Health Tips: ಕಾಫಿಯನ್ನು ಪ್ರೀತಿಸದವರು ಕಡಿಮೆ ಜನ ಇರುತ್ತಾರೆ. ಹೆಚ್ಚಿನವರಿಗೆ ಬೆಳ್ಳಗೆ ಕಾಫಿ ಇಂದಲೇ ದಿನ ಶುರುವಾಗುತ್ತದೆ. ಎಷ್ಟೋ ಜನ ಒಂದು ದಿನ ಕಾಫಿ ಮಿಸ್ ಆದರೆ ಎನೋ ಕಳೆದು ಕೊಂಡಂತೆ ಆಡುತ್ತಾರೆ. ಅಷ್ಟರ ಮಟ್ಟಿಗೆ ಕಾಫಿಗೆ ಹೊಂದಿಕೊಂಡಿರುತ್ತಾರೆ. ಅಂಥವರು ಬ್ಲಾಕ್ ಕಾಫಿ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ಇದೆ ಎಂದು ತಿಳಿದು ಕುಡಿದರೇ ಇನ್ನಷ್ಟು ಉತ್ತಮ. ಕಾಫಿಯಲ್ಲಿ ಹಲವಾರು ವಿಧದ ಕಾಫಿಗಳಿವೆ. ಅದರಲ್ಲಿ ಬ್ಲಾಕ್ ಕಾಫಿ ಆರೋಗ್ಯಕ್ಕೆ ಎಷ್ಟು ಸಹಾಯಕ ನೋಡೊಣ..
ಬ್ಲಾಕ್ ಕಾಫಿಯಲ್ಲಿ ಇರುವ ಪೌಷ್ಠಿಕಾಂಶಗಳು..
ಕಾಫಿ ನೈಸರ್ಗಿಕವಾಗಿ ವಿಟಮಿನ್ ಬಿ-2,
ವಿಟಮಿನ್ ಬಿ-3,
ಮೆಗ್ನೀಸಿಯಮ್,
ಪೊಟ್ಯಾಸಿಯಮ್
ಇದನ್ನೂ ಓದಿ: Uric Acid : ಅಡುಗೆ ಮನೆಯಲ್ಲಿರುವ ಈ ಮಸಾಲೆ ಯೂರಿಕ್ ಆಸಿಡ್ ಸಮಸ್ಯೆಗೆ ರಾಮಬಾಣ!
ಇದು ಕಪ್ಪು ಕಾಫಿ ಮತ್ತು ಹಾಲು ಅಥವಾ ಸಕ್ಕರೆಯಿಂದ ಮುಕ್ತವಾಗಿರುವುದರಿಂದ, ಕೊಬ್ಬು
ಕಾರ್ಬೋಹೈಡ್ರೇಟ್ಗಳು
ಪ್ರೋಟೀನ್
ಕಪ್ ಕಪ್ಪು ಕಾಫಿಯು ಮ್ಯಾಂಗನೀಸ್, ಸೋಡಿಯಂ, ರೈಬೋಫ್ಲಾವಿನ್ ಮತ್ತು ನಿಯಾಸಿನ್ನಂತಹ ಅಂಶಗಳನ್ನುಹೊಂದಿದೆ.
ಕಪ್ಪು ಕಾಫಿಯು ಕ್ಲೋರೊಜೆನಿಕ್ ಆಮ್ಲವನ್ನು ಹೊಂದಿದ್ದು ಅದು ಗ್ಲೂಕೋಸ್ ಉತ್ಪಾದನೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಊಟದ ನಂತರ ಕಪ್ಪು ಕಾಫಿಯನ್ನು ಕುಡಿಯುವುದರಿಂದ ಅದು ಗ್ಲೂಕೋಸ್ ರಚನೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಇದು ತೂಕ ನಿರ್ವಹಣೆಯನ್ನು ನಿಭಾಯಿಸಬಲ್ಲ ಅನೇಕ ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿದೆ.
ದೈಹಿಕ ಕಾರ್ಯಕ್ಷಮತೆಯನ್ನು ಸುಧಾರಣೆ
ಕೆಫೀನ್ ಅಂಶವು ನರಮಂಡಲವನ್ನ ಸಕ್ರೀಯವಾಗಿರುತ್ತದೆ. ರಕ್ತದಲ್ಲಿ ಅಡ್ರಿನಾಲಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Health Tips: ಇದು ವಿಶ್ವದ ಆರೋಗ್ಯಕರ ಹಣ್ಣು.. ಆದ್ರೆ ಇದರ ಬೀಜ ತಪ್ಪಾಗಿ ಹೊಟ್ಟೆಯೊಳಗೆ ಹೋದರೆ ನಿಮಿಷಗಳಲ್ಲಿ ಸಾವು ಖಚಿತ!
ಹೃದಯ ಸಂಬಂಧಿ ಖಾಯಿಲೆಗೆ ಬ್ಲಾಕ್ ಕಾಫಿ
ಹೆಚ್ಚಿನವರು ಕೆಫೀನ್ ಆಂಶವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಆದರೆ ಅಧ್ಯಯನದ ಪ್ರಕಾರ ಕಾಫಿಯ ನಿಯಮಿತ ಸೇವನೆಯು ಹೃದಯರಕ್ತನಾಳದ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.