How To Reduce Belly Fat: ಅನಾರೋಗ್ಯಕರ ಜೀವನಶೈಲಿ ಮತ್ತು ಎಣ್ಣೆಯುಕ್ತ ಆಹಾರದಿಂದ ತೂಕ ಹೆಚ್ಚಾಗುವುದು ಸಾಮಾನ್ಯವಾಗಿದೆ, ಇದರಿಂದ ಹೊಟ್ಟೆಯ ಕೊಬ್ಬು ಬಹಳಷ್ಟು ಹೆಚ್ಚಾಗುತ್ತದೆ. ಮಾತ್ರವಲ್ಲ ಹಲವು ಅನಾರೋಗ್ಯ ಸಮಸ್ಯೆಗಳು ಕೂಡ ಆರಂಭವಾಗುತ್ತವೆ. ಸಾಮಾನ್ಯವಾಗಿ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ತಿನ್ನುವಂತೆ ಸಲಹೆ ನೀಡಲಾಗುತ್ತದೆ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ಯಾವುದೇ ಪದಾರ್ಥವನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ಕೆಲವು ಹಣ್ಣುಗಳಲ್ಲಿ ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿವೆ:
ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಹಣ್ಣುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Blood Sugar Level) ಹೆಚ್ಚಿಸುತ್ತದೆ, ಆದ್ದರಿಂದ ಬೊಜ್ಜು (Obesity) ಮತ್ತು ಮಧುಮೇಹ (Diabetes) ರೋಗಿಗಳು ವಿಶೇಷವಾಗಿ ಜಾಗರೂಕರಾಗಿರಬೇಕು. ತೂಕ ಹೆಚ್ಚಿಲ್ಲದವರೂ ಕೂಡ ಹೆಚ್ಚಿನ ಸಕ್ಕರೆ ಇರುವ ಹಣ್ಣುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
ಇದನ್ನೂ ಓದಿ- Fat Burning Foods: ಆರೋಗ್ಯಕರವಾಗಿ ತೂಕ ಇಳಿಸಲು ಇಲ್ಲಿದೆ ತಜ್ಞರ ಸಲಹೆ
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?
ನೀವು ಹೊಟ್ಟೆಯ ಕೊಬ್ಬನ್ನು (Belly Fat) ಮತ್ತು ದೇಹದ ಕೊಬ್ಬನ್ನು ತೆಗೆದುಹಾಕಲು ಬಯಸಿದರೆ, ನಿಮ್ಮ ಆಹಾರದಿಂದ ಕಾರ್ಬೋಹೈಡ್ರೇಟ್ಗಳು ಮತ್ತು ಸಕ್ಕರೆಯನ್ನು ತೆಗೆದುಹಾಕುವ ಅವಶ್ಯಕತೆಯಿದೆ. ಕಡಿಮೆ ಕೊಬ್ಬಿನ ಆಹಾರದಿಂದ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಬಹುದು, ಹೆಚ್ಚುತ್ತಿರುವ ತೂಕವು ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ 2 ಹಣ್ಣುಗಳಿಂದ ದೂರವಿರಿ:
ಬೇಸಿಗೆ ಕಾಲ ಬಂತೆಂದರೆ ಹಲವರಿಗೆ ತುಂಬಾ ಖುಷಿಯಾಗುತ್ತದೆ. ಏಕೆಂದರೆ ಬೇಸಿಗೆಯಲ್ಲಿ ರುಚಿಕರ ಮಾವಿನ ಹಣ್ಣು (Mango) ಸಿಗುತ್ತದೆ. ಮಾವನ್ನು ವಿಶೇಷವಾಗಿ ಬೇಸಿಗೆಯಲ್ಲಿ ತಿನ್ನಲಾಗುತ್ತದೆ, ಇದನ್ನು ಹಣ್ಣುಗಳ ರಾಜ ಎಂದೂ ಕರೆಯುತ್ತಾರೆ, ಭಾರತದಲ್ಲಿ ಜನರು ಮಾವಿನ ಹಣ್ಣನ್ನು ಬಹಳ ಉತ್ಸಾಹದಿಂದ ತಿನ್ನುತ್ತಾರೆ, ಜೊತೆಗೆ ಮಾವಿನ ಶೇಕ್ ಕೂಡ ತುಂಬಾ ಇಷ್ಟವಾಗುತ್ತದೆ. ಮಾವಿನಹಣ್ಣಿನಲ್ಲಿ ಸಕ್ಕರೆ ಅಂಶವು ತುಂಬಾ ಹೆಚ್ಚಾಗಿರುವುದೇ ಇದಕ್ಕೆ ಕಾರಣವಾಗಿದೆ. ಆದರೆ, ಮಾವಿನ ಹಣ್ಣಿನ ಅತಿಯಾದ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ- Weight Loss Tips: ತೂಕ ಇಳಿಸಿಕೊಳ್ಳಲು ನಿಮ್ಮ ಆಹಾರದಲ್ಲಿ ಈ ವಿಟಮಿನ್ಗಳನ್ನು ತಪ್ಪದೇ ಸೇರಿಸಿ
ಅದೇ ಸಮಯದಲ್ಲಿ, ಅನಾನಸ್ (Pineapple) ತಿನ್ನಲು ತುಂಬಾ ಸಿಹಿಯಾಗಿರುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಮಧುಮೇಹ ಮತ್ತು ಬೊಜ್ಜು ಇರುವವರು ಮಾವು ಮತ್ತು ಅನಾನಸ್ ತಿನ್ನದಂತೆ ಸಲಹೆ ನೀಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.