ನವದೆಹಲಿ : ಮೊದಲ ಮತ್ತು ಎರಡನೇ ಅಲೆಯ ಸಮಯದಲ್ಲಿ ನಾವೆಲ್ಲರೂ ಕರೋನಾ ಬಗ್ಗೆ ಪ್ರಜ್ಞೆ ಹೊಂದಿರಲಿಲ್ಲ. ಆದರೆ ಈ ಅಸಡ್ಡೆ ನಮ್ಮೆಲ್ಲರನ್ನೂ ಅಲುಗಾಡಿಸಿಬಿಡ್ತು, ಏಕೆಂದರೆ ಇನ್ನು ನಾಲ್ಕು ತಿಂಗಳ ನಂತರ, ಕೊರೋನಾ ನಾಲ್ಕನೇ ಅಲೆ ದೇಶದಲ್ಲಿ ಬರಬಹುದು ಎಂದು ಹೇಳಲಾಗುತ್ತಿದೆ. ಕೊರೋನಾಗೆ ಸಂಬಂಧಿಸಿದ ನಿಯಮಗಳನ್ನು ನೀವು ತ್ಯಜಿಸಿದ್ದರೆ, ಮತ್ತೊಮ್ಮೆ ಆ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ, ಇಲ್ಲದಿದ್ದರೆ ಅಪಾಯ ತಪ್ಪಿದಲ್ಲ. ದೇಶದಲ್ಲಿ ಇದುವರೆಗೆ 5 ಲಕ್ಷ 21 ಸಾವಿರಕ್ಕೂ ಹೆಚ್ಚು ಜನ ಮತ್ತು ವಿಶ್ವದಾದ್ಯಂತ 61 ಲಕ್ಷ 95 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಕೊರೋನಾದ ನಾಲ್ಕನೇ ಅಲೆ ಬರುವ ಮೊದಲು, ಮತ್ತೊಮ್ಮೆ ಸಾಬೂನು ಮತ್ತು ನೀರಿನಿಂದ ಕೈ ತೊಳೆಯುವುದು ಶುರು ಮಾಡಿ, ಸಾಮಾಜಿಕ ಅಂತರ ಮತ್ತು ಮಾಸ್ಕ ಧರಿಸುವುದು ಮುಂತಾದ ಅಭ್ಯಾಸಗಳನ್ನು ಮತ್ತೆ ರೂಡಿಸಿಕೊಳ್ಳಿ.
ನಾವೆಲ್ಲರೂ ಕೊರೋನಾದ ಬಗ್ಗೆ ನಿರಾಸಕ್ತಿ ಹೊಂದಿದ್ದೇವೆ ಏಕೆಂದರೆ ಮೂರನೇ ಅಲೆ, ಎರಡನೆಯ ಅಳೆಯಷ್ಟು ಮಾರಕವಾಗಿರಲಿಲ್ಲ. ಕೊರೋನಾದ ಓಮಿಕ್ರಾನ್ ಸ್ಟ್ರೈನ್‌ನಿಂದ ಬಂದ ಮೂರನೇ ಅಲೆಯು ಬಂದಷ್ಟೇ ವೇಗವಾಗಿ ಕೊನೆಗೊಂಡಿತು. ಇಂದಿನ ಬಗ್ಗೆ ಮಾತನಾಡುವುದಾದರೆ, ಪ್ರತಿದಿನ 1000 ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗುತ್ತಿವೆ. ಮೂರನೇ ಅಲೆಗೆ ಕಾರಣವಾದ ಓಮಿಕ್ರಾನ್ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿತ್ತು, ಆದರೆ ಡೆಲ್ಟಾ ರೂಪಾಂತರ ಮಾರಕವಾಗಿರಲಿಲ್ಲ. ಮೊದಲ ಮತ್ತು ಎರಡನೇ ಅಲೆಯ ಸಮಯದಲ್ಲಿ ನಾವೆಲ್ಲರೂ ಕೊರೋನಾ ಬಗ್ಗೆ ಜಾಗರೂಕರಾಗಿರಲು ಬಹುಶಃ ಇದೇ ಕಾರಣವಾಗಿರಬಹುದು. ಈ ಕಾರಣಕ್ಕಾಗಿ ಸರ್ಕಾರಗಳು ಕೊರೋನಾ ನಿಯಮಗಳನ್ನು ಸಡಿಲಗೊಳಿಸಿವೆ.
