Healthy Hair Tips: ಕೂದಲಿನ ಬೆಳವಣಿಗೆಗೆ ಯಾವ ಎಣ್ಣೆ ಉತ್ತಮ ಗೊತ್ತಾ..?

Hair Care Tips: ರಾತ್ರಿ ವೇಳೆ ನತ್ತಿಗೆ ಹರಳೆಣ್ಣೆ ಹಾಕಿ ಮಲಗುವುದರಿಂದಲೂ ಕೂದಲು ಉತ್ತಮವಾಗಿ ಬೆಳವಣಿಗೆಯಾಗುತ್ತದೆ. ವಾರಕ್ಕೆ ಎರಡು ಬಾರಿ ನೀವು ನೆತ್ತಿಗೆ ಹರಳೆಣ್ಣೆ ಹಾಕಿ ಮಲಗಬೇಕು. ಇದರಿಂದ ಶೀಘ್ರವೇ ನಿಮ್ಮ ಕೂದಲು ಸೋಂಪಾಗಿ ಬೆಳೆಯಲು ಪ್ರಾರಂಭಿಸುತ್ತವೆ. 

Written by - Puttaraj K Alur | Last Updated : Oct 7, 2024, 07:28 PM IST
  • ಕೂದಲು ಉದುರುವಿಕೆ ತಡೆಯಲು ಮತ್ತು ಹೊಸ ಕೂದಲಿನ ಬೆಳವಣಿಗೆಗೆ ಹರಳೆಣ್ಣೆ ಉತ್ತಮ
  • ರಾತ್ರಿ ವೇಳೆ ನತ್ತಿಗೆ ಹರಳೆಣ್ಣೆ ಹಾಕಿ ಮಲಗುವುದರಿಂದಲೂ ಕೂದಲು ಬೆಳವಣಿಗೆಯಾಗುತ್ತದೆ
  • ಕೂದಲಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಸಹ ವಿಶೇಷ ಕಾಳಜಿಯನ್ನು ವಹಿಸಬೇಕು
Healthy Hair Tips: ಕೂದಲಿನ ಬೆಳವಣಿಗೆಗೆ ಯಾವ ಎಣ್ಣೆ ಉತ್ತಮ ಗೊತ್ತಾ..? title=
ಕೂದಲಿಗೆ ಯಾವ ಎಣ್ಣೆ ಉತ್ತಮ..?

Tips for healthy hair: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಒತ್ತಡಮಯ ಪರಿಸ್ಥಿತಿಯಿಂದ ಇಂದು ಅನೇಕರಲ್ಲಿ ಬೊಕ್ಕು ತಲೆ, ಬಿಳಿ ಕೂದಲು ಹಾಗೂ ಕೂದಲು ಉದುರುವ ಸಮಸ್ಯೆ ಕಂಡುಬರುತ್ತದೆ. ಹೀಗಾಗಿ ನೀವು ಕೂದಲಿನ ಆರೈಕೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೂದಲಿನ ಬೆಳವಣಿಗೆಗೆ ನೀವು ಯಾವ ಎಣ್ಣೆ ಬಳಸಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

ಕೂದಲು ಉದುರುವುದನ್ನು ತಡೆಯಲು ಮತ್ತು ಹೊಸ ಕೂದಲಿನ ಬೆಳವಣಿಗೆಗೆ ಹರಳೆಣ್ಣೆ ತುಂಬಾ ಉತ್ತಮ. ಹರಳೆಣ್ಣೆಯ ಜೊತೆಗೆ ಸ್ವಲ್ಪ ಬೆಚ್ಚಗಿನ ಕೊಬ್ಬರಿ ಎಣ್ಣೆಗೆ ಒಂದು ಚಮಚ ಅಲೋವೆರಾ ಜೆಲ್‌ ಮತ್ತು ಒಂದು ಚಮಚ ಹರಳೆಣ್ಣೆ ಹಾಕಿ ನಿಮ್ಮ ಕೂದಲಿಗೆ ಹಾಕಿ. ನಂತರ ನಿಮ್ಮ ಕೂದಲಿಗೆ ಹಚ್ಚಿ ಒಂದು ಗಂಟೆ ನಂತರ ವಾಶ್‌ ಮಾಡಿರಿ.

ಇದನ್ನೂ ಓದಿ: ಎಷ್ಟೇ ಅನ್ಯೋನ್ಯತೆ ಇದ್ದರೂ ಪ್ರತಿಯೊಬ್ಬ ಪತ್ನಿಯೂ ಈ ಐದು ಸತ್ಯವನ್ನು ಪತಿಯಿಂದ ಮುಚ್ಚಿಡುತ್ತಾಳೆ! ಈ ವಿಷಯ ಹೊರ ಬರಲು ಬಿಡುವುದೇ ಇಲ್ಲ

ರಾತ್ರಿ ವೇಳೆ ನತ್ತಿಗೆ ಹರಳೆಣ್ಣೆ ಹಾಕಿ ಮಲಗುವುದರಿಂದಲೂ ಕೂದಲು ಉತ್ತಮವಾಗಿ ಬೆಳವಣಿಗೆಯಾಗುತ್ತದೆ. ವಾರಕ್ಕೆ ಎರಡು ಬಾರಿ ನೀವು ನೆತ್ತಿಗೆ ಹರಳೆಣ್ಣೆ ಹಾಕಿ ಮಲಗಬೇಕು. ಇದರಿಂದ ಶೀಘ್ರವೇ ನಿಮ್ಮ ಕೂದಲು ಸೋಂಪಾಗಿ ಬೆಳೆಯಲು ಪ್ರಾರಂಭಿಸುತ್ತವೆ. 

ಕೂದಲು ಉದುರುವ ಸಮಸ್ಯೆ ಇದ್ದರೆ ನೀವು ನಿಮ್ಮ ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬೇಕು. ಅದೇ ರೀತಿ ನೀವು ತಿನ್ನುವ ಆಹಾರವು ಆರೋಗ್ಯಕರವಾಗಿರಬೇಕು. ಯಾವುದೇ ರೀತಿಯಲ್ಲಿ ನೀವು ಒತ್ತಡಮಯ ಪರಿಸ್ಥಿತಿಯನ್ನು ಎದುರಿಸಬಾರದು. ಯೋಗ, ವ್ಯಾಯಾಮ ಮತ್ತು ಪ್ರತಿದಿನ ಬೆಳಗ್ಗೆ ವಾಕಿಂಗ್‌ ಮಾಡುವುದು ಅರೋಗ್ಯದ ದೃಷ್ಟಿಯಿಂದ ಉತ್ತಮ. 

ಇದನ್ನೂ ಓದಿ: ಡಿಯೋಡ್ರೆಂಟ್​ ಬೇಕಿಲ್ಲ.. ಕಂಕುಳು ದುರ್ನಾತ ತೊಲಗಿಸಲು ಈ ಸಿಂಪಲ್‌ ಮನೆಮದ್ದು ಬಳಸಿ ಸಾಕು !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News