Cholesterol ಸೇರಿದಂತೆ ಇತರ ಕಾಯಿಲೆಗಳಿಗೆ ಬೈ ಬೈ ಹೇಳಲು ಇಂದಿನಿಂದಲೇ ಈ ಹಸಿರು ಪಾನೀಯ ಸೇವನೆ ಆರಂಭಿಸಿ

Health Tips: ಗೋಧಿ ಹುಲ್ಲನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವ್ಹೀಟ್ ಗ್ರಾಸ್ ಅನ್ನು ನೀವು ಸರಿಯಾದ ರೀತಿಯಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಗೋಧಿ ಹುಲ್ಲನ್ನು ಹೇಗೆ ಸೇವಿಸಬೇಕು ಮತ್ತು ಅದರ ಸೇವನೆಯಿಂದ ಆಗುವ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Oct 26, 2022, 02:19 PM IST
  • ಗೋಧಿ ಹುಲ್ಲಿನಲ್ಲಿರುವ ಪೋಷಕಾಂಶಗಳು ತೂಕವನ್ನು ಇಳಿಕೆ ಮಾಡಲು ಕೆಲಸ ಮಾಡುತ್ತವೆ.
  • ಗೋಧಿ ಹುಲ್ಲಿನ ಸೇವನೆಯು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ
  • ಮತ್ತು ಪದೇ ಪದೇ ಹಸಿವಾಗುವ ಬಯಕೆಯನ್ನು ಕಡಿಮೆ ಮಾಡುತ್ತದೆ
Cholesterol ಸೇರಿದಂತೆ ಇತರ ಕಾಯಿಲೆಗಳಿಗೆ ಬೈ ಬೈ ಹೇಳಲು ಇಂದಿನಿಂದಲೇ ಈ ಹಸಿರು ಪಾನೀಯ ಸೇವನೆ ಆರಂಭಿಸಿ title=
Wheet Grass Benefits

Wheatgrass Health Benefits: ಗೋಧಿ ಹಲವು ಖನಿಜಗಳಿಂದ ಸಮೃದ್ಧವಾಗಿದೆ. ಇದರಿಂದ ಗೋಧಿ ಹುಲ್ಲು ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಗೋಧಿ ಹುಲ್ಲಿನ ಸೇವನೆಯಿಂದ ಅನೇಕ ರೋಗಗಳನ್ನು ನಿವಾರಿಸಬಹುದು. ವ್ಹೀಟ್ ಗ್ರಾಸ್ ವಿಟಮಿನ್ ಎ, ಸಿ, ಇ, ಕೆ ಮತ್ತು ಬಿ ಕಾಂಪ್ಲೆಕ್ಸ್‌ನ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಕಬ್ಬಿಣ, ಕ್ಯಾಲ್ಸಿಯಂನಂತಹ ಖನಿಜಗಳು ಇದರಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ವ್ಹೀಟ್ ಗ್ರಾಸ್ ಬಹಳ ಬೇಗ ಪರಿಣಾಮವನ್ನು ತೋರಿಸಲು ಪ್ರಾರಂಭಿಸುತ್ತದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಗೋಧಿ ಹುಲ್ಲು, ಹೃದ್ರೋಗ, ಮಧುಮೇಹದಂತಹ ಕಾಯಿಲೆಗಳ ನಿವಾರಣೆಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಹೇಗೆ ಸೇವಿಸಬೇಕು
ವೀಟ್ ಗ್ರಾಸ್ ಅಂದರೆ ಗೋಧಿ ಹುಲ್ಲಿನ ಜ್ಯೂಸ್ ಮಾಡಿ ನೀವು ಕುಡಿಯಬಹುದು. ಗೋಧಿ ಹುಲ್ಲಿನ ಜ್ಯೂಸ್ ಮಾಡಲು ನೀವು ಮಾರುಕಟ್ಟೆಯಿಂದ ಗೋಧಿ ಹುಲ್ಲಿನ ಪುಡಿಯನ್ನು ತೆಗೆದುಕೊಳ್ಳಬಹುದು, ಆದರೆ ಮನೆಯಲ್ಲಿ ತಾಜಾ ವ್ಹೀಟ್ ಗ್ರಾಸ್ ನ ರಸವನ್ನು ತಯಾರಿಸಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ನೀವು ಇದನ್ನು ಸೇವಿಸಲು ಬಯಸಿದರೆ, ನೀವು ಮನೆಯಲ್ಲಿ ಮಡಕೆ ಅಥವಾ ತೋಟದಲ್ಲಿ ಗೋಧಿ ಧಾನ್ಯಗಳನ್ನು ಬೆಳೆದು ಜ್ಯೂಸ್ ಮಾಡಿ ಕುಡಿಯಬಹುದು.

