ಪಿರಿಯಡ್ಸ್ ಸಮಯದಲ್ಲಿ ಎಷ್ಟು ಗಂಟೆಗೊಮ್ಮೆ ಪ್ಯಾಡ್‌ಗಳನ್ನು ಬದಲಿಸಬೇಕು? ಮಹಿಳೆಯರಿಗಾಗಿ ಇಲ್ಲಿದೆ ಬಹುಮುಖ್ಯ ಮಾಹಿತಿ

Women Health: ಹೆಣ್ಣು ಮಕ್ಕಳಿಗೆ ಋತುಚಕ್ರ/ಪಿರಿಯಡ್ಸ್ ಅತಿದೊಡ್ಡ ಸಮಸ್ಯೆ ಎಂತಲೇ ಹೇಳಬಹುದು. ಈ ಸಮಯದಲ್ಲಿ ನಿರ್ಮಾಲ್ಯದ ಬಗ್ಗೆಯೂ ವಿಶೇಷ ಕಾಳಜಿ ಅಗತ್ಯವಿರುತ್ತದೆ. ಪಿರಿಯಡ್ಸ್ ಸಮಯದಲ್ಲಿ ಎಷ್ಟು ಗಂಟೆಗೊಮ್ಮೆ ಪ್ಯಾಡ್ ಬದಲಿಸಬೇಕು ಗೊತ್ತೇ? 

Written by - Yashaswini V | Last Updated : Jul 30, 2024, 01:08 PM IST
  • ಪೀರಿಯಡ್ಸ್ ಸಮಯದಲ್ಲಿ ಆಗಾಗ್ಗೆ ಪ್ಯಾಡ್‌ಗಳನ್ನು ಬದಲಾಯಿಸುವುದು ಕೂಡ ಬಹಳ ಮುಖ್ಯ.
  • ಇಲ್ಲದಿದ್ದರೆ, ಈ ಸೂಕ್ಷ್ಮಾಣುಗಳು ನಮ್ಮ ದೇಹವನ್ನು ಪ್ರವೇಶಿಸಿ ಅನಾರೋಗ್ಯಕ್ಕೆ ಕಾರಣವಾಗಬಹುದು.
  • ಹಾಗಿದ್ದರೆ ಮುಟ್ಟಿನ ಸಂದರ್ಭದಲ್ಲಿ ಎಷ್ಟು ಗಂಟೆಗೊಮ್ಮೆ ಪ್ಯಾಡ್ ಬದಲಾಯಿಸಬೇಕು?
ಪಿರಿಯಡ್ಸ್ ಸಮಯದಲ್ಲಿ ಎಷ್ಟು ಗಂಟೆಗೊಮ್ಮೆ ಪ್ಯಾಡ್‌ಗಳನ್ನು ಬದಲಿಸಬೇಕು?  ಮಹಿಳೆಯರಿಗಾಗಿ ಇಲ್ಲಿದೆ ಬಹುಮುಖ್ಯ ಮಾಹಿತಿ  title=

