ವಾಯುಮಾಲಿನ್ಯದಿಂದ ಆರೋಗ್ಯ ಹದಗೆಡುತ್ತಿದೆಯೇ? ಇಲ್ಲಿವೆ ಕೆಲವು ಟಿಪ್ಸ್...

ವಾಯು ಮಾಲಿನ್ಯದಿಂದಾಗಿ ಅಸ್ತಮಾ, ಹೃದಯ ಸಂಬಂಧಿ ಸಮಸ್ಯೆಗಳು, ರಕ್ತ ಮತ್ತು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನೂ ಕುಗ್ಗಿಸುತ್ತದೆ.   

Last Updated : Nov 14, 2018, 06:57 PM IST
ವಾಯುಮಾಲಿನ್ಯದಿಂದ ಆರೋಗ್ಯ ಹದಗೆಡುತ್ತಿದೆಯೇ? ಇಲ್ಲಿವೆ ಕೆಲವು ಟಿಪ್ಸ್... title=

ನವದೆಹಲಿ: ಉತ್ತಮ ಜೀವನ ನಡೆಸಲು, ಉತ್ತಮ ಆರೋಗ್ಯ ಹೊಂದಲು ಎಲ್ಲಕ್ಕಿಂತ ಹೆಚ್ಚು ಮುಖ್ಯವಾದುದು ಉಸಿರಾಡಲು ಶುದ್ಧ ಗಾಳಿ. ಆದರೆ ಇತ್ತೀಚಿನ ದಿನಗಳಲ್ಲಿ ಅತಿಯಾದ ವಾಯು ಮಾಲಿನ್ಯದಿಂದಾಗಿ ಉಸಿರಾಡಲು ಶುದ್ಧವಾದ ಗಾಳಿ ದೊರೆಯುವುದು ಕಷ್ಟಸಾಧ್ಯವಾಗಿದೆ. 

ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ವಾಯುಮಾಲಿನ್ಯ ಮಕ್ಕಳ ಆರೋಗ್ಯದ ಮೇಲೆ ತೀವ್ರತರ ಪರಿಣಾಮ ಬೀರುತ್ತಿದ್ದು, ಭಾರತದಲ್ಲಿ ಸಾವನ್ನಪ್ಪುತ್ತಿರುವ ಪ್ರತಿ 10 ಮಕ್ಕಳಲ್ಲಿ ಒಂದು ಮಗು ಕಲುಷಿತ ಗಾಳಿ ಸೇವನೆಯಿಂದ ಮೃತಪಡುತ್ತಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಸ್ವಚ್ಛ ವಾತಾವರಣ ಎಂಬ ಶೀರ್ಷಿಕೆಯಲ್ಲಿ 15 ವರ್ಷಕ್ಕಿಂತ ಕೆಳಗಿನ ಸುಮಾರು 6 ಲಕ್ಷ ಮಕ್ಕಳು 2016ರಲ್ಲಿ ಮನೆಯ ಒಳಗಿನ ಮತ್ತು ಮನೆಯ ಹೊರ ವಾತಾವರಣದ ವಾಯುಮಾಲಿನ್ಯ ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ವಾಯುಮಾಲಿನ್ಯದಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನನಿತ್ಯ ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. 

ವಾಯು ಮಾಲಿನ್ಯದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು
ಭಾರತದಲ್ಲೇ ಅತಿಹೆಚ್ಚು ವಾಯು ಮಾಲಿನ್ಯದಿಂದ ಕೂಡಿದ ಪ್ರದೇಶ ರಾಷ್ಟ್ರ ರಾಜಧಾನಿ ದೆಹಲಿ. ಇದಲ್ಲದೆ ಮುಂಬೈ, ಪುಣೆ, ಬೆಂಗಳೂರು ಮಹಾನಗರಗಳೂ ಸಹ ವಾಯುಮಾಲಿನ್ಯದಿಂದ ಹೊರತಾಗಿಲ್ಲ. ವಾಯು ಮಾಲಿನ್ಯದಿಂದಾಗಿ ಅಸ್ತಮಾ, ಹೃದಯ ಸಂಬಂಧಿ ಸಮಸ್ಯೆಗಳು, ರಕ್ತ ಮತ್ತು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನೂ ಕುಗ್ಗಿಸುತ್ತದೆ.   