ಹೃದಯಕ್ಕೆ ಪ್ರಯೋಜನಕಾರಿ
ಕೊಲೆಸ್ಟ್ರಾಲ್ ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಹೃದಯಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ಕೊಲೆಸ್ಟ್ರಾಲ್ ಮುಖ್ಯ ಕಾರಣ. ನರಗಳಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುವ ಕೆಲಸ ವ್ಹೀಟ್ ಗ್ರಾಸ್ ಮಾಡುತದೆ. ಇದರಿಂದ ರಕ್ತನಾಳಗಳು ಶುಚಿಯಾಗಿ ದೇಹದಲ್ಲಿ ರಕ್ತ ಸಂಚಾರ ಸುಲಲಿತವಾಗುತ್ತದೆ. ಕಡಿಮೆ ಕೊಲೆಸ್ಟ್ರಾಲ್ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ವ್ಹೀಟ್ ಗ್ರಾಸ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುವುದು ಮಾತ್ರವಲ್ಲದೆ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಕೆಲಸ ಕೂಡ ಮಾಡುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ
ವ್ಹೀಟ್ ಗ್ರಾಸ್ ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕುವ ಕೆಲಸ ಮಾಡುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ. ಇದರ ಸೇವನೆಯಿಂದ ದೇಹದಿಂದ ವಿಷಕಾರಿ ಅಂಶಗಳು ಹೊರಹೋಗುತ್ತವೆ. ವ್ಹೀಟ್ ಗ್ರಾಸ್ ಅನ್ನು ಪ್ರತಿದಿನ ಸೇವಿಸಿದರೆ, ಚರ್ಮದ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದು. ಇದು ಮುಖದ ತ್ವಚೆಯ ಕಲೆಗಳನ್ನು ತೆಗೆದು ತ್ವಚೆಯನ್ನು ಹೊಳೆಯುವಂತೆ ಮಾಡುವ ಕೆಲಸ ಮಾಡುತ್ತದೆ.

ತೂಕ ಇಳಿಕೆ
ಗೋಧಿ ಹುಲ್ಲಿನಲ್ಲಿರುವ ಪೋಷಕಾಂಶಗಳು ತೂಕವನ್ನು ಇಳಿಕೆ ಮಾಡಲು ಕೆಲಸ ಮಾಡುತ್ತವೆ. ಗೋಧಿ ಹುಲ್ಲಿನ ಸೇವನೆಯು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ ಮತ್ತು ಪದೇ ಪದೇ ಹಸಿವಾಗುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಹಸಿವಿನ ಬಯಕೆಯ ಕೊರತೆಯಿಂದ ತೂಕವು ನಿಯಂತ್ರಣದಲ್ಲಿದೆ.

ಇದನ್ನೂ ಓದಿ-Purple Cabbage: ಕ್ಯಾನ್ಸರ್ ಹಾಗೂ ಡಯಾಬಿಟಿಸ್ ನಂತಹ ಮಾರಕ ಕಾಯಿಲೆಗಳಿಂದ ರಕ್ಷಿಸುತ್ತದೆ ಈ ತರಕಾರಿ

ಮಧುಮೇಹವನ್ನು ನಿಯಂತ್ರಣ
ಗೋಧಿ ಹುಲ್ಲಿನ ಸೇವನೆಯು ಮಧುಮೇಹವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ವ್ಹೀಟ್ ಗ್ರಾಸ್ ಆಂಟಿ ಡಯಾಬಿಟಿಕ್ ಗುಣಗಳನ್ನು ಹೊಂದಿದ್ದು, ಇದು ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ.

ಇದನ್ನೂ ಓದಿ-Health Tips: ಈ ವಿಶೇಷ ರೀತಿಯ ಹುಲ್ಲಿನ ಬಳಕೆಯಿಂದ ಬೆಣ್ಣೆಯಂತೆ ಕರಗುತ್ತದೆ ಬೊಜ್ಜು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News