Health Tips: ಹಣ್ಣುಗಳನ್ನು ಸೇವಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

ಹಣ್ಣುಗಳು ಜೀವಸತ್ವಗಳು ಮತ್ತು ನಾರಿನ ಅಂಶಗಳ ಸಮೃದ್ಧ ಮೂಲವಾಗಿವೆ. ಆದರೆ ಹಣ್ಣುಗಳನ್ನು ತಿನ್ನುವಾಗ ನಾವು ಆಗಾಗ ಈ ಪ್ರಮುಖ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತೇವೆ. ಹಣ್ಣುಗಳನ್ನು ತಿನ್ನುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ತಿಳಿಯಿರಿ. 

Written by - Puttaraj K Alur | Last Updated : Dec 10, 2022, 12:35 PM IST
  • ಆಹಾರದ ಜೊತೆ ಸೇರಿಸಿ ಹಣ್ಣು ಸೇವಿಸುವುದು ಉತ್ತಮವಲ್ಲ, ಹೀಗಾಗಿ ಪ್ರತ್ಯೇಕವಾಗಿ ಸೇವಿಸಿ
  • ಮಲಗುವ 2-3 ಗಂಟೆಗಳ ಮುನ್ನ ಹಣ್ಣುಗಳನ್ನು ತಿನ್ನುವುದನ್ನು ಆದಷ್ಟು ತಪ್ಪಿಸಬೇಕು
  • ಹಣ್ಣುಗಳನ್ನು ತಿಂದ ನಂತರ ನೇರವಾಗಿ ನೀರು ಕುಡಿಯುವುದು ಉತ್ತಮ ಅಭ್ಯಾಸವಲ್ಲ
Health Tips: ಹಣ್ಣುಗಳನ್ನು ಸೇವಿಸುವಾಗ ಈ ತಪ್ಪುಗಳನ್ನು ಮಾಡಬೇಡಿ title=
ಹಣ್ಣು ತಿನ್ನುವಾಗ ಈ ತಪ್ಪು ಮಾಡಬೇಡಿ

ನವದೆಹಲಿ: ತೂಕ ನಷ್ಟಕ್ಕೆ ಹಣ್ಣುಗಳು ಅತ್ಯುತ್ತಮ ಆಯ್ಕೆ. ಏಕೆಂದರೆ ಇವು ಕಡಿಮೆ ಕ್ಯಾಲೋರಿ ಜೊತೆಗೆ ಹೆಚ್ಚಿನ ಫೈಬರ್ ಹೊಂದಿರುತ್ತವೆ. ಹಣ್ಣುಗಳು ಪ್ರಕೃತಿದತ್ತವಾಗಿ ದೊರೆಯುವ ಆರೋಗ್ಯಕರ ಆಹಾರ. ಹಣ್ಣುಗಳು ದೇಹಕ್ಕೆ ಹೇರಳವಾಗಿ ಅಗತ್ಯವಿರುವ ಜೀವಸತ್ವ ಮತ್ತು ಖನಿಜಗಳನ್ನು ನೀಡುತ್ತವೆ. ಇವುಗಳನ್ನು ಇಡೀಯಾಗಿ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸಲಾಗುತ್ತದೆ. ಹಣ್ಣುಗಳು ಅತ್ಯಂತ ನೈಸರ್ಗಿಕ ಆಹಾರ ಮಾತ್ರವಲ್ಲ, ದೇಹವು ಕಾರ್ಯನಿರ್ವಹಿಸಲು ಅಗತ್ಯವಿರುವ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್‌ನಿಂದ ಕೂಡಿರುತ್ತವೆ. ಆದರೆ ‘ಅತಿಯಾದರೆ ಅಮೃತವೂ ವಿಷ’ವೆಂಬಂತೆ ಸರಿಯಾದ ಸಮಯದಲ್ಲಿ ಸರಿಯದ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸಬೇಕು. ಈ ಬಗ್ಗೆ ನಾವು ವಿಶೇಷ ಕಾಳಜಿ ವಹಿಸುವುದು ಉತ್ತಮ.  

ಹಣ್ಣು ತಿನ್ನುವಾಗ ಈ 4 ತಪ್ಪು ಮಾಡಬೇಡಿ

ಪ್ರತ್ಯೇಕವಾಗಿ ಸೇವಿಸುವುದು ಉತ್ತಮ: ಹಣ್ಣುಗಳು ಇತರ ಯಾವುದೇ ಆಹಾರಕ್ಕಿಂತಲೂ ಬೇಗ ಹಾಳಾಗುತ್ತವೆ. ಇತರ ಆಹಾರಗಳೊಂದಿಗೆ ಹಣ್ಣನ್ನು ಸೇರಿಸಿ ಸೇವಿಸುವುದು ದೇಹಕ್ಕೆ ಉತ್ತಮವಲ್ಲ. ಇದು ಆಹಾರದ ಜೊತೆಗೆ  ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಕಷ್ಟಕರವಾಗಿಸುತ್ತದೆ. ಜೊತೆಗೆ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಿಮಗೆ ಅನಾರೋಗ್ಯ ಉಂಟಾಗಬಹುದು. ಆದ್ದರಿಂದ ಹಣ್ಣನ್ನು ನಾವು ಪ್ರತ್ಯೇಕವಾಗಿ ಸೇವಿಸುವುದೇ ಉತ್ತಮ.

