ಈ ಐದು ಸಮಸ್ಯೆ ನಿಮಗಿದ್ದರೆ ತಿನ್ನಲೇಬೇಡಿ ಮೂಲಂಗಿ ! ಆರೋಗ್ಯದ ಮೇಲಾಗುವುದು ಭಾರೀ ಪರಿಣಾಮ

Side Effects of Eating Radish : ಮೂಲಂಗಿಯನ್ನು ತಿನ್ನುವುದರಿಂದ ಕೆಲವು ಅಡ್ಡ ಪರಿಣಾಮಗಳು ಕೂಡಾ ಗೋಚರಿಸುತ್ತವೆ. ಹೀಗಾಗಿ ಕೆಲವು ಸಮಸ್ಯೆಯಿಂದ ಬಳಲುತ್ತಿದ್ದರೆ ಮೂಲಂಗಿ ಸೇವಿಸಬಾರದು.   

Written by - Ranjitha R K | Last Updated : Jan 25, 2024, 03:37 PM IST
  • ಋತುಮಾನಕ್ಕೆ ಅನುಗುಣವಾಗಿ ಹಣ್ಣು, ತರಕಾರಿಗಳನ್ನು ಪ್ರಕೃತಿ ನಮಗೆ ನೀಡುತ್ತಲೇ ಇರುತ್ತವೆ.
  • ಚಳಿಗಾಲದಲ್ಲಿ ಬರುವ ಹಣ್ಣು ತರಕಾರಿಗಳ ಪೈಕಿ ಮೂಲಂಗಿಯೂ ಒಂದು.
  • ಕೆಲವು ಸಮಸ್ಯೆಯಿಂದ ಬಳಲುತ್ತಿದ್ದರೆ ಮೂಲಂಗಿ ಸೇವಿಸಬಾರದು.
ಈ ಐದು ಸಮಸ್ಯೆ ನಿಮಗಿದ್ದರೆ ತಿನ್ನಲೇಬೇಡಿ ಮೂಲಂಗಿ ! ಆರೋಗ್ಯದ ಮೇಲಾಗುವುದು ಭಾರೀ ಪರಿಣಾಮ  title=

Side Effects of Eating Radish : ಋತುಮಾನಕ್ಕೆ ಅನುಗುಣವಾಗಿ ಹಣ್ಣು, ತರಕಾರಿಗಳನ್ನು ಪ್ರಕೃತಿ ನಮಗೆ ನೀಡುತ್ತಲೇ ಇರುತ್ತವೆ. ಬೇಸಿಗೆಯಲ್ಲಿ ಕೆಲವು ಹಣ್ಣು ತರಕಾರಿಗಳು ಮಾರುಕಟ್ಟೆಗೆ ಬಂದರೆ ಇನ್ನು ಕೆಲವು ಹಣ್ಣು ತರಕಾರಿಗಳು ಚಳಿಗಾಲದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಚಳಿಗಾಲದಲ್ಲಿ ಬರುವ ಹಣ್ಣು ತರಕಾರಿಗಳ ಪೈಕಿ  ಮೂಲಂಗಿಯೂ ಒಂದು. ಮೂಲಂಗಿಯನ್ನು ಕೆಲವರು ಇಷ್ಟ ಪಟ್ಟು ತಿನ್ನುತ್ತಾರೆ.  ಮೂಲಂಗಿ ಪೋಷಕಾಂಶಗಳ ಆಗರ. ಇದರಲ್ಲಿ ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳಂತಹ ಅನೇಕ ಪೋಷಕಾಂಶಗಳು ಅಡಗಿವೆ. ಈ ಕಾರಣದಿಂದಲೇ ಮೂಲಂಗಿ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಮೂಲಂಗಿ ಸೇವಿಸುತ್ತಾ ಬಂದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುವುದರೊಂದಿಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಆದರೆ, ಮೂಲಂಗಿಯನ್ನು ತಿನ್ನುವುದರಿಂದ ಕೆಲವು ಅಡ್ಡ ಪರಿಣಾಮಗಳು ಕೂಡಾ ಗೋಚರಿಸುತ್ತವೆ. ಹೀಗಾಗಿ ಕೆಲವು ಸಮಸ್ಯೆಯಿಂದ ಬಳಲುತ್ತಿದ್ದರೆ ಮೂಲಂಗಿ ಸೇವಿಸಬಾರದು. 

ಲೋ ಬಿಪಿ ರೋಗಿಗಳು : 
ಕಡಿಮೆ ರಕ್ತದೊತ್ತಡ ಇರುವವರು ಮೂಲಂಗಿಯನ್ನು ಸೇವಿಸಬಾರದು. ಮೂಲಂಗಿಯ ಅತಿಯಾದ ಸೇವನೆಯು ರಕ್ತದೊತ್ತಡವನ್ನು ಅಸಹಜವಾಗಿ ಕಡಿಮೆ ಮಟ್ಟಕ್ಕೆ ಇಳಿಸುತ್ತದೆ.  ಇದರಿಂದಾಗಿ ಹೈಪೊಟೆನ್ಷನ್ ಅಂದರೆ ಲೋ ಬಿಪಿ ಸಮಸ್ಯೆ ಎದುರಾಗಬಹುದು.  ಹಾಗಾಗಿ ರಕ್ತದೊತ್ತಡವನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅಂಥವರು ಮೂಲಂಗಿ ಸೇವಿಸಬಾರದು.

