High Blood Pressure: ಗೊತ್ತಿಲ್ಲದೆ ಈ ಆಹಾರ ಸೇವಿಸುವುದರಿಂದ ನಿಮ್ಮ ರಕ್ತದೊತ್ತಡ ಹೆಚ್ಚುತ್ತದೆ..!

ತಜ್ಞರ ಪ್ರಕಾರ ಅಧಿಕ ರಕ್ತದೊತ್ತಡದ ಸಮಸ್ಯೆಯಲ್ಲಿ ನೀವು ಕೆಲವು ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು. ನೀವು ಈ ವಸ್ತುಗಳನ್ನು ತಿಂದರೆ ಅದು ನಿಮಗೆ ತುಂಬಾ ಅಪಾಯಕಾರಿ.

Written by - Puttaraj K Alur | Last Updated : Nov 9, 2021, 09:25 AM IST
  • ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಸೈಲೆಂಟ್ ಕಿಲ್ಲರ್ ಎಂದು ಹೇಳಲಾಗುತ್ತದೆ
  • ಗೊತ್ತಿಲ್ಲದೆ ಸೇವಿಸುವ ಆಹಾರಗಳು ಅಧಿಕ ರಕ್ತದೊತ್ತಡ ಸಮಸ್ಯೆಯನ್ನುಂಟು ಮಾಡುತ್ತವೆ
  • ಉಪ್ಪಿನಕಾರಿ, ಚೀಸ್, ಸಿಹಿ ಪಾನೀಯಗಳು, ಕೆಚಪ್, ಫ್ರೆಂಚ್ ಫ್ರೈಸ್ ಸೇವನೆ ತಪ್ಪಿಸಬೇಕು
High Blood Pressure: ಗೊತ್ತಿಲ್ಲದೆ ಈ ಆಹಾರ ಸೇವಿಸುವುದರಿಂದ ನಿಮ್ಮ ರಕ್ತದೊತ್ತಡ ಹೆಚ್ಚುತ್ತದೆ..! title=
ಅಧಿಕ ರಕ್ತದೊತ್ತಡ ಸೈಲೆಂಟ್ ಕಿಲ್ಲರ್ 

ನವದೆಹಲಿ: ಅಧಿಕ ರಕ್ತದೊತ್ತಡ(High Blood Pressure)ವನ್ನು ಸೈಲೆಂಟ್ ಕಿಲ್ಲರ್ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಕಾರಣ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ. ರಕ್ತದೊತ್ತಡವು ತುಂಬಾ ಹೆಚ್ಚಾದಾಗ ಮತ್ತು ನೀವು ಅನೇಕ ಸಮಸ್ಯೆಗಳನ್ನು ಅನುಭವಿಸಲು ಪ್ರಾರಂಭಿಸಿದಾಗ ಇದರ ಪರಿಣಾಮ ಅರಿವಿಗೆ ಬರುತ್ತದೆ. ತಜ್ಞರ ಪ್ರಕಾರ ಅಧಿಕ ರಕ್ತದೊತ್ತಡದ ಸಮಸ್ಯೆಯಲ್ಲಿ ನೀವು ಕೆಲವು ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು. ನೀವು ಈ ವಸ್ತುಗಳನ್ನು ತಿಂದರೆ ಅದು ನಿಮಗೆ ತುಂಬಾ ಅಪಾಯಕಾರಿ.

ಉಪ್ಪಿನಕಾಯಿ

ನೀವು ಪರಾಠಾ, ಚೀಸ್ ಪ್ಲೇಟರ್, ದಾಲ್ ಮತ್ತು ಅನ್ನದೊಂದಿಗೆ ಉಪ್ಪಿನಕಾಯಿ ಸೇವಿಸುತ್ತಿದ್ದರೆ ತಕ್ಷಣ ಈ ಅಭ್ಯಾಸವನ್ನು ಬಿಟ್ಟುಬಿಡಿ. ಉಪ್ಪಿನಕಾಯಿಯಲ್ಲಿ ಉಪ್ಪಿನ ಪ್ರಮಾಣ ತುಂಬಾ ಹೆಚ್ಚಿರುತ್ತದೆ. ಇದನ್ನು ಹೆಚ್ಚಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡದ(Blood Pressure) ಸಮಸ್ಯೆಯುಂಟಾಗಿ ನಿಮಗೆ ಹಾನಿ ಮಾಡುತ್ತದೆ.