ಇದನ್ನೂ ಓದಿ: Benefits of onion: ಉದ್ದನೆಯ ಕಪ್ಪು ಕೂದಲಿಗಾಗಿ ಈರುಳ್ಳಿ ಜೊತೆ ಇದನ್ನು ಸೇರಿಸಿ ಬಳಸಿ

ರಾತ್ರಿ ವೇಳೆ ಹಣ್ಣು ಸೇವಿಸುವುದು: ಮಲಗುವ 2-3 ಗಂಟೆಗಳ ಮುನ್ನ ಏನನ್ನಾದರೂ ಸೇವಿಸುವುದನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಇದು ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆಯನ್ನುಂಟು ಮಾಡುತ್ತದೆ . ಇದು ಹಣ್ಣುಗಳಿಗೂ ಅನ್ವಯಿಸುತ್ತದೆ. ಮಲಗುವ ಮುನ್ನ ಹಣ್ಣುಗಳನ್ನು ಸೇವಿಸುವುದರಿಂದ ನಿದ್ರೆಗೆ ಅಡ್ಡಿಯಾಗುತ್ತದೆ. ಏಕೆಂದರೆ ಇದು ದೇಹದಲ್ಲಿ ಬಹಳಷ್ಟು ಸಕ್ಕರೆಯನ್ನು ಬಿಡುಗಡೆ ಮಾಡುತ್ತದೆ, ಇದು ದೇಹವು ವಿಶ್ರಾಂತಿ ಪಡೆಯಬೇಕಾದಾಗ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ರಾತ್ರಿ ಪೋಷಕಾಂಶಗಳನ್ನು ಹೀರಿಕೊಳ್ಳುವ ನಮ್ಮ ಸಾಮರ್ಥ್ಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಜೊತೆಗೆ ತಡರಾತ್ರಿ ಹಣ್ಣುಗಳನ್ನು ತಿನ್ನುವುದು ಆಮ್ಲೀಯತೆಯ ಲಕ್ಷಣಗಳನ್ನು ಉಂಟುಮಾಡಬಹುದು. ಹಣ್ಣನ್ನು ಸಂಜೆಯ ತಿಂಡಿಯಾಗಿ ಸೇವಿಸಬೇಕು. 

ತಕ್ಷಣವೇ ನೀರು ಕುಡಿಯುವುದು: ಹಣ್ಣುಗಳನ್ನು ತಿಂದ ನಂತರ ನೇರವಾಗಿ ನೀರು ಕುಡಿಯುವುದು ಉತ್ತಮ ಅಭ್ಯಾಸವಲ್ಲ. ಮಕ್ಕಳು ಮಾತ್ರವಲ್ಲ ವಯಸ್ಕರೂ ಸಹ ಈ ರೀತಿ ಮಾಡುತ್ತಾರೆ. ಹಣ್ಣನ್ನು ತಿಂದ ನಂತರ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ pH ಮಟ್ಟವು ಅಸಮತೋಲನಕ್ಕೆ ಕಾರಣವಾಗಬಹುದು. ವಿಶೇಷವಾಗಿ ಕಲ್ಲಂಗಡಿ, ಸೀಬೆಹಣ್ಣು, ಸೌತೆಕಾಯಿ, ಕಿತ್ತಳೆ ಮತ್ತು ಸ್ಟ್ರಾಬೆರಿಗಳಂತಹ ಹೆಚ್ಚಿನ ನೀರಿನ ಅಂಶವಿರುವ ಹಣ್ಣನ್ನು ಸೇವಿಸುವಾಗ ವಿಶೇಷ ಕಾಳಜಿ ವಹಿಸಬೇಕು. ಬಹಳಷ್ಟು ನೀರು ಇರುವ ಹಣ್ಣುಗಳು ನಿಮ್ಮ ಹೊಟ್ಟೆಯ ಆಮ್ಲೀಯತೆ ಕಡಿಮೆ ಮಾಡುವ ಮೂಲಕ pH ಸಮತೋಲನವನ್ನು ಬದಲಾಯಿಸಬಹುದು. ಹೀಗೆ ಮಾಡುವುದರಿಂದ ಅತಿಸಾರ ಅಥವಾ ಕಾಲರಾದಂತಹ ಗಂಭೀರ ಕಾಯಿಲೆಗಳು ಬರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Black carrot benefits : ಚಳಿಗಾಲದಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ 'ಬ್ಲಾಕ್ ಕ್ಯಾರೆಟ್'!

ಹಣ್ಣುಗಳ ಸಿಪ್ಪೆ: ವಿಟಮಿನ್ಗಳು ಮತ್ತು ಉತ್ಕರ್ಷಣ ನಿರೋಧಕಗಳ ವಿಷಯಕ್ಕೆ ಬಂದಾಗ ಹಣ್ಣುಗಳ ಸಿಪ್ಪೆಯು ಉತ್ತಮ ಭಾಗವಾಗಿದೆ. ಉದಾಹರಣೆಗೆ ಸೇಬು ಸಿಪ್ಪೆಗಳಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಎ ಹೆಚ್ಚಾಗಿರುತ್ತದೆ. ಸಂಶೋಧನೆಯ ಪ್ರಕಾರ, ಹಣ್ಣುಗಳ ಸಿಪ್ಪೆಯನ್ನು ತಿನ್ನುವುದು ನಿಮ್ಮ ಬೊಜ್ಜು ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News