Health Benefits Of Sweet Potato: ಚಳಿಗಾಲದಲ್ಲಿ ಆರೋಗ್ಯಕ್ಕೆ ವರದಾನ ಗೆಣಸು, ಇಲ್ಲಿವೆ ಅದರ 7 ಅದ್ಭುತ ಲಾಭಗಳು

Sweet Potatoes Benefits: ಚಳಿಗಾಲದಲ್ಲಿ ಗೆಣಸು (Winter Food) ಸೇವನೆ ನಿಮಗೆ ಹಲವು ರೀತಿಯಲ್ಲಿ ಲಾಭ ನೀಡುತ್ತದೆ. ಸಿಹಿಗೆಣಸಿನಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆ ಮತ್ತು ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

Written by - Nitin Tabib | Last Updated : Nov 27, 2021, 11:34 AM IST
  • ಗೆಣಸು ವಿಟಮಿನ್ ಡಿ ಯ ಉತ್ತಮ ಆಗರವಾಗಿದೆ.
  • ಗೆಣಸು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ
  • ಗೆಣಸು ಸೇವನೆಯು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
Health Benefits Of Sweet Potato: ಚಳಿಗಾಲದಲ್ಲಿ ಆರೋಗ್ಯಕ್ಕೆ ವರದಾನ ಗೆಣಸು, ಇಲ್ಲಿವೆ ಅದರ 7 ಅದ್ಭುತ ಲಾಭಗಳು title=
Health Benefits Of Sweet Potato (File Photo)

ನವದೆಹಲಿ:  Winter Food - ಚಳಿಗಾಲದಲ್ಲಿ (Winter Diet) ಗೆಣಸುಗಳನ್ನು ಸೇವಿಸುವುದರಿಂದ ಹಲವು ರೀತಿಯ ಲಾಭ ಸಿಗುತ್ತವೆ. ಗೆಣಸಿನಲ್ಲಿರುವ ಪೋಷಕಾಂಶಗಳು ಚರ್ಮದ ಆರೋಗ್ಯಕ್ಕೆ, ಜೀರ್ಣಕ್ರಿಯೆಗೆ (Digestion) ತುಂಬಾ ಪ್ರಯೋಜನಕಾರಿಯಾಗಿವೆ. ಇದನ್ನು ತಿನ್ನುವುದರಿಂದ ಚಯಾಪಚಯ ಕ್ರಿಯೆಯು ಹೆಚ್ಚಾಗುತ್ತದೆ ಮತ್ತು ರೋಗನಿರೋಧಕ ಶಕ್ತಿಯೂ ಬಲವಾಗಿರುತ್ತದೆ.

ಪ್ರತಿರಕ್ಷಣಾ ವ್ಯವಸ್ಥೆಗೆ ಅದ್ಭುತವಾಗಿದೆ (Sweet Potato Benefits)
ಗೆಣಸು (Sweet Potato) ವಿಟಮಿನ್ ಡಿ (Vitamin D)ಯ ಉತ್ತಮ ಆಗರವಾಗಿದೆ. ಚಳಿಗಾಲದಲ್ಲಿ ವಿಟಮಿನ್ ಡಿ ಸಮೃದ್ಧವಾಗಿರುವ ಗೆಣಸನ್ನು ತಿನ್ನುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಹೆಚ್ಚಾಗುತ್ತದೆ. ಬೇರು ತರಕಾರಿಗಳು ಸಾಮಾನ್ಯವಾಗಿ ಶಾಖ-ಉತ್ಪಾದಿಸುವ ಗುಣಲಕ್ಷಣಗಳನ್ನು ಹೊಂದಿವೆ ಮತ್ತು ಗೆಣಸು  ತಿನ್ನುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

ಚರ್ಮಕ್ಕೆ ಪ್ರಯೋಜನಕಾರಿ
ಗೆಣಸಿನ ಸೇವನೆಯು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಹೆಚ್ಚಿನ ಪ್ರಮಾಣದ ಕ್ಯಾರೊಟಿನಾಯ್ಡ್ಗಳನ್ನು ಹೊಂದಿರುತ್ತದೆ, ಅಲ್ಲದೆ ಇದು ಉತ್ಕರ್ಷಣ ನಿರೋಧಕವಾಗಿದೆ.