Periods: ಪೀರಿಯಡ್ಸ್/ಮುಟ್ಟು ಅಥವಾ ಋತುಚಕ್ರ ಪ್ರತಿ ಹೆಣ್ಣಿನಲ್ಲೂ ಸಂಭವಿಸುವ ನೈಸರ್ಗಿಕ ಕ್ರಿಯೆ. ಋತುಚ್ಚಕ್ರವು 3-5 ದಿನಗಳ ಸಹಜ ಕ್ರಿಯೆಯಾಗಿದೆ. ಈ ಸಮಯದಲ್ಲಿ ಗರ್ಭಾಶಯದಿಂದ ಆಗುವ ರಕ್ತಸ್ರಾವವನ್ನು ಹೀರಿಕೊಳ್ಳಲು ಹೆಣ್ಣುಮಕ್ಕಳು ಹಿಂದೆಲ್ಲಾ ಕಾಟನ್ ಬಟ್ಟೆಗಳನ್ನು ಬಳಸುತ್ತಿದ್ದರು. ಈ ಬದಲಾದ ಜೀವನಶೈಲಿಯಲ್ಲಿ ನೈರ್ಮಲ್ಯ ನಿರ್ವಹಣೆಯ ದೃಷ್ಟಿಯಿಂದ ಪ್ಯಾಡ್ ಅಥವಾ ನ್ಯಾಪ್ಕಿನ್ಗಳನ್ನು ಬಳಸುತ್ತಾರೆ. ಆದರೆ, ಪೀರಿಯಡ್ಸ್ ಸಮಯದಲ್ಲಿ ಆಗಾಗ್ಗೆ ಪ್ಯಾಡ್‌ಗಳನ್ನು ಬದಲಾಯಿಸುವುದು ಕೂಡ ಬಹಳ ಮುಖ್ಯ. ಇಲ್ಲದಿದ್ದರೆ,  ಈ ಸೂಕ್ಷ್ಮಾಣುಗಳು ನಮ್ಮ ದೇಹವನ್ನು ಪ್ರವೇಶಿಸಿ ಅನಾರೋಗ್ಯಕ್ಕೆ ಕಾರಣವಾಗಬಹುದು.  ಹಾಗಿದ್ದರೆ ಮುಟ್ಟಿನ ಸಂದರ್ಭದಲ್ಲಿ ಎಷ್ಟು ಗಂಟೆಗೊಮ್ಮೆ ಪ್ಯಾಡ್ ಬದಲಾಯಿಸಬೇಕು? ಇಲ್ಲದಿದ್ದರೆ, ಏನಾಗುತ್ತದೆ ಎಂಬುದನ್ನೂ ತಿಳಿಯೋಣ... 

ಮುಟ್ಟಿನ ವೇಳೆ ದಿನಕ್ಕೆ ಎಷ್ಟು ಬಾರಿ ಪ್ಯಾಡ್ ಬದಲಾಯಿಸಬೇಕು?
ಆರೋಗ್ಯ ತಜ್ಞರ ಪ್ರಕಾರ, ಋತುಚಕ್ರದ (Menstrual Cycle)  ಸಮಯದಲ್ಲಿ ಪ್ರತಿ ಮೂರ್ನಾಲ್ಕು ಗಂಟೆಗಳಿಗೊಮ್ಮೆ ಪ್ಯಾಡ್‌ಗಳನ್ನು ಬದಲಾಯಿಸಬೇಕು. 
ಕೆಲವರಲ್ಲಿ ಮೊದಲ ಒಂದೆರಡು ದಿನ ರಕ್ತದ ಹರಿವು ಹೆಚ್ಚಾಗಿರುತ್ತದೆ. ಅಂತಹವರು ಇನ್ನೂ ಹೆಚ್ಚಿನ ಪ್ಯಾಡ್‌ಗಳನ್ನು ಬಳಸಬೇಕಾಗಬಹುದು.  

ಪೀರಿಯಡ್ಸ್ ವೇಳೆ ನಿಯಮಿತವಾಗಿ ಪ್ಯಾಡ್ ಬದಲಾಯಿಸದಿದ್ದರೆ ಏನಾಗುತ್ತದೆ? 
* ಪೀರಿಯಡ್ಸ್ (Periods) ಸಂದರ್ಭದಲ್ಲಿ ನಿಯಮಿತವಾಗಿ ಪ್ಯಾಡ್ ಬದಲಾಯಿಸದಿದ್ದರೆ ಮೊದಲನೆಯದಾಗಿ, ತುಂಬಾ ಕೆಟ್ಟ ವಾಸನೆ ಬರಬಹುದು. 
* ಸೂಕ್ಷ್ಮಾಣುಗಳು ದೇಹವನ್ನು ಪ್ರವೇಶಿಸಿ ಸೋಂಕಿನ ಅಪಾಯಗಳು ಹೆಚ್ಚಾಗಬಹುದು. 
* ಚರ್ಮದ ಮೇಲೆ ಅಹಿತಕರವಾದಂತಹ ದದ್ದುಗಳ ಸಮಸ್ಯೆ ಕಾಣಿಸಿಕೊಳ್ಳಬಹುದು.  