ಚೀಸ್

ಚೀಸ್ ಕೂಡ ಹೆಚ್ಚಿನ ಪ್ರಮಾಣದ ಸೋಡಿಯಂ ಅನ್ನು ಹೊಂದಿರುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಇದನ್ನು ತಿನ್ನುವುದನ್ನು ತಪ್ಪಿಸಬೇಕು.

ಇದನ್ನೂ ಓದಿ: Tulsi Leaves: ಈ ಸಮಸ್ಯೆ ಇರುವವರು ತಪ್ಪಿಯೂ ತುಳಸಿ ಎಲೆಯನ್ನು ತಿನ್ನಲೇಬಾರದು

ಸಿಹಿ ಪಾನೀಯಗಳು

ನೀವು ಸಿಹಿ ಪಾನೀಯಗಳನ್ನು ಸೇವಿಸಿದರೆ ಅಧಿಕ ರಕ್ತದೊತ್ತಡದ ಸಮಸ್ಯೆಯಲ್ಲಿ ಅದು ನಿಮಗೆ ಹಾನಿ ಮಾಡುತ್ತದೆ. ಇದು ತೂಕದ ಜೊತೆಗೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಸಕ್ಕರೆ ಪಾನೀಯಗಳನ್ನು ಸೇವಿಸದ ಜನರಿಗಿಂತ ಸಕ್ಕರೆ ಪಾನೀಯಗಳನ್ನು ಕುಡಿಯುವ ಜನರು ಅಧಿಕ ರಕ್ತದೊತ್ತಡಕ್ಕೆ ಒಳಗಾಗುತ್ತಾರೆ.

ಫ್ರೆಂಚ್ ಫ್ರೈಸ್

ಫ್ರೆಂಚ್ ಫ್ರೈಗಳನ್ನು ತಿನ್ನುವುದು ಅಧಿಕ ರಕ್ತದೊತ್ತಡ ರೋಗಿಗಳಿಗೆ ಹಾನಿ ಮಾಡುತ್ತದೆ. ಇದು ಹೆಚ್ಚುವರಿ ಉಪ್ಪನ್ನು ಹೊಂದಿರುತ್ತದೆ, ಇದು ದೇಹದಲ್ಲಿ ನೀರಿನ ಧಾರಣವನ್ನು ಉಂಟುಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

ಕೆಚಪ್

ಒಂದು ಟೀ ಚಮಚ ಕೆಚಪ್‌ನಲ್ಲಿ 190 ಮಿಗ್ರಾಂ ಸೋಡಿಯಂ ಇರುತ್ತದೆ. ನೀವು ಫ್ರೆಂಚ್ ಫ್ರೈಗಳೊಂದಿಗೆ ಕೆಚಪ್ ಅನ್ನು ಸೇವಿಸಿದರೆ, ಹೆಚ್ಚು ಉಪ್ಪನ್ನು ಸೇವಿಸುತ್ತಿದ್ದೀರಿ ಎಂದರ್ಥ.

ಇದನ್ನೂ ಓದಿ: Tea Benefits: ಚಳಿಗಾಲದಲ್ಲಿ ಈ ರೀತಿ ಚಹಾ ತಯಾರಿಸಿ ಸೇವಿಸಿದರೆ ಸಿಗುತ್ತೆ ಅದ್ಭುತ ಲಾಭ

ಖನಿಜಯುಕ್ತ ನೀರು

ಬಾಟಲ್ ಮಿನರಲ್ ವಾಟರ್ ಕುಡಿಯುವುದರಿಂದ ಅಧಿಕ ರಕ್ತದೊತ್ತಡ ರೋಗಿಗಳಿಗೂ ಹಾನಿಯಾಗುತ್ತದೆ. ತಜ್ಞರ ಪ್ರಕಾರ ಇದು ಪ್ರತಿ ಲೀಟರ್‌ಗೆ 200 ಮಿಗ್ರಾಂ ಸೋಡಿಯಂ(Sodium) ಅನ್ನು ಹೊಂದಿರುತ್ತದೆ.

 ಬೇಕನ್

ಅಧಿಕ ರಕ್ತದೊತ್ತಡದ ಸಮಸ್ಯೆಯಲ್ಲಿ ಬೇಕನ್ ತಿನ್ನುವುದು ನಿಮಗೆ ಹಾನಿ ಮಾಡುತ್ತದೆ. ಇದು ಬಹಳಷ್ಟು ಕೊಲೆಸ್ಟ್ರಾಲ್, ಕೊಬ್ಬು ಮತ್ತು ಉಪ್ಪನ್ನು ಹೊಂದಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News