ಈ ಎಣ್ಣೆಗೆ ಒಂದು ಚಮಚ ಈ ಹಣ್ಣಿನ ರಸವನ್ನು ಬೆರೆಸಿ ಹಚ್ಚಿದರೆ ಮಂಡಿ, ಕೀಲು, ಸೊಂಟ ನೋವು ಶಾಶ್ವತವಾಗಿ ದೂರವಾಗುವುದು! ಒಮ್ಮೆ ಟ್ರೈ ಮಾಡಿ ನೋಡಿ

ಮಂಡಿ, ಕೀಲು, ಸೊಂಟ ನೋವಿನಿಂದ ಬಳಲುತ್ತಾ ಇರುವವರಿಗೆ ಈ ಮದ್ದು ಅತ್ಯಂತ ಪ್ರಯೋಜನಕಾರಿಯಾಗಿರಲಿದೆ. ಸಮಸ್ಯೆಯಿಂದ ಶಾಶ್ವತ ಪರಿಹಾರವೂ ಸಿಗಲಿದೆ. 

Written by - Ranjitha R K | Last Updated : Oct 2, 2024, 10:37 AM IST
  • ವಯಸ್ಸಾದಂತೆ ಕೀಲು ನೋವು, ಮಂಡಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ.
  • ಜೀವನಶೈಲಿಯನ್ನು ಸುಧಾರಿಸುವ ಅವಶ್ಯಕತೆಯಿದೆ.
  • ಕೆಲವು ಸರಳ ಮನೆಮದ್ದುಗಳ ಸಹಾಯದಿಂದ ಈ ನೋವಿನಿಂದ ಮುಕ್ತಿ ಪಡೆಯಬಹುದು.
ಈ ಎಣ್ಣೆಗೆ ಒಂದು ಚಮಚ ಈ ಹಣ್ಣಿನ ರಸವನ್ನು ಬೆರೆಸಿ ಹಚ್ಚಿದರೆ ಮಂಡಿ, ಕೀಲು, ಸೊಂಟ ನೋವು ಶಾಶ್ವತವಾಗಿ ದೂರವಾಗುವುದು! ಒಮ್ಮೆ ಟ್ರೈ ಮಾಡಿ ನೋಡಿ   title=

ಬೆಂಗಳೂರು : ವಯಸ್ಸಾದಂತೆ ಕೀಲು ನೋವು, ಮಂಡಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಯೌವನದಲ್ಲಿಯೂ ಈ ಸಮಸ್ಯೆ ಕಾಡುತ್ತಿದ್ದರೆ ಅದು ನಿಮ್ಮ ಮೂಳೆಗಳು ದುರ್ಬಲಗೊಳ್ಳುತ್ತಿರುವ ಸಂಕೇತವಾಗಿದೆ. ಹೀಗಾದಾಗ ಜೀವನಶೈಲಿಯನ್ನು ಸುಧಾರಿಸುವ ಅವಶ್ಯಕತೆಯಿದೆ.ಕೀಲು ನೋವಿಗೆ ಹಲವಾರು ಔಷಧಿಗಳು ಮತ್ತು ಎಣ್ಣೆಗಳು ಲಭ್ಯವಿದ್ದರೂ,ಕೆಲವು ಸರಳ ಮನೆಮದ್ದುಗಳ ಸಹಾಯದಿಂದ ಈ ನೋವಿನಿಂದ ಮುಕ್ತಿ ಪಡೆಯಬಹುದು. 

ಅರಿಶಿನ ಮತ್ತು ಹಾಲು : 
ಅರಿಶಿನವು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಕೀಲು ನೋವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.  ಒಂದು ಚಮಚ ಅರಿಶಿನ ಪುಡಿಯನ್ನು ಒಂದು ಲೋಟ ಬಿಸಿ ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ದೇಹದಲ್ಲಿನ ಊತ ಕಡಿಮೆಯಾಗುತ್ತದೆ.ಇದನ್ನು ಪ್ರತಿದಿನ ಬೆಳಗ್ಗೆ ಕುಡಿದರೆ ಒಳ್ಳೆಯ ರಿಸಲ್ಟ್ ಸಿಗುತ್ತದೆ. 

