Weight Loss Drinks: ಮಲಗುವ ಮುನ್ನ ಈ ಡ್ರಿಂಕ್ಸ್ ಕುಡಿದರೆ ಯಾವುದೇ ಜಿಮ್, ವ್ಯಾಯಾಮ ಮಾಡದೆಯೂ ಕರಗುತ್ತೆ ಬೆಲ್ಲಿ ಫ್ಯಾಟ್

Weight Loss Drinks: ದೇಹದ ತೂಕವನ್ನು ಕಡಿಮೆ ಮಾಡಲು ಕಠಿಣ ಡಯಟ್, ಯೋಗ, ವ್ಯಾಯಾಮ ಅಥವಾ ಜಿಮ್‌ಗೆ ಹೋಗುವುದು ಅನಿವಾರ್ಯವಲ್ಲ. ನೀವು ಜಿಮ್‌ಗೆ ಹೋಗದೆಯೂ, ಯಾವುದೇ ವ್ಯಾಯಾಮ ಮಾಡದೆಯೂ ಕೆಲವು ಸರಳ ಪಾನೀಯಗಳ ಸಹಾಯದಿಂದ ಸುಲಭವಾಗಿ ಬೆಲ್ಲಿ ಫ್ಯಾಟ್ ಕರಗಿಸಬಹುದು. ಅಂತಹ ಸರಳ ಮನೆಮದ್ದುಗಳ ಬಗ್ಗೆ ಇಲ್ಲಿದೆ ಮಾಹಿತಿ.  

Written by - Yashaswini V | Last Updated : Dec 7, 2022, 03:57 PM IST
  • ನೀವು ಜಿಮ್‌ಗೆ ಹೋಗದೆಯೇ, ಯಾವುದೇ ರೀತಿಯ ವ್ಯಾಯಾಮ ಮಾಡದೆಯೇ ತೂಕ ಇಳಿಸಿಕೊಳ್ಳಲು ಬಯಸಿದರೆ ನಿತ್ಯ ರಾತ್ರಿ ಮಲಗುವ ಮೊದಲು ಕೆಲವು ಹೆಲ್ದಿ ಡ್ರಿಂಕ್ಸ್ ಅಂದರೆ ಆರೋಗ್ಯಕರ ಪಾನೀಯಗಳನ್ನು ಬಳಸಬಹುದು.
  • ಇದನ್ನು ನೀವು ಮಾರುಕಟ್ಟೆಯಿಂದ ತರಬೇಕಿಲ್ಲ, ನಿಮ್ಮ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳಿಂದ ನಿಮ್ಮ ತೂಕ ಇಳಿಕೆಯ ಡ್ರಿಂಕ್ಸ್ ಅನ್ನು ತಯಾರಿಸಬಹುದಾಗಿದೆ.
  • ಅಂತಹ ಸುಲಭವಾದ ಆರೋಗ್ಯಕರ ಪಾನೀಯಗಳ ಬಗ್ಗೆ ಇಲ್ಲಿದೆ ಮಾಹಿತಿ
Weight Loss Drinks: ಮಲಗುವ ಮುನ್ನ ಈ ಡ್ರಿಂಕ್ಸ್ ಕುಡಿದರೆ ಯಾವುದೇ ಜಿಮ್, ವ್ಯಾಯಾಮ ಮಾಡದೆಯೂ ಕರಗುತ್ತೆ ಬೆಲ್ಲಿ ಫ್ಯಾಟ್  title=
Weight Loss Drinks

Weight Loss Drinks: ಪ್ರಸ್ತುತ ಬಹಳ ಮಂದಿಯನ್ನು ಕಾಡುತ್ತಿರುವ ಸಾಮಾನ್ಯವಾದ ಸಮಸ್ಯೆ ಎಂದರೆ ತೂಕ ಹೆಚ್ಚಳ. ಹಾಗಾಗಿಯೇ, ಇತ್ತೀಚಿನ ದಿನಗಳಲ್ಲಿ ಜಿಮ್‌ಗೆ ಹೋಗುವ ಟ್ರೆಂಡ್ ಕೂಡ ಬಹಳ ಹೆಚ್ಚಾಗಿದೆ. ಆದರೆ, ದೇಹದ ತೂಕವನ್ನು ಕಡಿಮೆ ಮಾಡಲು ಕಠಿಣ ಡಯಟ್, ಯೋಗ, ವ್ಯಾಯಾಮ ಅಥವಾ ಜಿಮ್‌ಗೆ ಹೋಗುವುದು ಅನಿವಾರ್ಯವಲ್ಲ. ನೀವು ಜಿಮ್‌ಗೆ ಹೋಗದೆಯೂ, ಯಾವುದೇ ವ್ಯಾಯಾಮ ಮಾಡದೆಯೂ ಕೆಲವು ಸರಳ ಪಾನೀಯಗಳ ಸಹಾಯದಿಂದ ಸುಲಭವಾಗಿ ಬೆಲ್ಲಿ ಫ್ಯಾಟ್ ಕರಗಿಸಬಹುದು. ಅಂತಹ ಸರಳ ಮನೆಮದ್ದುಗಳ ಬಗ್ಗೆ ಇಲ್ಲಿದೆ ಮಾಹಿತಿ .

