ಮುಂಜಾನೆ ತಲೆನೋವಿಗೆ ಮನೆಮದ್ದು

Morning Headache: ನಮ್ಮಲ್ಲಿ ಹಲವರಿಗೆ ಆಗಾಗ್ಗೆ ತಲೆನೋವು ಬರುತ್ತಲೇ ಇರುತ್ತದೆ. ಇನ್ನೂ ಕೆಲವರಿಗೆ ಬೆಳಿಗ್ಗೆ ಎದ್ದೊಡನೆ ತಲೆನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು. ನೀವೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ಸರಿಯಾದ ಕಾರಣ ತಿಳಿದು, ಆದಷ್ಟು ಬೇಗ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ. ಇದಲ್ಲದೆ, ಮುಂಜಾನೆ ತಲೆನೋವಿಗೆ ಕೆಲವು ಮನೆಮದ್ದುಗಳನ್ನು ಸಹ ನೀವು ಟ್ರೈ ಮಾಡಬಹುದು. 

Written by - Yashaswini V | Last Updated : Oct 19, 2022, 08:42 AM IST
  • ದೇಹದಲ್ಲಿ ನೀರಿನ ಕೊರತೆಯಿಂದಾಗಿ ತಲೆನೋವು ಸಂಭವಿಸಬಹುದು.
  • ಯಾವುದೇ ಒಬ್ಬ ವ್ಯಕ್ತಿಯು ಹೆಚ್ಚು ಆಲ್ಕೋಹಾಲ್ ಸೇವಿಸಿದರೆ ಅವರಿಗೂ ಸಹ ಮುಂಜಾನೆ ತಲೆ ಹಿಡಿದುಕೊಂಡಂತ ಅನುಭವವಾಗಬಹುದು. ಜೊತೆಗೆ ತಲೆನೋವಿನ ಸಮಸ್ಯೆಯನ್ನು ಹೊಂದಿರಬಹುದು.
  • ಕೆಲವು ಕಾಯಿಲೆಗಳಿಂದಲೂ ಸಹ ಕೆಲವರಲ್ಲಿ ನಿರಂತರ ತಲೆನೋವು ಕಾಣಿಸಿಕೊಳ್ಳುತ್ತದೆ.
ಮುಂಜಾನೆ ತಲೆನೋವಿಗೆ ಮನೆಮದ್ದು  title=
Morning headache

Morning Headache: ಉತ್ತಮ ಆರೋಗ್ಯಕ್ಕಾಗಿ ಆಹಾರದ ಜೊತೆಗೆ ನಿತ್ಯ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಸಹ ಬಹಳ ಮುಖ್ಯ. ಆದರೆ, ಕೆಲವರು 7 ರಿಂದ 8 ಗಂಟೆಗಳ ನಿದ್ದೆ ಮಾಡಿದ ನಂತರವೂ ಆಯಾಸ ಅನುಭವಿಸುತ್ತಾರೆ. ಈ ಜನರು ಸಾಕಷ್ಟು ನಿದ್ದೆ ಮಾಡಿದ ನಂತರವೂ ದಿನವಿಡೀ ತಲೆನೋವಿನಿಂದ ಬಳಲುತ್ತಿರುತ್ತಾರೆ. ಇದಕ್ಕೆ ಹಲವು ಕಾರಣಗಳಿರಬಹುದು. ಆಗಾಗ್ಗೆ, ಕಾಣಿಸಿಕೊಳ್ಳುವ ತಲೆನೋವಿಗೆ ಏನು ಕಾರಣ? ಇದರಿಂದ ಮುಕ್ತಿ ಪಡೆಯಲು ಬಳಸಬಹುದಾದ ಸುಲಭ ಮನೆಮದ್ದುಗಳ ಬಗ್ಗೆ ತಿಳಿಯೋಣ...