ಉತ್ತಮ ಆಹಾರ ಆಯ್ಕೆಯಿಂದ ಆರೋಗ್ಯ ಸಮಸ್ಯೆ ದೂರ
ವಾಯುಮಾಲಿನ್ಯದಿಂದಾಗಿ ಮಾನವನ ಆರೋಗ್ಯ ಹದಗೆದುತ್ತಿದ್ದು ಸರಿಯಾದ ಸಮಯಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಅದು ಜೀವಕ್ಕೆ ಮಾರಕವಾಗಲಿದೆ. ಹಾಗಾಗಿ ನಮ್ಮ ಆಹಾರ ಸೇವನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ. 

ಈ ಆಹಾರಗಳ ಸೇವನೆ ಅಗತ್ಯ
ವಾಯುಮಾಲಿನ್ಯದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಲು ವಿಟಮಿನ್ ಸಿ, ಇ, ಮತ್ತು ಒಮೆಗಾ 3, ಬೀಟಾ ಕ್ಯಾರೋಟಿನ್ ಅಂಶಗಳಿರುವ ಆಹಾರ ಸೇವಿಸುವುದು ಅಗತ್ಯ. ಇವು ನೈಸರ್ಗಿಕ ಆಂಟಿ ಆಕ್ಸಿಡೆಂಟ್ ಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಮಾಲಿನ್ಯವನ್ನು ಎದುರಿಸುವಲ್ಲಿ ಸಹಕರಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ವಿಟಮಿನ್ ಸಿ
ವಿಟಮಿನ್ ಸಿ ಸೇವನೆಯಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆಯಲ್ಲದೆ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ಪ್ರತಿನಿತ್ಯ 40 ಮಿಲಿಗ್ರಾಂ ವಿಟಮಿನ್ ಸಿ ಸೇವನೆಯಿಂದ ಯಾವುದೇ ರೀತಿಯ ರೋಗಗಳಿಂದ ಶರೀರವನ್ನು ರಕ್ಷಿಸಿಕೊಳ್ಳಬಹುದು.  ವಿಟಮಿನ್ ಸಿ ಹೆಚ್ಚಾಗಿರುವ ಕಿತ್ತಳೆ, ಸೌತೆಕಾಯಿ, ನಿಂಬೆ, ನೆಲ್ಲಿಕಾಯಿ ಮತ್ತು ಸೀಬೆಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದು ಆಗತ್ಯ. ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ನಿಂಬೆ ರಸ ಸೇವಿಸಿ ಕುಡಿಯುವುದು ಆರೋಗ್ಯಕ್ಕೆ ಉತ್ತಮ. 

ವಿಟಮಿನ್ ಇ
ದೇಹದ ಹಲವು ಸಮಸ್ಯೆಗಳಿಗೆ ವಿಟಮಿನ್ ಇ ರಾಮಬಾಣವಿದ್ದಂತೆ. ಪ್ರತಿನಿತ್ಯ ವಿಟಮಿನ್ ಇ ಸಮೃದ್ಧವಾಗಿರುವ ಆಹಾರ ಸೇವನೆಯಿಂದ ಹೃದಯ ಮತ್ತು ಮನಸ್ಸು ಉಲ್ಲಾಸಭಾರಿತವಾಗಿರಲು ಸಹಕಾರಿಯಾಗುತ್ತದೆ. ಪ್ರತಿನಿತ್ಯ ಸೂರ್ಯಕಾಂತಿ ಬಿಜ, ಕಡಲೆಕಾಯಿ ಬೀಜ ಸೇವಿಸುವುದು ಅಗತ್ಯ. ಮಿನಿನಲ್ಲಿ ವಿಟಮಿನ್ ಇ ಅಂಶ ಹೆಚ್ಚಾಗಿರುವುದರಿಂದ ಅದೂ ಸಹ ಆರೋಗ್ಯ ವೃದ್ಧಿಗೆ ಸಹಕಾರಿ.

ಸಸ್ಯಹಾರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿ
ಸಸ್ಯಾಹಾರದಲ್ಲಿ ಪೊಟ್ಯಾಷಿಯಂ, ಕಾರ್ಬೋಹೈಡ್ರೇಟ್, ಅಪರ್ಯಾಪ್ತ ಕೊಬ್ಬು, ಫೈಬರ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶಗಳಿರುವುದರಿಂದ ರಕ್ತದೊತ್ತಡ ಸಮತೋಲನವಾಗಿರಲು ಸಹಕಾರಿ. ಅಷ್ಟೇ ಅಲ್ಲದೆ, ಸ್ಥೂಲಕಾಯವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿ. ಸಸ್ಯಾಹಾರಿ ಆಹಾರದಲ್ಲಿ ಕೊಲೆಸ್ಟರಾಲ್ ಮತ್ತು ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ.

Trending News