ಚಯಾಪಚಯವನ್ನು ಹೆಚ್ಚಿಸುತ್ತದೆ
ಚಳಿಗಾಲದಲ್ಲಿ (Winter Diet) ಇದನ್ನು ತಿನ್ನುವುದರಿಂದ ನಿಮಗೆ ಸಾಕಷ್ಟು ಶಕ್ತಿ ಬರುತ್ತದೆ. ವಿಟಮಿನ್ ಬಿ6 ಗೆಣಸಿನಲ್ಲಿ ಕಂಡುಬರುತ್ತದೆ. ಇದು ಚಯಾಪಚಯ ಕ್ರಿಯೆ ಮತ್ತು ನರಮಂಡಲವನ್ನು ಸರಿಯಾಗಿ ಇಡುತ್ತದೆ. ಗೆಣಸಿನಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್ ಇರುವುದರಿಂದ ಇದು ಜೀರ್ಣಕ್ರಿಯೆಗೆ ತುಂಬಾ ಉತ್ತಮವಾಗಿದೆ. 

ರಕ್ತದೊತ್ತಡ ರೋಗಿಗಳಿಗೆ ಪ್ರಯೋಜನಕಾರಿ
ಗೆಣಸಿನಲ್ಲಿರುವ ಫೈಬರ್ ಪ್ರಮಾಣವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ನೀವು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣದಲ್ಲಿಡಲು ಬಯಸಿದರೆ, ಗೆಣಸು ಸೇವನೆಯು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಇದು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ, ಇದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ
ಮಿದುಳಿನ ಆರೋಗ್ಯಕ್ಕೆ ಗೆಣಸು ಸೇವನೆ ಪ್ರಯೋಜನಕಾರಯಾಗಿದೆ.ಗೆಣಸಿನಲ್ಲಿರುವ ಕೋಲೀನ್ ಮೆದುಳಿನ ಬೆಳವಣಿಗೆಗೆ ಅವಶ್ಯಕವಾಗಿದೆ ಮತ್ತು ಮ್ಯಾಂಗನೀಸ್ ಸ್ಮರಣಶಕ್ತಿ ಸುಧಾರಿಸಲು ಅವಶ್ಯಕವಾಗಿದೆ.

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ಗೆಣಸಿನಲ್ಲಿರುವ ಬೀಟಾ ಕ್ಯಾರೋಟಿನ್ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಗೆಣಸು ವಿಟಮಿನ್ ಎ ಯಲ್ಲಿ ಸಮೃದ್ಧವಾಗಿದೆ, ಇದು ಮಹಿಳೆಯರ ಫಲವತ್ತತೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ-Agriculture Law Repeal Bill 2021 : ಮೂರೂ ಕೃಷಿ ಕಾನೂನು ರದ್ದುಗೊಳಿಸುವ ವಿಧೇಯಕ ಸೋಮವಾರ ಸಂಸತ್ತಿನಲ್ಲಿ ಮಂಡನೆ

ಮಧುಮೇಹದಲ್ಲಿ ಬಹಳ ಪ್ರಯೋಜನಕಾರಿ
ಸಿಹಿ ಗೆಣಸು ಮಧುಮೇಹಕ್ಕೆ ಸಾಂಪ್ರದಾಯಿಕ ಪರಿಹಾರವಾಗಿದೆ. ಗೆಣಸು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಹಾರ್ಮೋನ್ ಅಡಿಪೋನೆಕ್ಟಿನ್ ಅನ್ನು ಹೊಂದಿರುತ್ತವೆ. ಅವುಗಳ ಸಂಯೋಜನೆಯು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರವಾಗಿರಿಸುತ್ತದೆ.

ಇದನ್ನೂ ಓದಿ-Coronavirus In Karnataka: ಬೆಂಗಳೂರಿನ ನರ್ಸಿಂಗ್ ಕಾಲೇಜಿನ 12 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

(Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಪಡೆಯಿರಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ -IND Vs SA Series: ರದ್ದಾಗಲಿದೆಯೇ Team India ದ.ಆಫ್ರಿಕಾ ಪ್ರವಾಸ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News