತದೆ. 

ಪನೀರ್ ತಿನ್ನುವುದರಿಂದ ಆಗುವ ಅನಾನುಕೂಲಗಳು:
1.ಅತಿಸಾರ :  ಪನೀರ್  (Paneer)ಅನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಬಹುದು. ಆದರೆ ದೇಹದಲ್ಲಿ ಅಧಿಕ ಪ್ರಮಾಣದ ಪ್ರೋಟೀನ್ ಇದ್ದರೆ, ಅತಿಸಾರದ ಸಮಸ್ಯೆ ಉಂಟಾಗಬಹುದು. 

ಇದನ್ನೂ ಓದಿ : Benefits of Cake: ಕೇಕ್ ತಿನ್ನುವುದರಿಂದಲೂ ಪ್ರಯೋಜನಗಳಿವೆಯೇ? ಈ ಲೇಖನವನ್ನು ಒಮ್ಮೆ ಓದಿ

2. ರಕ್ತದೊತ್ತಡ: ಪನೀರ್ ಆರೋಗ್ಯಕ್ಕೆ ಪ್ರಯೋಜನಕಾರಿ (Benefits of paneer) ಎಂದು ಪರಿಗಣಿಸಲಾಗಿದೆ. ಆದರೆ ನೀವು ಅಧಿಕ ರಕ್ತದೊತ್ತಡದ ರೋಗಿಯಾಗಿದ್ದರೆ ಅದನ್ನು ಹೆಚ್ಚು ಸೇವಿಸಬೇಡಿ. ಇದನ್ನು ಅತಿಯಾಗಿ ಸೇವಿಸಿದರೆ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. 

3. ಸೋಂಕು: ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ನಮ್ಮಲ್ಲಿ ಹೆಚ್ಚಿನವರು ಪನೀರ್ ಕಚ್ಚಾ (Raw paneer) ತಿನ್ನಲು ಬಯಸುತ್ತಾರೆ. ಆದರೆ ಹಸಿ ಪನೀರ್ ನ ನ ಅತಿಯಾದ ಸೇವನೆಯು ಸೋಂಕನ್ನು  (Infection) ಉಂಟುಮಾಡಬಹುದು.  

4. ಜೀರ್ಣಕ್ರಿಯೆ: ನಿಮಗೆ ಜೀರ್ಣಕ್ರಿಯೆ, ಮಲಬದ್ಧತೆ (constipation), ಆಸಿಡಿಟಿ ಸಮಸ್ಯೆಯಿದ್ದರೆ, ಹೆಚ್ಚು ಪನೀರ್ ಸೇವಿಸಬಾರದು. ವಿಶೇಷವಾಗಿ ರಾತ್ರಿಯಲ್ಲಂತೂ ಪನೀರ್ ಅನ್ನು ಸೇವಿಸಲೇಬೇಡಿ. ಪನೀರ್ ನ ಅತಿಯಾದ ಸೇವನೆಯು ಆಸಿಡಿಟಿ ಉಂಟುಮಾಡಬಹುದು.

ಇದನ್ನೂ ಓದಿ : Ragi Health Benefits : ತೂಕ ಇಳಿಸುವುದರ ಜೊತೆಗೆ ಮೂಳೆಗಳನ್ನು ಬಲಪಡಿಸುತ್ತದೆ 'ರಾಗಿ', ಈ 5 ಪ್ರಚಂಡ ಪ್ರಯೋಜನಗಳ ಬಗ್ಗೆ ತಿಳಿಯಿರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News