ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿರುವ ಲಕ್ಷಣ ಕೂದಲಿನಲ್ಲಿಯೂ ಕಾಣಿಸುತ್ತದೆ

Symptoms of high cholesterol: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ದೇಹ ನಮಗೆ ಕೆಲವು ಮುನ್ಸೂಚನೆಗಳನ್ನು ನೀಡುತ್ತದೆ. ದೇಹದ ಅನೇಕ ಭಾಗಗಳಲ್ಲಿ ಹೈ ಕೊಲೆಸ್ಟ್ರಾಲ್ ಲಕ್ಷಣಗಳು ಕಾಣಿಸುತ್ತವೆ. ಅವುಗಳಲ್ಲಿ ತಲೆಯ ಕೂದಲು ಕೂಡಾ ಒಂದು.  

Written by - Ranjitha R K | Last Updated : Aug 4, 2023, 11:54 AM IST
  • ಸಂಶೋಧನೆಯಿಂದ ಹೊರ ಬಿತ್ತು ಮಾಹಿತಿ
  • ಅಧಿಕ ಕೊಲೆಸ್ಟ್ರಾಲ್ ನಿಂದ ಕೂದಲು ಉದುರುತ್ತದೆ
  • ಕೂದಲು ಬೆಳ್ಳಗಾಗುತ್ತದೆ
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿರುವ ಲಕ್ಷಣ ಕೂದಲಿನಲ್ಲಿಯೂ ಕಾಣಿಸುತ್ತದೆ  title=

Symptoms of high cholesterol : ಕೊಲೆಸ್ಟ್ರಾಲ್ ಒಂದು ರೀತಿಯ ಕೊಬ್ಬು. ಇದು ನಮ್ಮ ದೇಹದ ಎಲ್ಲಾ ಜೀವಕೋಶಗಳ ರಚನೆ ಮತ್ತು ಕಾರ್ಯಗಳಿಗೆ ಮುಖ್ಯವಾಗಿದೆ. ಇದು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕು. ಆದರೆ ಅದು ಮಿತಿ ಮೀರಿದಾಗ ದೇಹಕ್ಕೆ ಹಾನಿಕಾರಕವಾಗಿರುತ್ತದೆ. ಅಧಿಕ ಕೊಲೆಸ್ಟ್ರಾಲ್ ಹೃದ್ರೋಗ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಹೃದಯಾಘಾತ ಇತ್ಯಾದಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ದೇಹ ನಮಗೆ ಕೆಲವು ಮುನ್ಸೂಚನೆಗಳನ್ನು ನೀಡುತ್ತದೆ. ದೇಹದ ಅನೇಕ ಭಾಗಗಳಲ್ಲಿ ಹೈ ಕೊಲೆಸ್ಟ್ರಾಲ್ ಲಕ್ಷಣಗಳು ಕಾಣಿಸುತ್ತವೆ. ಅವುಗಳಲ್ಲಿ ತಲೆಯ ಕೂದಲು ಕೂಡಾ ಒಂದು.  

ಸಂಶೋಧನೆಯಿಂದ ಹೊರ ಬಿತ್ತು ಮಾಹಿತಿ : 
ಅಮೆರಿಕದಲ್ಲಿ ನಡೆದ ಸಂಶೋಧನೆಯೊಂದರಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಅಥವಾ ಕೂದಲು ಉದುರುವುದು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಲಕ್ಷಣ ಕೂಡಾ ಹೌದು. ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯಲು, ಅದನ್ನು ಸಮಯಕ್ಕೆ ಸರಿಯಾಗಿ ಪತ್ತೆ ಹಚ್ಚಬೇಕು. ಈ ಅಧ್ಯಯನವನ್ನು ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಅಮೆರಿಕದ ಮೊದಲ ಸಂಶೋಧನಾ ವಿಶ್ವವಿದ್ಯಾಲಯವಾದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಇಲಿಗಳ ಮೇಲೆ ಸಂಶೋಧನೆ ನಡೆಸಿದ್ದಾರೆ. ಇದಕ್ಕಾಗಿ, ಇಲಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಒಂದು ಗುಂಪಿಗೆ ನಿಯಮಿತ ಆಹಾರವನ್ನು ನೀಡಲಾಯಿತು. ಇತರ ಗುಂಪಿಗೆ ಹೆಚ್ಚಿನ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಆಹಾರವನ್ನು ನೀಡಲಾಯಿತು. 

ಇದನ್ನೂ ಓದಿ : Blood pressure: ರಕ್ತದೊತ್ತಡ ಕಡಿಮೆ ಮಾಡಲು 5 ಅತ್ಯುತ್ತಮ ವ್ಯಾಯಾಮಗಳು ಸಹಕಾರಿ

36 ವಾರಗಳ ನಂತರ, ಯಾವ ಇಲಿಗಳಿಗೆ ಅಧಿಕ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಆಹಾರವನ್ನು ತಿನ್ನಿಸಲಾಗಿತ್ತೋ ಆ ಇಲಿಗಳ ಮೈ ಮೇಲಿನ ಕೂದಲು ಉದುರುವುದಕ್ಕೆ ಶುರುವಾಯಿತು. ಮಾತ್ರವಲ್ಲ ಅವುಗಳ ಬಣ್ಣ ಕೂಡಾ ಬಿಳಿಯಾಗಲು ಆರಂಭವಾಯಿತು. ಈ ಮೂಲಕ ಹೆಚ್ಚಿನ ಕೊಲೆಸ್ಟ್ರಾಲ್ ಆಹಾರವು ಕೂದಲು ಉದುರುವಿಕೆ ಮತ್ತು ಕೂದಲು ಬಿಳಿಯಾಗಲು ಕಾರಣವಾಗುತ್ತದೆ ಎನ್ನುವುದನ್ನು ಸಂಶೋದಕರು ಸಂಶೋಧನೆಯಿಂದ ಕಂಡು ಕೊಂಡಿದ್ದಾರೆ.

ಹೆಚ್ಚಿನ ಕೊಲೆಸ್ಟ್ರಾಲ್ ನ ಅನಾನುಕೂಲಗಳು : 
ಮೆದುಳು, ಕಣ್ಣುಗಳು, ಹೃದಯ, ಮೂತ್ರಪಿಂಡ ಮತ್ತು ದೇಹದ ಕೆಳಗಿನ ಅಂಗಗಳ ಕಾರ್ಯನಿರ್ವಹಣೆಯಲ್ಲಿಯೂ ಸಮಸ್ಯೆಗಳು ಎದುರಾಗಬಹುದು. ಕೊಲೆಸ್ಟ್ರಾಲ್ ಹೃದಯಾಘಾತದ ಸಾಧ್ಯತೆಯನ್ನು ಬಹುಪಾಲು ಹೆಚ್ಚಿಸುತ್ತದೆ. ಕಣ್ಣುಗಳ ಕಡೆಗೆ ರಕ್ತ ಪರಿಚಲನೆ ನಿಲ್ಲಬಹುದು. ಇದರಿಂದಾಗಿ ದೃಷ್ಟಿ ಸಂಪೂರ್ಣವಾಗಿ ಹೋಗಬಹುದು.

ಇದನ್ನೂ ಓದಿ : ತಾಯಿ ಹಾಲಿನಂತೆ ನಮ್ಮ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ ʼತೆಂಗಿನಕಾಯಿʼ..! ತಿಳಿಯಿರಿ

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News