Health Tips: ಹೃದಯವನ್ನು ಆರೋಗ್ಯಕರವಾಗಿರಿಸಲು ಈ ಜ್ಯೂಸ್ ಗಳು ನಿಮ್ಮ ಆಹಾರದಲ್ಲಿರಲಿ

Health Care Tips: ಆರೋಗ್ಯಕರ ದೇಹಕ್ಕೆ ಹೃದಯವನ್ನು ಆರೋಗ್ಯವಂತವಾಗಿಡುವುದು ತುಂಬಾ ಮುಖ್ಯ. ಹೃದಯವನ್ನು ಆರೋಗ್ಯವಂತವಾಗಿಡಲು ನೀವು ಯಾವ ಯಾವ ಪೇಯಗಳನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಬಹುದು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jun 9, 2023, 10:16 PM IST
  • ಕೆಲವೊಮ್ಮೆ ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರದ ಕಾರಣದಿಂದಾಗಿ,
  • ಹೃದಯವು ಬಹಳಷ್ಟು ಹಾನಿಗೊಳಗಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ,
  • ನೀವು ಕೆಲವು ಪಾನೀಯಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವ ಮೂಲಕ ಹೃದಯವನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು.
  • ನೀವು ಯಾವ ಪಾನೀಯಗಳನ್ನು ಸೇರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Health Tips: ಹೃದಯವನ್ನು ಆರೋಗ್ಯಕರವಾಗಿರಿಸಲು ಈ ಜ್ಯೂಸ್ ಗಳು ನಿಮ್ಮ ಆಹಾರದಲ್ಲಿರಲಿ title=

Drink To Boost Heart Health: ನಮ್ಮ ದೇಹ ಆರೋಗ್ಯಕರವಾಗಿರಬೇಕು ಎಂದರೆ, ನಮ್ಮ ಹೃದಯ ಆರೋಗ್ಯಕರವಾಗಿರಬೇಕು. ಹೃದಯವನ್ನು ಆರೋಗ್ಯವಾಗಿಡಲು ನಮ್ಮ ಆಹಾರ ಕ್ರಮವು ತುಂಬಾ ಮುಖ್ಯ. ಆರೋಗ್ಯಕರ ಹೃದಯಕ್ಕಾಗಿ, ಆರೋಗ್ಯಕರ ಆಹಾರದ ಜೊತೆಗೆ, ನೀವು ಕೆಲವು ಆರೋಗ್ಯಕರ ಪಾನೀಯಗಳನ್ನು ಸಹ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಈ ಪಾನೀಯಗಳು ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುವುದಲ್ಲದೆ,  ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಕೆಲವೊಮ್ಮೆ ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರದ ಕಾರಣದಿಂದಾಗಿ, ಹೃದಯವು ಬಹಳಷ್ಟು ಹಾನಿಗೊಳಗಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ಪಾನೀಯಗಳನ್ನು ನಿಮ್ಮ ದೈನಂದಿನ  ಆಹಾರದಲ್ಲಿ ಸೇರಿಸುವ ಮೂಲಕ ಹೃದಯವನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು. ನೀವು ಯಾವ ಪಾನೀಯಗಳನ್ನು ಸೇರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಹೃದಯವನ್ನು ಆರೋಗ್ಯವಾಗಿಡಲು, ಈ ಪಾನೀಯಗಳನ್ನು ಸೇವಿಸಿ
ಕ್ಯಾರೆಟ್-ಬೀಟ್ ಜ್ಯೂಸ್ -
ಕ್ಯಾರೆಟ್ ಮತ್ತು ಬೀಟ್ರೂಟ್ನಿಂದ ತಯಾರಿಸಿದ ಜ್ಯೂಸ್ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದೇ ವೇಳೆ, ಕ್ಯಾರೆಟ್‌ನಲ್ಲಿರುವ ಬೀಟಾ-ಕ್ಯಾರೋಟಿನ್ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ನೀವು ಪ್ರತಿದಿನ ಕ್ಯಾರೆಟ್ ಬೀಟ್ ಜ್ಯೂಸ್ ಕುಡಿಯುತ್ತಿದ್ದರೆ, ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ. ಇದರಿಂದ ಹೃದಯ ಹಾಗೂ ದೇಹ ಸದೃಢವಾಗುತ್ತದೆ. ಇದನ್ನು ಕುಡಿಯುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಹೃದಯವನ್ನು ಆರೋಗ್ಯವಾಗಿಡಬಹುದು.

ಸೌತೆಕಾಯಿ-ಪುದೀನಾ ಜ್ಯೂಸ್ - ಸೌತೆಕಾಯಿ ಮತ್ತು ಪುದೀನಾ ಎರಡೂ ಹೊಟ್ಟೆಗೆ ತುಂಬಾ ಲಾಭಕಾರಿಯಾಗಿವೆ. ಇದರಿಂದ ತಯಾರಿಸಿದ ಜ್ಯೂಸ್ ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ ಮತ್ತು ದೇಹದಲ್ಲಿ ಫೈಬರ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಫೈಬರ್ ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಸೌತೆಕಾಯಿ-ಪುದೀನಾ ಜ್ಯೂಸ್ ಹೊಟ್ಟೆಗೆ ತಂಪು ನೀಡುತ್ತದೆ. ಈ ಪಾನೀಯವನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-Health Tips:ಫ್ಯಾಟಿ ಲೀವರ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಆಹಾರಗಳು ವರದಾನಕ್ಕೆ ಸಮ!

ಸೌಂಫ್ ವಾಟರ್ - ಸೌಂಫ್ ವಾಟರ್ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ವಿಟಮಿನ್ ಕೆ, ವಿಟಮಿನ್ ಇ ಮತ್ತು ಕಬ್ಬಿಣವು ಸೌಂಫ್ನಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತದೆ. ಈ ಅಂಶಗಳು ನಿಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ದೇಹಕ್ಕೆ ಪ್ರಯೋಜನವನ್ನು ನೀಡುತ್ತವೆ.

ಇದನ್ನೂ ಓದಿ-Health Care Tips: ನಿಮಗೂ ಅತಿಯಾದ ನಿದ್ದೆ ಮಾಡುವ ಅಭ್ಯಾಸ ಇದೆಯಾ? ಇಂದೇ ಎಚ್ಚೆತ್ತುಕೊಳ್ಳಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News