ಮುಂಜಾನೆ ತಲೆನೋವಿಗೆ ಕಾರಣಗಳು:
ಬೆಳಿಗ್ಗೆ ತಲೆನೋವು ಬರಲು ಹಲವು ಕಾರಣಗಳಿರಬಹುದು ಎಂದು ಆರೋಗ್ಯ ತಜ್ಞರು ನಂಬುತ್ತಾರೆ. 
* ದೇಹದಲ್ಲಿ ನೀರಿನ ಕೊರತೆಯಿಂದಾಗಿ ತಲೆನೋವು ಸಂಭವಿಸಬಹುದು. 
* ಯಾವುದೇ ಒಬ್ಬ ವ್ಯಕ್ತಿಯು ಹೆಚ್ಚು ಆಲ್ಕೋಹಾಲ್ ಸೇವಿಸಿದರೆ ಅವರಿಗೂ ಸಹ ಮುಂಜಾನೆ ತಲೆ ಹಿಡಿದುಕೊಂಡಂತ ಅನುಭವವಾಗಬಹುದು. ಜೊತೆಗೆ ತಲೆನೋವಿನ ಸಮಸ್ಯೆಯನ್ನು ಹೊಂದಿರಬಹುದು. 
* ಕೆಲವು ಕಾಯಿಲೆಗಳಿಂದಲೂ ಸಹ ಕೆಲವರಲ್ಲಿ ನಿರಂತರ ತಲೆನೋವು ಕಾಣಿಸಿಕೊಳ್ಳುತ್ತದೆ.  ಇದು ಸಾಮಾನ್ಯ ಸಂಗತಿ ಎನ್ನುತ್ತಾರೆ ತಜ್ಞರು. 
* ಕೆಲವರಲ್ಲಿ ಅತಿಯಾದ ಒತ್ತಡ ಮತ್ತು ಆತಂಕದಿಂದಲೂ ಈ ಸಮಸ್ಯೆ ಉಂಟಾಗುತ್ತದೆ. 
* ಬದಲಾಗುತ್ತಿರುವ ಪಾಳಿಯಲ್ಲಿ ಕೆಲಸ ಮಾಡುವುದರಿಂದಲೂ ಜನರಿಗೆ ತಲೆನೋವು ಕಾಣಿಸಿಕೊಳ್ಳಬಹುದು. ಇದು ಸಿರ್ಕಾಡಿಯನ್ ರಿದಮ್ ಅಸ್ವಸ್ಥತೆಯ ಕಾರಣದಿಂದಾಗಿರಬಹುದು. ಅನೇಕ ಜನರು ತಡರಾತ್ರಿಯವರೆಗೂ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಾರೆ. ಅಂತಹವಲ್ಲೂ ಸಹ ಬೆಳಿಗ್ಗೆ ಎದ್ದಾಗ ತಲೆನೋವು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ- Green Tea In Diabetes: ಮಧುಮೇಹಿಗಳು ಗ್ರೀನ್ ಟೀ ಕುಡಿಯಬಹುದೇ? ಸಂಶೋಧನೆ ಏನು ಹೇಳುತ್ತೆ?

ಆರೋಗ್ಯ ತಜ್ಞರು ಏನು ಹೇಳುತ್ತಾರೆ?
ನೀವು ಸಾಕಷ್ಟು ನೀರು ಕುಡಿದರೆ ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ. ಇದಲ್ಲದೆ, ಕೆಲವು ಸರಳ ಮನೆಮದ್ದುಗಳನ್ನು ಬಳಸುವುದರಿಂದಲೂ ಸಹ ತಲೆನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ. ಅಂತಹ ಸಲಹೆಗಳ ಬಗ್ಗೆ ತಿಳಿಯೋಣ...

ಇದನ್ನೂ ಓದಿ- Dates Benefits : ದೀರ್ಘಾಯುಷ್ಯಕ್ಕಾಗಿ ಸೇವಿಸಿ ಖರ್ಜೂರ, ಮಾರಣಾಂತಿಕ ಕಾಯಿಲೆಗಳ ಅಪಾಯ ಕಡಿಮೆ!

>> ನೀವು ಬೆಳಿಗ್ಗೆ ಎದ್ದ ತಕ್ಷಣ ತಲೆನೋವಿನ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನಂತರ ಹಣೆಯ ಮೇಲೆ ತಣ್ಣನೆಯ ಐಸ್ ಪ್ಯಾಕ್ ಅನ್ನು ಇಟ್ಟುಕೊಳ್ಳಿ. ಇದರಿಂದ ನಿಮ್ಮ ಸಮಸ್ಯೆ ಕಡಿಮೆಯಾಗುತ್ತದೆ. ನಡುವೆ ಕುತ್ತಿಗೆ ಮತ್ತು ತಲೆಗೆ ಹೀಟಿಂಗ್ ಪ್ಯಾಡ್ ಇಟ್ಟುಕೊಳ್ಳಿ. ಇದರೊಂದಿಗೆ, ಸ್ವಲ್ಪ ಪ್ರಮಾಣದ ಕೆಫೀನ್ ನಿಮಗೆ ನೋವಿನಿಂದ ಪರಿಹಾರವನ್ನು ನೀಡಬಹುದು.
>> ತಣ್ಣೀರಿನಿಂದ ಮುಖ ತೊಳೆದು ಸ್ವಲ್ಪ ಹೊತ್ತು ಫ್ರೆಸ್ ಗಾಳಿ ಬರುವ ಕಡೆ ವಾಕ್ ಮಾಡುವುದರಿಂದಲೂ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಗಮನಿಸಿ: ನೀವು ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅವರು ತಕ್ಷಣ ಆರೋಗ್ಯ ತಜ್ಞರ ಸಲಹೆಯನ್ನು ಪಡೆಯಬೇಕು, ಇಲ್ಲದಿದ್ದರೆ ಈ ಸಮಸ್ಯೆ ಗಂಭೀರ ಕಾಯಿಲೆಯಾಗಿ ಬೆಳೆಯಬಹುದು. 
 
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News