ಇದನ್ನೂ ಓದಿ : Milk With Fig: ರಾತ್ರಿ ಮಲಗುವ ಮುನ್ನ ಹಾಲಿನೊಂದಿಗೆ ಈ ಡ್ರೈ ಫ್ರೂಟ್ಸ್ ಬೆರೆಸಿ ಕುಡಿದರೆ ಸಿಗುತ್ತೆ ಅದ್ಭುತ ಲಾಭ
ಆ ದಿನಗಳನ್ನು ನೆನಪಿಸಿಕೊಳ್ಳಿ
ಕಳೆದ ವರ್ಷ ಅಂದರೆ ಏಪ್ರಿಲ್ ಮತ್ತು ಆಗಸ್ಟ್ 2021 ರ ನಡುವೆ, ಕೊರೋನಾ ಎರಡನೇ ಅಲೆ ಇತ್ತು. ಎರಡನೇ ಅಲೆಗೆ ಕಾರಣವಾದ ಕೊರೋನಾ ಡೆಲ್ಟಾ ರೂಪಾಂತರದ ಕಾರಣ, ಸ್ಮಶಾನಗಳಲ್ಲಿ ಮೃತ ದೇಹಗಳನ್ನು ಸುಡಲು ಸ್ಥಳವಿರಲಿಲ್ಲ. ಗಂಗಾ-ಯಮುನೆಯಂತಹ ಪುಣ್ಯನದಿಗಳಲ್ಲಿ ಶವಗಳು ತೇಲುತ್ತಿರುವುದು ಕಂಡು ಜನ ಬೆರಗಾಗಿದ್ದರು. ಮರಳಿ ಆ ದಿನಗಳು ಬರುವುದು ಬೇಡ ಎಂಬುವುದು ನಮ್ಮೆಲ್ಲರ ಅಸೆ.
2020 ರ ಮಾರ್ಚ್-ಏಪ್ರಿಲ್-ಮೇ-ಜೂನ್-ಜುಲೈ ತಿಗಳುಗಳನ್ನ ನೀವು ಮರೆಯಲು ಸಾಧ್ಯವಿಲ್ಲ. ಯಾಕೆಂದರೆ, ಸುಮಾರು ಮೂರೂ ತಿಂಗಳುಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು. ಹೀಗಾಗಿ ಜನ ಈ ಸಮಯದಲ್ಲಿ ತುಂಬಾ ಕೆಟ್ಟ ಪರಸ್ಥಿತಿಯನ್ನು ಅನುಭವಿಸಿದ್ದಾರೆ. ಇದು ಮರಳುವುದು ಬೇಡ. ಹಾಗಾಗಿ ಈಗಿಂದಲೇ ಮುನ್ನೆಚ್ಚರಿಕೆ ವಹಿಸಿಕೊಳ್ಳುವುದು ತುಂಬಾ ಮುಖ್ಯ.
ಇದನ್ನೂ ಓದಿ : Men Health Tips : ಪುರುಷರೇ ಈ ತರಕಾರಿ ಜೊತೆ ಜೇನುತುಪ್ಪ ಸೇವಿಸಿ, ನಿಮ್ಮ ದೌರ್ಬಲ್ಯ ದೂರವಾಗುತ್ತೆ
ಈಗ ನಾಲ್ಕನೇ ಅಲೆಯ ಬಗ್ಗೆ
ಒಂದಲ್ಲ ಎರಡಲ್ಲ ವ್ಯತ್ಯಯಗಳ ಮಿಶ್ರಣದಿಂದ ಉಂಟಾಗುವ ಸ್ಟ್ರೈನ್‌ನಿಂದಾಗಿ ಕೊರೋನಾದ ನಾಲ್ಕನೇ ಅಲೆಯ ಬಗ್ಗೆ ಭಯಪಡುವ ಅವಶ್ಯಕತೆಯಿದೆ. ಕರೋನಾದ XE ರೂಪಾಂತರವು ಬ್ರಿಟನ್‌ನಲ್ಲಿ ಕಾಣಿಸಿಕೊಂಡಿದೆ ಮತ್ತು ಅಲ್ಲಿ ದಿನೆ ದಿನೆ ಪ್ರಕರಣಗಳು ಹೆಚ್ಚುತ್ತಿವೆ. ಈ ಬಾರಿ ಇದು ಮಕ್ಕಳ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. ಮಕ್ಕಳನ್ನು ಅನಾರೋಗ್ಯಕ್ಕೆ ಒಳಗಾಗುವಂತೆ ಮಾಡುತ್ತಿದೆ. XE ರೂಪಾಂತರದ ಶಂಕಿತ ಪ್ರಕರಣವು ಭಾರತದ ಮಹಾರಾಷ್ಟ್ರದಲ್ಲಿ ಮುಂಚೂಣಿಗೆ ಬಂದಿದೆ. ಆದರೆ, ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಕರೋನಾದ XE ರೂಪಾಂತರವು ಓಮಿಕ್ರಾನ್‌ಗಿಂತ 10 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.