ಬಾಯಿ ತೊಳೆದ ನಂತರ ಟವೆಲ್ ನಿಂದ ಒರೆಸಿಕೊಳ್ಳುತ್ತೀರಾ..? ಹುಷಾರ್‌, ಈ ಸಮಸ್ಯೆ ಕಾಡಬಹುದು

Face Wash Tips : ವಾಶ್‌ಬೇಸಿನ್‌ ಹತ್ತಿರ ಕೈ ಮತ್ತು ಕಾಲು ತೊಳೆದ ನಂತರ ಒರೆಸಿಕೊಳ್ಳಲು ಕರವಸ್ತ್ರವ ಇಲ್ಲವೆ ಟವೆಲ್ ಇಡಲಾಗುತ್ತದೆ. ಒಂದು ವೇಳೆ ನೀವು ಅದರಿಂದಲೇ ನಿಮ್ಮ ಮುಖವನ್ನು ಸ್ವಚ್ಛಗೊಳಿಸುತ್ತಿದ್ದರೇ ನೀವು ಈ ವಿಚಾರವನ್ನು ತಿಳಿದುಕೊಳ್ಳಲೇಬೇಕು.. 

Written by - Krishna N K | Last Updated : Jan 17, 2024, 04:53 PM IST
  • ಮುಖವನ್ನು ಶುಚಿಗೊಳಿಸಿದಾಗ ಒರೆಸಿಕೊಳ್ಳಲು ಟವೆಲ್ ಬಳಸುತ್ತಾರೆ.
  • ಈ ಅಭ್ಯಾಸ ನಿಮ್ಮ ಚರ್ಮಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ.
  • ಮುಖ ಚರ್ಮದ ತ್ವಚೆಯು ಸಡಿಲವಾಗಲು ಶುರುವಾಗುತ್ತದೆ.
ಬಾಯಿ ತೊಳೆದ ನಂತರ ಟವೆಲ್ ನಿಂದ ಒರೆಸಿಕೊಳ್ಳುತ್ತೀರಾ..? ಹುಷಾರ್‌, ಈ ಸಮಸ್ಯೆ ಕಾಡಬಹುದು title=

Skin Care : ನಮ್ಮಲ್ಲಿ ಹೆಚ್ಚಿನವರು ಮುಖವನ್ನು ಶುಚಿಗೊಳಿಸಿದಾಗಲೆಲ್ಲಾ ನೀರನ್ನು ಒರೆಸಿಕೊಳ್ಳಲು ಟವೆಲ್ ಅಥವಾ ನ್ಯಾಪ್ಕಿನ್ ಅನ್ನು ಬಳಸುತ್ತಾರೆ. ಈ ಅಭ್ಯಾಸ ನಿಮ್ಮ ಚರ್ಮಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು.. ಟವೆಲ್‌ನಿಂದ ಮುಖವನ್ನು ಒರೆಸಿಕೊಂಡಾಗ ಅದು ಚರ್ಮದ ಸೋಂಕಿಗೆ ಕಾರಣವಾಗಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ತಿಳಿಯಿರಿ.

ಮುಖದ ತ್ವಚೆಯ ಮೇಲೆ ಸುಕ್ಕುಗಳು ಬೀಳುತ್ತವೆ : ಮುಖವನ್ನು ತೊಳೆದ ನಂತರ ಅತಿಯಾಗಿ ಟವೆಲ್ ನಿಂದ ಮುಖವನ್ನು ಉಜ್ಜಿದಾಗ ಮುಖ ಚರ್ಮದ ತ್ವಚೆಯು ಸಡಿಲವಾಗಲು ಶುರುವಾಗುತ್ತದೆ ಮತ್ತು ವಯಸ್ಸಿಗೂ ಮುನ್ನವೇ ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. 

ಇದನ್ನೂ ಓದಿ:ಈ ರೋಗವನ್ನು ದೂರ ಇಡಬೇಕಾದರೆ ನಿತ್ಯ ಒಂದು ಬಾಳೆಹಣ್ಣು ಸೇವಿಸಬೇಕು !

ಮೊಡವೆ ಉಂಟಾಗುತ್ತವೆ : ಸಾಮಾನ್ಯವಾಗಿ ಬಳಸುವ ಕರವಸ್ತ್ರ ಅಥವಾ ಟವೆಲ್ ಅನ್ನು ಒಂದು ದಿನ ಅಥವಾ ಎರಡು ದಿನಗಳವರೆಗೆ ತೊಳೆಯುವುದಿಲ್ಲ. ಈ ಕಾರಣದಿಂದಾಗಿ, ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಅದರಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತವೆ. ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ನೀವು ಈ ನ್ಯಾಪ್ಕಿನ್ಗಳನ್ನು ಬಳಸಿದರೆ, ಬ್ಯಾಕ್ಟೀರಿಯಾಗಳು ನಿಮ್ಮ ಚರ್ಮವನ್ನು ಪ್ರವೇಶಿಸಿ ಮೊಡವೆಗಳಂತಹ ಸಮಸ್ಯೆಗಳನ್ನು ಉಂಟುಮಾಡುತ್ತವೆ.

ಕೈಯಿಂದ ಮುಖವನ್ನು ಸ್ವಚ್ಛಗೊಳಿಸಿ : ಪ್ರತಿ ಬಾರಿ ನೀವು ಮುಖವನ್ನು ಸ್ವಚ್ಛಗೊಳಿಸಿದ ನಂತರ ಹೊಸದಾದ ಕರವಸ್ತ್ರ ಅಥವಾ ಮೃದುವಾದ ಕರವಸ್ತ್ರವನ್ನು ಬಳಸಿ. ಅದು ಕೂಡ ಸ್ವಚ್ಛವಾಗಿರಬೇಕು. ಇದಲ್ಲದೆ, ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಲು ನೀವು ಬಯಸಿದರೆ, ನಿಮ್ಮ ಮುಖವನ್ನು ನೀರಿನಿಂದ ತೊಳೆದು, ನಂತರ ಅದನ್ನು ನಿಮ್ಮ ಕೈಗಳಿಂದ ಒರೆಸಿಕೊಳ್ಳಿ.

ಇದನ್ನೂ ಓದಿ: ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಡಗಿದೆ ಆರೋಗ್ಯದ ನಿಧಿ

ನೈಸರ್ಗಿಕ ತೇವಾಂಶಕ್ಕೆ ಹಾನಿ : ನಮ್ಮ ಚರ್ಮವು ನೈಸರ್ಗಿಕ ತೇವಾಂಶವನ್ನು ಹೊಂದಿರುತ್ತದೆ. ಕ್ಲೆನ್ಸಿಂಗ್ ಆದ ನಂತರ ನಿಮ್ಮ ಮುಖವನ್ನು ಸ್ಕ್ರಬ್ ಮಾಡಿದರೆ ತ್ವಚೆಯೊಳಗಿನ ನೈಸರ್ಗಿಕ ತೇವಾಂಶ ಕಡಿಮೆಯಾಗಿ ಮುಖ ಕಳೆಗುಂದುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News