ಇದನ್ನೂ ಓದಿ : ಜೀವನಶೈಲಿಯು ಮಾತ್ರವಲ್ಲ, ಈ ವಿಟಮಿನ್ ಕೊರತೆಯು ಅಧಿಕ ಕೊಲೆಸ್ಟ್ರಾಲ್ ಮಟ್ಟಕ್ಕೆ ಕಾರಣವಾಗುತ್ತೆ!

ಶುಂಠಿ : 
ಶುಂಠಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.ಇದು ಕೀಲು ನೋವನ್ನು ಕಡಿಮೆ ಮಾಡುತ್ತದೆ.ಶುಂಠಿ ಚಹಾ ಅಥವಾ ಶುಂಠಿ ತುಂಡುಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದಲೂ ಮಂದಿ ನೋವು, ಕೀಲು ನೋವು, ಸೊಂಟ ನೋವಿನಿಂದ ಪಯ್ಯಾರ ಸಿಗುತ್ತದೆ.ಶುಂಠಿ ಪೇಸ್ಟ್ ಅನ್ನು ನೋವಿರುವ ಜಾಗಕ್ಕೆ ಹಚ್ಚಿದರೂ ಪ್ರಯೋಜನವಾಗುವುದು. 

ನಿಂಬೆ ರಸ ಮತ್ತು ಆಲಿವ್ ಎಣ್ಣೆ : 
ನಿಂಬೆ ರಸ ಮತ್ತು ಆಲಿವ್ ಎಣ್ಣೆಯ ಮಿಶ್ರಣವನ್ನು ಹಚ್ಚುವುದರಿಂದ ಮಂಡಿ, ಕೀಲು ನೋವಿನಿಂದ ಆರಾಮ ಸಿಗುತ್ತದೆ. ಈ ಮಿಶ್ರಣವು ದೇಹದಲ್ಲಿ ರಕ್ತ ಪರಿಚಲನೆಯನ್ನು  ಸುಧಾರಿಸುತ್ತದೆ.ಒಂದು ಚಮಚ ನಿಂಬೆ ರಸ ಮತ್ತು ಒಂದು ಚಮಚ ಆಲಿವ್ ಎಣ್ಣೆಯನ್ನು ಬೆರೆಸಿ ನೋವು ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ.ಪ್ರತಿದಿನ ಮಾಡುವುದರಿಂದ ಉತ್ತಮ ಪ್ರಯೋಜನವಾಗುತ್ತದೆ.

ಇದನ್ನೂ ಓದಿ : ಈ ಆರೋಗ್ಯ ಸೂತ್ರಗಳನ್ನು ಪಾಲಿಸಿ..! ಹೃದಯಾಘಾತದಿಂದ ಹೀಗೆ ಪಾರಾಗಿ..!

ಬಿಸಿನೀರಿನ  ಶಾಖ : 
ಹಾಟ್ ವಾಟರ್ ಫೋಮೆಂಟೇಶನ್ ಸರಳ ಉಪಾಯವಾದರೂ ಪರಿಣಾಮಕಾರಿ ಪರಿಹಾರವಾಗಿದೆ.ಬೆಚ್ಚಗಿನ ನೀರಿನಲ್ಲಿ ಸ್ವಚ್ಛವಾದ ಬಟ್ಟೆಯನ್ನು ನೆನೆಸಿ, ಅದನ್ನು ಹಿಸುಕಿ ಮತ್ತು ನೋವಿನ ಜಾಗಕ್ಕೆ  ಇಡಬೇಕು.ರಕ್ತ ಪರಿಚಲನೆ ಹೆಚ್ಚಿಸಳು ಇದು ಸಹಾಯ ಮಾಡುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News