ನೀವು ಜಿಮ್‌ಗೆ ಹೋಗದೆಯೇ, ಯಾವುದೇ ರೀತಿಯ ವ್ಯಾಯಾಮ ಮಾಡದೆಯೇ ತೂಕ ಇಳಿಸಿಕೊಳ್ಳಲು ಬಯಸಿದರೆ ನಿತ್ಯ ರಾತ್ರಿ ಮಲಗುವ ಮೊದಲು ಕೆಲವು ಹೆಲ್ದಿ ಡ್ರಿಂಕ್ಸ್ ಅಂದರೆ ಆರೋಗ್ಯಕರ ಪಾನೀಯಗಳನ್ನು ಬಳಸಬಹುದು. ಇದನ್ನು ನೀವು ಮಾರುಕಟ್ಟೆಯಿಂದ ತರಬೇಕಿಲ್ಲ, ನಿಮ್ಮ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳಿಂದ ನಿಮ್ಮ ತೂಕ ಇಳಿಕೆಯ ಡ್ರಿಂಕ್ಸ್ ಅನ್ನು ತಯಾರಿಸಬಹುದಾಗಿದೆ. 

ಇದನ್ನೂ ಓದಿ- Cabbage Benefits: ಎಲೆಕೋಸು ಸೇವನೆಯಿಂದ ಈ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು

ಮಲಗುವ ಮುನ್ನ ಈ ಡ್ರಿಂಕ್ಸ್ ಕುಡಿದರೆ ಯಾವುದೇ ಜಿಮ್, ವ್ಯಾಯಾಮ ಮಾಡದೆಯೂ ಕರಗುತ್ತೆ ಬೆಲ್ಲಿ ಫ್ಯಾಟ್: 
ಅರಿಶಿನ ಹಾಲು:

ಸಾಮಾನ್ಯವಾಗಿ ಎಲ್ಲರೂ ಹಾಲು ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ, ಹಾಲಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ಅರಿಶಿನದ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ ಹೇರಳವಾಗಿರುತ್ತದೆ. ಇದು ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ತೂಕವನ್ನು ಕಡಿಮೆ ಮಾಡಲು ಕೂಡ ಸಹಕಾರಿ ಆಗಿದೆ. ಮಾತ್ರವಲ್ಲ, ಅರಿಶಿನ ಹಾಲು ಸೇವನೆಯು ಜೀರ್ಣಕ್ರಿಯೆ, ಚಯಾಪಚಯವನ್ನೂ ಸುಧಾರಿಸುತ್ತದೆ.

ಮೆಂತ್ಯ ನೀರು:
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಮೆಂತ್ಯಯನ್ನು ಡಯಾಬಿಟಿಸ್ ಸಮಸ್ಯೆ ಇರುವವರಿಗೆ ದಿವ್ಯೌಷಧ ಎಂದು ಪರಿಗಣಿಸಲಾಗಿದೆ. ನಾಲ್ಕೈದು ಗಂಟೆಗಳ ಕಾಲ ಮೆಂತ್ಯವನ್ನು ನೀರಿನಲ್ಲಿ ನೆನೆಸಿ ಅದನ್ನು ಶೋಧಿಸಿ ಕುಡಿಯುವುದರಿಂದ ಚಯಾಪಚಯವನ್ನು ಸುಧಾರಿಸುತ್ತದೆ. ಇದರಿಂದ ಸೊಂಟದ ಸುತ್ತಲಿನ ಕೊಬ್ಬು ಕರಗಿ ಬೆಲ್ಲಿ ಫ್ಯಾಟ್ ಕಡಿಮೆ ಆಡುತ್ತದೆ. 

ಇದನ್ನೂ ಓದಿ- ನಿತ್ಯ ರಾತ್ರಿ ಮಲಗುವ ಮುನ್ನ ಹಾಲಿಗೆ ಬೆಲ್ಲ ಬೆರೆಸಿ ಸವಿದರೆ ಸಿಗುತ್ತೆ ಇಷ್ಟೆಲ್ಲಾ ಅದ್ಭುತ ಪ್ರಯೋಜನಗಳು

ದಾಲ್ಚಿನ್ನಿ ಪಾನೀಯ:
ಭಾರತೀಯ ಖಾದ್ಯಗಳಲ್ಲಿ ಪ್ರಮುಖ ಮಸಾಲೆಯಾಗಿ ಬಳಸಲ್ಪಡುವ ದಾಲ್ಚಿನ್ನಿಯು  ತೂಕ ಇಳಿಕೆಗೂ ಕೂಡ ಪ್ರಯೋಜನಕಾರಿ ಆಗಿದೆ. ಹಾಗಾಗಿಯೇ, ದಾಲ್ಚಿನ್ನಿ ಚಹಾವನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ದಾಲ್ಚಿನ್ನಿ ಚಹಾದಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್ ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತವೆ. ದಾಲ್ಚಿನ್ನಿ ಚಹಾವನ್ನು ಕುಡಿಯುವುದು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಕೊಬ್ಬನ್ನು ವೇಗವಾಗಿ ಸುಡುತ್ತದೆ.  ಇದು, ಸ್ಥೂಲಕಾಯತೆ ಇರುವವರಿಗೆ ತೂಕ ಕಡಿಮೆ ಮಾಡಲು ವರದಾನಕ್ಕಿಂತ ಕಡಿಮೆ ಇಲ್ಲ ಎಂದು ಹೇಳಲಾಗುತ್ತದೆ. 

ವಾಸ್ತವವಾಗಿ, ತೂಕ ಇಳಿಸಿಕೊಳ್ಳಲು ಉತ್ತಮ ಆಹಾರ ಕ್ರಮವನ್ನು ಅನುಸರಿಸುವುದು ಬಹಳ ಮುಖ್ಯ. ಇದಲ್ಲದೆ, ನೀವು ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಕೆಲವು ತೂಕ ನಷ್ಟದ ಯೋಗ, ವ್ಯಾಯಾಮಗಳನ್ನೂ ಕೂಡ ನಿಮ್ಮ ದಿನಚರಿಯಲ್ಲಿ ಸೇರಿಸುವುದು ಉತ್ತಮ ಆಯ್ಕೆಯಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News