ಇದನ್ನೂ ಓದಿ- ಮಾಂಸಾಹಾರಿ ಆಹಾರಗಳನ್ನು ಸಂಪೂರ್ಣವಾಗಿ ನಿಷೇಧಿಸಿರುವ ವಿಶ್ವದ ಏಕೈಕ ನಗರದ ಬಗ್ಗೆ ನಿಮಗೆಷ್ಟು ಗೊತ್ತು?

ಮುಟ್ಟಿನ ಸಮಯದಲ್ಲಿ ಯಾವೆಲ್ಲಾ ವಿಚಾರಗಳ ಬಗ್ಗೆ ಕಾಳಜಿ ಅಗತ್ಯ? 
>> ಪ್ಯಾಡ್ (Pad) ಧರಿಸುವಾಗ ಕೈಗಳು ಸ್ವಚ್ಛವಾಗಿರಬೇಕು. 
>> ಪ್ರತಿ ಬಾರಿ ಶೌಚಾಲಯಕ್ಕೆ ಹೋದಾಗ ಗುಪ್ತಾಂಗವನ್ನು ಸ್ವಚ್ಛಗೊಳಿಸಬೇಕು. ಸಾಧ್ಯವಾದರೆ ಬಿಸಿ ನೀರನ್ನು ಬಳಸಿ. 
>> ಪ್ರತಿನಿತ್ಯ ಸ್ನಾನ ಮಾಡಿ. 
>> ಸಡಿಲವಾದ ಉಡುಪುಗಳನ್ನು ಧರಿಸಿ. 
>> ಮುಟ್ಟಿನ ಸಮಯದಲ್ಲಿ ಮರುಬಳಕೆ ಮಾಡಬಹುದಾದ ಬಟ್ಟೆ/ಪ್ಯಾಡ್‌ಗಳನ್ನು ಬಿಸಿನೀರಿನಲ್ಲಿ ಒಗೆದು ಬಿಸಿಲಿನಲ್ಲಿ ಒಣಗಿಸಿ. 
>> ಸ್ಯಾನಿಟರಿ ಪ್ಯಾಡ್‌ಗಳನ್ನು ಒಂದು ಕಾಗದಲ್ಲಿ ಸುತ್ತಿ ಡಸ್ಟ್‌ಬಿನ್‌ಗೆ ಹಾಕಿ. 

ಇದನ್ನೂ ಓದಿಸಂಧಿವಾತವನ್ನು ನಿಯಂತ್ರಿಸಲು ಈ ಮಾರ್ಗವನ್ನು ಅನುಸರಿಸಿ...!

ಪ್ರತಿ ಹೆಣ್ಣಿನಲ್ಲಿ ಪೀರಿಯಡ್ಸ್ ಒಂದು ಸಹಜ ಕ್ರಿಯೆಯಾಗಿದೆ. ಈ ಬಗ್ಗೆ ಮುಕ್ತವಾಗಿ ಮಾತನಾಡಿ. ಈ ಕುರಿತ ನಿಮ್ಮ ಸಮಸ್ಯೆಗಳನ್ನು ಮುಜುಗರವಿಲ್ಲದೆ ನಿಮ್ಮ ತಾಯಿ, ಶಿಕ್ಷಕರ ಬಳಿ ಹಂಚಿಕೊಳ್ಳಿ. 
ಪೀರಿಯಡ್ಸ್ ಸಂದರ್ಭದಲ್ಲಿ ಸ್ವಚ್ಛತೆ ಮತ್ತು ಶುಚಿತ್ವದ ಅಭ್ಯಾಸಗಳು ಮಹಿಳೆಯರ ಆರೋಗ್ಯಕ್ಕೆ ಕೊಡುಗೆ ನೀಡುವುದರ ಜೊತೆಗೆ ಅವರ ಆತ್ಮವಿಶ್ವಾಸದ ಮಟ್ಟವನ್ನು ಕೂಡ ಹೆಚ್ಚಿಸುತ್ತದೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News