Health Tips: ದಿನಕ್ಕೆ ಎಷ್ಟು ಬಾರಿ ಮೂತ್ರ ಮಾಡುವುದು ಸರಿ?

Healthy person pee: ಆರೋಗ್ಯ ತಜ್ಞರು ಹೇಳುವ ಪ್ರಕಾರ, ಯಾವುದೇ ಒಬ್ಬ ಆರೋಗ್ಯಕರ ವ್ಯಕ್ತಿ ದಿನಕ್ಕೆ 6 ರಿಂದ 7 ಬಾರಿ ಮೂತ್ರಕ್ಕೆ ಹೋಗುವುದು ಸಾಮಾನ್ಯವಂತೆ.

Written by - Puttaraj K Alur | Last Updated : Aug 20, 2023, 10:28 AM IST
  • ಆರೋಗ್ಯವಂತ ವ್ಯಕ್ತಿಯೊಬ್ಬ ದಿನಕ್ಕೆ ಎಷ್ಟು ಬಾರಿ ಮೂತ್ರ ಮಾಡಬೇಕು?
  • ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜನರು ಈ ವಿಚಾರವಾಗಿ ಗೊಂದಲದಲ್ಲಿರುತ್ತಾರೆ
  • ಆರೋಗ್ಯ ತಜ್ಞರು ಪ್ರಕಾರ ಆರೋಗ್ಯಕರ ವ್ಯಕ್ತಿ ದಿನಕ್ಕೆ 6-7 ಬಾರಿ ಮೂತ್ರಕ್ಕೆ ಹೋಗುವುದು ಸಾಮಾನ್ಯ
Health Tips: ದಿನಕ್ಕೆ ಎಷ್ಟು ಬಾರಿ ಮೂತ್ರ ಮಾಡುವುದು ಸರಿ?   title=
ಎಷ್ಟು ಬಾರಿ ಮೂತ್ರ ಮಾಡುವುದು ಸರಿ?

ನವದೆಹಲಿ: ಆರೋಗ್ಯವಂತ ವ್ಯಕ್ತಿಯೊಬ್ಬ ದಿನಕ್ಕೆ ಎಷ್ಟು ಬಾರಿ ಮೂತ್ರ ಮಾಡಬೇಕು? ಈ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜನರು ಈ ವಿಚಾರವಾಗಿ ಗೊಂದಲದಲ್ಲಿರುತ್ತಾರೆ. ಕೆಲವರಿಗೆ ಆಗಾಗ ಶೌಚಾಲಯಕ್ಕೆ ಹೋಗುವ ರೂಢಿಯಿರುತ್ತದೆ. ಇನ್ನೂ ಕೆಲವರು ಶೌಚಕ್ಕೆ ಹೋಗದೆ ಗಂಟೆಗಟ್ಟಲೇ ಕುಳಿತುಕೊಂಡಿರುತ್ತಾರೆ. ಹಾಗಾದ್ರೆ ದಿನಕ್ಕೆ ಎಷ್ಟು ಬಾರಿ ಮೂತ್ರಕ್ಕೆ ಹೋಗುವುದು ಆರೋಗ್ಯಕರ?

ಆರೋಗ್ಯ ತಜ್ಞರು ಹೇಳುವ ಪ್ರಕಾರ, ಯಾವುದೇ ಒಬ್ಬ ಆರೋಗ್ಯಕರ ವ್ಯಕ್ತಿ ದಿನಕ್ಕೆ 6 ರಿಂದ 7 ಬಾರಿ ಮೂತ್ರಕ್ಕೆ ಹೋಗುವುದು ಸಾಮಾನ್ಯವಂತೆ. ಆದರೆ ಕೆಲವರು ಇದಕ್ಕಿಂತಲೂ ಕಡಿಮೆ ಅಥವಾ ಹೆಚ್ಚು ಬಾರಿ ಮೂತ್ರಕ್ಕೆ ಹೋಗುತ್ತಾರೆ. ಹೀಗಾಗಿ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಬೇಕಾದ ಅಗತ್ಯವಿಲ್ಲ.

ಇದನ್ನೂ ಓದಿ: ರಸ್ತೆ ಪಕ್ಕದಲ್ಲಿ ಬೆಳೆದು ನಿಂತ ಈ ಹೂವಿನ ಗಿಡ ಮಾರಕ ಡಯಾಬಿಟಿಸ್ ಕಾಯಿಲೆಗೆ ರಾಮಬಾಣ!

