ಬೆಂಗಳೂರು: ಚಳಿಗಾಲದಲ್ಲಿ ಹೆಚ್ಚಿನ ಜನರಿಗೆ ಕಾಡುವ ಸಮಸ್ಯೆ ಎಂದರೆ ಅದು ಕೂದಲುದುರುವ ಸಮಸ್ಯೆ. ಚಳಿಗಾಲದ (Winter) ಶುಷ್ಕ ಗಾಳಿಯು ನೆತ್ತಿಯಿಂದ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ನೆತ್ತಿ ಒಣಗಿ ಕೂದಲು ಉದುರುತ್ತವೆ. ಆದ ಕಾರಣ ನಿಮ್ಮ ಕೂದಲು (Hair) ಉದುರಬಾರದಂತಿದ್ದರೆ ಚಳಿಗಾಲದಲ್ಲಿ ಈ ನಿಯಮ ಪಾಲಿಸಿ.
ತಜ್ಞರ ಪ್ರಕಾರ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿ 8 ವಾರಕ್ಕೊಮ್ಮೆ ಕೂದಲ ತುದಿಯನ್ನು ಕತ್ತರಿಸುತ್ತಿರಬೇಕು. ಇದರಿಂದ ಸೀಳು ಕೂದಲಿನ ಸಮಸ್ಯೆ ಮತ್ತು ಕೂದಲು ಹಾನಿಯಾಗುವುದನ್ನು ತಡೆಯಬಹುದು.
ಪುರುಷರ ಹೇರ್ ಫಾಲ್ ಸಮಸ್ಯೆಗೆ ಇಲ್ಲಿದೆ ಪರಿಹಾರ!
ಚಳಿಗಾಲದಲ್ಲಿ ಕೂದಲಿನ ತೇವಾಂಶ ಕಾಪಾಡಿಕೊಳ್ಳಲು ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಅದರಲ್ಲೂ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ. ಇದರಿಂದ ನೆತ್ತಿಯು ತೇವಾಂಶದಿಂದ ಕೂಡಿರುತ್ತದೆ. ಮತ್ತು ಕೂದಲು ಹಾನಿಯಾಗುವುದನ್ನು ತಡೆದು ಹೊಳೆಯುವಂತೆ ಮಾಡುತ್ತದೆ.
ಹಾಗೇ ತಲೆಗೆ ಸ್ನಾನ ಮಾಡುವ ವೇಳೆ ಬಿಸಿ ಬಿಸಿ ನೀರು ಬಳಸಬೇಡಿ. ಇದರಿಂದ ಕೂದಲಿಗೆ ಇನ್ನಷ್ಟು ಹಾನಿಯಾಗುತ್ತದೆ. ಜೊತೆಗೆ ಕೂದಲುದುರುವ (Hair Fall) ಸಮಸ್ಯೆ ಜಾಸ್ತಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಚಳಿಗಾಲದಲ್ಲಿ ಕೂದಲುದುರುವಿಕೆಗೆ ಹೇಳಿ ಬೈ.. ಬೈ..! ಕೂದಲ ರಕ್ಷಣೆಗೆ ಮನೆಮದ್ದು!
ಚಳಿಗಾಲದಲ್ಲಿ ಕೂದಲಿಗೆ ಮೊಸರು ಮತ್ತು ನಿಂಬೆಯ ಹೇರ್ ಪ್ಯಾಕ್ ಹಚ್ಚಿ. ಈ ನೈಸರ್ಗಿಕ ಕಂಡೀಷನರ್ ಕೂದಲು ಉದುರುವುದನ್ನು ಕಡಿಮೆ ಮಾಡಿ ನೆತ್ತಿಯ ಶುಷ್ಕತೆಯನ್ನು ಮತ್ತು ತಲೆ ಹೊಟ್ಟನ್ನು ನಿವಾರಿಸುತ್ತದೆ.