ಇದನ್ನೂ ಓದಿ : ಪೋಷಕರೇ..! ಮಕ್ಕಳ ಮೂಗಿನಲ್ಲಿ ರಕ್ತಸ್ರಾವಕ್ಕೆ ಕಾರಣವೇನು ಗೊತ್ತಾ?

ಗ್ಯಾಸ್ ಅಥವಾ ಹೊಟ್ಟೆ ಉಬ್ಬುವ ಸಮಸ್ಯೆ :
ಗ್ಯಾಸ್ ಅಥವಾ ಹೊಟ್ಟೆ ಉಬ್ಬರ ಸಮಸ್ಯೆಯಿಂದ ಬಳಲುತ್ತಿರುವವರು ಕೂಡಾ ಮೂಲಂಗಿಯನ್ನು ಸೇವಿಸಬಾರದು. ಮೂಲಂಗಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇರುತ್ತದೆ. ಇದರಿಂದಾಗಿ ಮೂಲಂಗಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.  ಹಾಗಾಗಿ ಮೂಲಂಗಿ ಸೇವಿಸುವುದರಿಂದ ಗ್ಯಾಸ್, ಅಸಿಡಿಟಿ, ಮುಂತಾದ ಸಮಸ್ಯೆಗಳು ಉಂಟಾಗಬಹುದು. ಅದರಲ್ಲಿಯೂ ರಾತ್ರಿ ವೇಳೆ ಮೂಲಂಗಿ ತಿನ್ನದೇ ಇದ್ದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. 

ಲೋ ಬ್ಲಡ್ ಶುಗರ್ : 
ಲೋ ಬ್ಲಡ್ ಶುಗರ್ ಸಮಸ್ಯೆ ಇದ್ದರೆ ಮೂಲಂಗಿಯನ್ನು ಸೇವಿಸಬಾರದು. ಇದನ್ನು ಅತಿಯಾಗಿ ಸೇವಿಸುವುದರಿಂದ ಹೈಪೊಗ್ಲಿಸಿಮಿಯಾ ಉಂಟಾಗುತ್ತದೆ. ಮಧುಮೇಹ ನಿಯಂತ್ರಣಕ್ಕೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಮೂಲಂಗಿಯನ್ನು ತಿನ್ನಬಾರದು. ಮೂಲಂಗಿ ರಕ್ತದಲ್ಲಿನ ಸಕ್ಕರೆಯನ್ನು ಮತ್ತಷ್ಟು ಕಡಿಮೆಯಾಗಬಹುದು. ಇದರಿಂದ  ಆರೋಗ್ಯ ಸಮಸ್ಯೆ ಮತಷ್ಟು ಬಿಗಡಾಯಿಸುವ ಸಾಧ್ಯತೆ ಇರುತ್ತದೆ. 

ಇದನ್ನೂ ಓದಿ : Controlling Blood Sugar: ಮಧುಮೇಹ ರೋಗಿಗಳು ಈ ವೆಜ್ ಮತ್ತು ನಾನ್ ವೆಜ್ ಆಹಾರವನ್ನು ಸೇವಿಸಿದರೆ ಏರುಪೇರಾಗುವುದಿಲ್ಲ ಬ್ಲಡ್ ಶುಗರ್

ಥೈರಾಯ್ಡ್ :
ಥೈರಾಯ್ಡ್ ಸಮಸ್ಯೆ ಇರುವವರು ಮೂಲಂಗಿಯನ್ನು ತಿನ್ನಬಾರದು. ಏಕೆಂದರೆ ಮೂಲಂಗಿಯಲ್ಲಿ ಥಿಯೋಸೈನೈಡ್ ಎಂಬ ಸಂಯುಕ್ತವಿದ್ದು, ಇದು ಥೈರಾಯ್ಡ್ ಗ್ರಂಥಿಗೆ ಹಾನಿಕಾರಕವಾಗಿದೆ. ಇದರ ಸೇವನೆಯಿಂದ ಥೈರಾಯ್ಡ್ ಹಾರ್ಮೋನ್ ಮಟ್ಟದಲ್ಲಿ ಏರುಪೇರು ಉಂಟಾಗಿ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಬಹುದು. ಥೈರಾಯ್ಡ್ ಸಮಸ್ಯೆಯಿದ್ದಲ್ಲಿ ಮೂಲಂಗಿ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. 

ಡಿಹೈಡ್ರೇಶನ್ ಸಮಸ್ಯೆಯಿಂದ ಬಳಲುವವರು : 
ಆಗಾಗ ಡಿಹೈಡ್ರೇಶನ್ ಸಮಸ್ಯೆಯಿಂದ ಬಳಲುತ್ತಿರುವವರು ಮೂಲಂಗಿಯನ್ನು ಸೇವಿಸಬಾರದು. ಮೂಲಂಗಿ ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಹೆಚ್ಚು ಮೂತ್ರವನ್ನು  ದೇಹದಿಂದ ಹಿರ ಹಾಕುತ್ತದೆ. ಹೀಗೆ ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತಿದ್ದರೆ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಆದ್ದರಿಂದ, ಮೂಲಂಗಿಯನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. 

 

(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News