ಯಾಕೆಂದರೆ ಮೂತ್ರಕ್ಕೆ ಹೋಗುವ ಸಂದರ್ಭವು  2 ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಪೈಕಿ ನಿಮ್ಮ ಮೂತ್ರಕೋಶದ ಗಾತ್ರವು ಎಷ್ಟು ದೊಡ್ಡದಾಗಿದೆ ಅನ್ನೋದು ಮೊದಲನೆಯದ್ದಾಗಿದ್ದರೆ, ನೀವು ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯುತ್ತೀರಿ ಅನ್ನೋದು 2ನೇಯ ವಿಷಯವಾಗಿದೆ. ನೀವು ಮೂತ್ರ ಮಾಡುವ ಸಮಯದ ಮೇಲೆ ಪರಿಣಾಮ ಬೀರುವ ಮತ್ತೊಂದು ವಿಷಯವೆಂದರೆ ಹೆಚ್ಚಿನ ಕೆಫೀನ್ ಸೇವನೆ

ಹೌದು, ನೀವು ದಿನಕ್ಕೆ ಎಷ್ಟು ಚಹಾ ಅಥವಾ ಕಾಫಿ ಸೇವಿಸುತ್ತೀರಿ? ಅನ್ನೋದರ ಮೇಲೆ ಇದು ನಿರ್ಧಾರವಾಗುತ್ತದೆ. ಇದರ ಜೊತೆಗೆ ಧೂಮಪಾನ ಮಾಡುವವರು ಸಹ ಹೆಚ್ಚುಸಲ ಬಾತ್ ರೂಂಗೆ ಹೋಗಬೇಕಾಗುತ್ತದೆ. ನೀವು ಹೆಚ್ಚು ಬಾರಿ ಮೂತ್ರ ಮಾಡಿದಾಗ ಹೆಚ್ಚು ನೀರು ಕುಡಿದಿರುತ್ತೀರಿ ಅಥವಾ ದ್ರವ ಆಹಾರ ಸೇವಿಸಿರುತ್ತೀರಿ. ಕಡಿಮೆ ಬಾರಿ ಮೂತ್ರ ಮಾಡಿದಾಗ ಕಡಿಮೆ ನೀರು ಸೇವಿಸಿರುತ್ತೀರಿ. ಕಡಿಮೆ ನೀರು ಕುಡಿದಾಗ ಮೂತ್ರದ ಬಣ್ಣವೂ ಹಳದಿಯಾಗಿರುತ್ತದೆ.

ಇದನ್ನೂ ಓದಿ: ಸೌತೆಕಾಯಿಯನ್ನು ಹೀಗೆ ತಿನ್ನಿ.. ಒಂದೇ ವಾರದಲ್ಲಿ ನಿಮ್ಮ ಬಾಡಿ ಶೇಪ್‌ ಚೆಂಜ್‌ ಆಗುತ್ತೆ..!

ಈ ಅಂಶಗಳನ್ನು ಗಮನಿಸಿ ನೀವು ಎಷ್ಟು ಆರೋಗ್ಯಕರ ವ್ಯಕ್ತಿ ಅನ್ನೋದನ್ನು ತಿಳಿದುಕೊಳ್ಳಬಹುದು. ಹೆಚ್ಚಾಗಿ ನೀರು ಅಥವಾ ಚಹಾ, ಕಾಫಿ ಸೇವನೆ ಮಾಡುವವರು ಹಲವು ಬಾರಿ ಮೂತ್ರ ಮಾಡುತ್ತಾರೆ. ಈ ಅಂಶಗಳನ್ನು ಬಿಟ್ಟು ನೀವು ಹೆಚ್ಚು ಬಾರಿ ಮೂತ್ರ ಮಾಡುತ್ತಿದ್ದರೆ ಅಥವಾ ರಾತ್ರಿ ವೇಳೆ ಹೆಚ್ಚು ಬಾರಿ ಮೂತ್ರಕ್ಕೆ ಎಳುತ್ತಿದ್ದರೆ ನಿಮ್ಮ ಆರೋಗ್ಯದಲ್ಲಿ ಏನೋ ವ್ಯತ್ಯಾಸವಾಗಿದೆ ಅನ್ನೋದನ್ನು ತಿಳಿದುಕೊಳ್ಳಬೇಕು. ನೀವು ಕೂಡಲೇ ನಿಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News